
ನವದೆಹಲಿ (ಅ.31): ಭೂಗತ ಪಾತಕಿಗಳಾದ ಛೋಟಾ ರಾಜನ್, ಅಬು ಸಲೇಂ ಹಲವು ಕಾರಣಗಳನ್ನು ಮುಂದಿಟ್ಟುಕೊಂಡು ದೇಶಕ್ಕೆ ಬಂದು, ವಿಚಾರಣೆ ಎದುರಿಸುತ್ತಿದ್ದಾರೆ. ಅದೇ ದಾರಿಯನ್ನು ದಾವೂದ್ ಇಬ್ರಾಹಿಂ ಅನುಸರಿಸಲಿದ್ದಾನೆಯೇ? ಹೌದು ಎನ್ನುತ್ತವೆ ಮೂಲಗಳು. ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಹೇಳಲಾಗಿರುವ ಆತನಿಗೆ ಕೊನೆಯ ಪಕ್ಷ ಮೃತದೇಹವನ್ನು ಸ್ವದೇಶದಲ್ಲಿಯೇ ಮಣ್ಣು ಮಾಡಬೇಕೆಂಬ ಆಶಯ ಹೊಂದಿದ್ದಾನಂತೆ ಎಂದು ‘ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.
ಒಂದು ವೇಳೆ ಆತ ಮರಳಿದರೆ ಪಾಕಿಸ್ತಾನದ ಸೇನೆ ಮತ್ತು ರಾಜಕೀಯ ನಾಯಕರ ದ್ವಂದ್ವ ನಿಲುವು ಬಯಲು ಮಾಡಲು ಸಾಧ್ಯವಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಕೇಂದ್ರ ಸರ್ಕಾರ ಯುಇಎ ಮೇಲೆ ಒತ್ತಡ ಹಾಕಿದ್ದರಿಂದ .10 ಸಾವಿರದಿಂದ .15 ಸಾವಿರ ಕೋಟಿ ಮೌಲ್ಯದಷ್ಟುದಾವೂದ್ ಇಬ್ರಾಹಿಂ ಹೊಂದಿರುವ ಬೇನಾಮಿ ಆಸ್ತಿ ಮೇಲೆ ಕಾನೂನು ಕ್ರಮ 2015ರಿಂದ ಆರಂಭವಾಗಿದೆ. ಏಳು ತಿಂಗಳಿನಿಂದ ಈಚೆಗೆ ಅದರ ಬಗ್ಗೆ ಆ ಕಾರ್ಯವೂ ಪ್ರಗತಿಯಲ್ಲಿದೆ. ಯುಎಇ ಕೈಗೊಂಡ ಕ್ರಮದಿಂದಾಗಿ ಪಾಕಿಸ್ತಾನಕ್ಕೆ ತೀವ್ರ ಅಸಮಾಧಾನ ಉಂಟಾಗಿದೆ ಎಂದು ಪತ್ರಿಕೆ ತನ್ನ ವರದಿಯಲ್ಲಿ ಹೇಳಿಕೊಂಡಿದೆ.
ಪಾಕಿಸ್ತಾನ ಸೇನೆ ಮತ್ತು ಐಎಸ್‌ಐನಿಂದಲೇ ಕೊಲ್ಲಲ್ಪಡುವ ಬಗ್ಗೆ ಭೂಗತ ಪಾತಕಿಗೆ ಭಯ ಇದ್ದೇ ಇದೆ. ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕ ಎಂದು ಘೋಷಣೆಗೆ ಒಳಗಾದ ಬಳಿಕ ದಾವೂದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕ್ ಸರ್ಕಾರದ ವಿರುದ್ಧ ಒತ್ತಡ ಹೆಚ್ಚುತ್ತಿದೆ. ಅನಾರೋಗ್ಯದಿಂದ ಬಳಲುತ್ತಿರುವ ಭೂಗತ ಪಾತಕಿಗೆ ಸೂಕ್ತ ಚಿಕಿತ್ಸೆ ದೊರಕದೇ ಇದ್ದಲ್ಲಿ ಆತ ಬಹುಅಂಗ ವೈಫಲ್ಯದಿಂದ ಅಸುನೀಗುವ ಸಾಧ್ಯತೆ ಹೆಚ್ಚು. ಅನಾರೋಗ್ಯಕ್ಕೆ ಒಳಗಾಗಿದ್ದರೂ ನೆರೆಯ ರಾಷ್ಟ್ರದಲ್ಲಿ ಆತನಿಗೆ ಸಹಾಯ ಮಾಡುವ ಪ್ರಭಾವ ಶಾಲಿಗಳು ಇದ್ದಾರೆ ಎಂದು ಅದು ತನ್ನ ವರದಿಯಲ್ಲಿ ಹೇಳಿಕೊಂಡಿದೆ.
ದೇಶದ ಗುಪ್ತಚರ ಸಂಸ್ಥೆಗಳು ನಕಲಿ ಪಾಸ್‌ಪೋರ್ಟ್ ಮೂಲಕ ದಾವೂದ್ ಇಬ್ರಾಹಿಂ ಬೇರೆ ದೇಶಕ್ಕೆ ತೆರಳುವ ಪ್ರಯತ್ನ ಮಾಡುತ್ತಿದ್ದಾನೆಯೇ ಎಂಬ ಬಗ್ಗೆ ನಿಗಾ ಇರಿಸಿವೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.