‘ಚಂದ್ರನ ಅಂಗಳ ಮುತ್ತಿಕ್ಕಿದ್ದು ಬೊಗಳೆ’: ಇದೇನು ಹೊಸ ವರಸೆ?

First Published May 23, 2018, 4:31 PM IST
Highlights

ಮಾನವ ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನ ನೆಲವನ್ನು ಮುತ್ತಿಕ್ಕಿ ಮುಂದಿನ ವರ್ಷಕ್ಕೆ ಭರ್ತಿ 50 ವರ್ಷಗಳು ಪೂರೈಸುತ್ತವೆ. 1969 ರಲ್ಲಿ ನಾಸಾದ ಅಪಲೋ 11 ಮಿಷನ್ ಚಂದ್ರನ ಅಂಗಳಕ್ಕೆ ಮಾನವನನ್ನು ಇಳಿಸಿ ಇತಿಹಾಸ ಸೃಷ್ಟಿಸಿತ್ತು. ಆದರೆ ಅಂದಿನಿಂದಲೂ ಈ ಕುರಿತು ಅನುಮಾನಗಳೂ ಹೊಗೆಯಾಡುತ್ತಲಿದೆ.

 ವಾಷಿಂಗ್ಟನ್ (ಮೇ. 23): ಮಾನವ ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಚಂದ್ರನ ನೆಲವನ್ನು ಮುತ್ತಿಕ್ಕಿ ಮುಂದಿನ ವರ್ಷಕ್ಕೆ ಭರ್ತಿ  50 ವರ್ಷಗಳು ಪೂರೈಸುತ್ತವೆ. 1969 ರಲ್ಲಿ ನಾಸಾದ ಅಪಲೋ 11 ಮಿಷನ್ ಚಂದ್ರನ ಅಂಗಳಕ್ಕೆ ಮಾನವನನ್ನು ಇಳಿಸಿ ಇತಿಹಾಸ ಸೃಷ್ಟಿಸಿತ್ತು. ಆದರೆ ಅಂದಿನಿಂದಲೂ ಈ ಕುರಿತು ಅನುಮಾನಗಳೂ ಹೊಗೆಯಾಡುತ್ತಲಿದೆ.

ನಾಸಾದ ಅಪೊಲೋ ಮಿಷನ್ ಒಂದು ಸುಳ್ಳುಗಳ ಸರಮಾಲೆ ಎಂದು ವಾದಿಸುವವರಿಗೇನೂ ಕಡಿಮೆಯಿಲ್ಲ. ಇದೀಗ ಈ ಸಾಲಿಗೆ ಪ್ಲ್ಯಾನೆಟ್ ಎಕ್ಸ್ ಸಿದ್ದಾಂತ ಮಂಡಿಸಿದ ಡೆವಿಡ್ ಮಿಡೇ ಸೇರಿದ್ದಾರೆ.  ಅಪೊಲೋ ಮಿಷನ್ ಅಮೆರಿಕ ಸರ್ಕಾರವೇ ಹೆಣೆದ ಸುಳ್ಳಿನ ಮಹಾಕತೆ ಎಂದು ಡೆವಿಡ್ ಆರೋಪಿಸಿದ್ದಾರೆ. ಇದಕ್ಕೆ ತಮ್ಮದೇ ಆದ ಕಾರಣಗಳನ್ನು ನೀಡಿರುವ ಅವರು, ಬಾಹ್ಯಾಕಾಶ ಸ್ಪರ್ಧೆಯಲ್ಲಿ ರಷ್ಯಾವನ್ನು ಮೂಲೆಗುಂಪು ಮಾಡಲು ಬಯಸಿದ್ದ ಅಮೆರಿಕ ನಕಲಿ ವಿಡಿಯೋ ಸೃಷ್ಟಿಸಿತ್ತು ಎಂದು ಗುಡುಗಿದ್ದಾರೆ.

ಭೂಮಿಯ ಆಯಸ್ಕಾಂತೀಯ ವಲಯ ದಾಟಲು ಬೇಕಾದ ಸುಸಜ್ಜಿತ ಸಲಕರಣೆಗಳೇ ಇಲ್ಲದೇ ಅಪೊಲೋ ಅದೇಗೆ ಚಂದ್ರನತ್ತ ಪಯಣ ಬೆಳೆಸಿತು ಎಂದು ಡೆವಿಡ್ ಪ್ರಶ್ನಿಸಿದ್ದಾರೆ. ಅಲ್ಲದೇ ಖಗೋಳ ಯಾತ್ರಿಗಳ ಧಿರಿಸುಗಳೂ ಕೂಡ ಆಯಸ್ಕಾಂತೀಯ ವಲಯದ ತಾಪಮಾನ ತಡೆದುಕೊಳ್ಳಲು ಶಕ್ತವಾಗಿರಲಿಲ್ಲ ಎಂದು ಅವರು ವಾದ ಮಂಡಿಸಿದ್ದಾರೆ.

click me!