
ಮುಂಬೈ(ಮಾ.06): ಕುಖ್ಯಾತ ಪಾತಕಿ 1993 ಮುಂಬೈ ದಾಳಿ ಪ್ರಕರಣದ ಪ್ರಮುಖ ರೂವಾರಿ ದಾವೂದ್ ಇಬ್ರಾಹಿಂ ಭಾರತಕ್ಕೆ ಶರಣಾಗಲು ಗ್ರೀನ್ ಸಿಗ್ನಲ್ ನೀಡಿದ್ದಾನೆ.
ದೇಶದಲ್ಲಿ ಹಲವು ವಿಧ್ವಂಸಕ ಕೃತ್ಯಗಳಿಗೆ ಕಾರಣವಾಗಿರುವ ದಾವೂದ್ ಇಬ್ರಾಹಿಂ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ನಂತರ ದೇಶ ಬಿಟ್ಟು ಪರಾರಿಯಾಗಿದ್ದಾನೆ. ದವೂದ್ ಇಬ್ರಾಹಿಂ ಸೋದರ ಇಕ್ಬಾಲ್ ಕಸ್ಕರ್ ಪರ ವಕೀಲ ಈ ಹೇಳಿಕೆ ನೀಡಿದ್ದಾರೆ.
ಸದ್ಯ ಪಾಕ್'ನ ಕರಾಚಿಯಲ್ಲಿ ಪಾತಕಿ ತಲೆಮರೆಸಿಕೊಂಡಿದ್ದು ಶರಣಾಗಲು ಹಲವು ಷರತ್ತು ವಿಧಿಸಿದ್ದು ಅದರಲ್ಲಿ ಭಾರತದ ಖ್ಯಾತ ವಕೀಲರಾದ ರಾಮ್ ಜೇಟ್ಮಲಾನಿ ಈತನ ಪರ ವಕಾಲತ್ತು ವಹಿಸಬೇಕೆನ್ನುವುದು ಪ್ರಮುಖ ಷರತ್ತಾಗಿದೆ. ಇತ್ತೀಚಿಗೆ ಕೆಲ ತಿಂಗಳ ಹಿಂದೆ ಇನ್ನೊಬ್ಬ ಕುಖ್ಯಾತ ಪಾತಕಿ ಚೋಟಾ ರಾಜನ್ ಭಾರತಕ್ಕೆ ಶರಣಾಗಿದ್ದ.
ಈತ ಭಾರತಕ್ಕೆ ಶರಣಾಗಲು ಪ್ರಧಾನಿ ನರೇಂದ್ರ ಮೋದಿಯ ಪ್ರಮುಖ ಕಾರಣವಂತೆ. ಸರ್ಜಿಕಲ್ ಸ್ಟ್ರೈಕ್ ಮೂಲಕ ತನ್ನ ಹತ್ಯೆಯಾಗಬಹುದೆಂಬ ಭಯ ಆತನಲ್ಲಿ ಕಾಡಿದೆ. ಕೆಲ ತಿಂಗಳ ಹಿಂದೆ ದಾವೂದ್ ಬಲಗೈ ಬಂಟ ಚೋಟಾ ಶಕೀಲ್ ಹತ್ಯೆಯಾಗಿರುವ ಸುದ್ದಿ ಹರಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.