ಭೂಗತ ಪಾತಕಿ ದಾವೂದ್ ಬಂಟ ಅರೆಸ್ಟ್

By Suvarna Web DeskFirst Published Mar 8, 2018, 3:22 PM IST
Highlights

ಭೂಗತ ಪಾತಕಿ ದಾವೂದ್ ಇಬ್ರಾಹಿಂ  ಬಂಟನೊಬ್ಬನ್ನು ದುಬೈನಿಂದ ಮುಂಬಯಿಗೆ ಕರೆತರಲಾಗುತ್ತಿದೆ.

ದುಬೈ :  ಭೂಗತ ಪಾತಕಿ ದಾವೂದ್ ಇಬ್ರಾಹಿಂ  ಬಂಟನೊಬ್ಬನ್ನು ದುಬೈನಿಂದ ಮುಂಬಯಿಗೆ ಕರೆತರಲಾಗುತ್ತಿದೆ.

1993ರ ಮುಂಬೈ ಸ್ಫೋಟದ ಬಳಿಕ ಭಾರತದಿಂದ ಈತ ತಪ್ಪಿಸಿಕೊಂಡು ಪಲಾಯನ ಮಾಡಿದ್ದ ಎನ್ನಲಾಗಿದೆ.  ಇಲ್ಲಿಂದ ಪರಾರಿಯಾಗಿದ್ದ ಫಾರೂಕ್ ಟಕ್ಲಾ ವಿರುದ್ಧ 1995ರಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿತ್ತು.

ಈತನನ್ನು ಮುಂಬಯಿಯ ಕರೆತಂದ ಬಳಿಕ ಸಿಬಿಐ ಅಧಿಕಾರಿಗಳು ಈತನನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಬಳಿಕ ತನನ್ನು ಟಾಡಾ ಕೋರ್ಟ್’ಗೆ ಹಾಝರುಪಡಿಸಲಾಗಿತ್ತದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿದ ಹಿರಿಯ ವಕೀಲರಾದ ಉಜ್ವಲ್ ನಿಕಮ್ ಟಾಕ್ಲಾ ಬಂಧನದಿಂದ ದಾವೂದ್ ಗ್ಯಾಂಗ್’ಗೆ ಬಲವಾದ ಹಿನ್ನಡೆ ಉಂಟಾಗಿದೆ ಎಂದು ಹೇಳಿದ್ದಾರೆ.

ದಾವೂದ್ ಕೂಡ ಭಾರತಕ್ಕೆ ವಾಪಸಾಗಲು ಕೆಲವು ಷರತ್ತುಗಳನ್ನು ಹಾಕಿದ್ದ. ಆದರೆ ಭಾರತ ಸರ್ಕಾರ  ಷರತ್ತುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಲಾಗಿತ್ತು.

click me!