ಪಾಕಿಸ್ತಾನ ರಾಜಕೀಯದಲ್ಲಿ ನಮ್ಮ ದಾವಣಗೆರೆಯ ಕೋತಿ ಫುಲ್ ಫೇಮಸ್ ಆಗಿದೆ. ಅದಕ್ಕೆ ಕಾರಣವೇನು ಗೊತ್ತೆ.?
ಇಸ್ಲಾಮಾಬಾದ್: ಇತ್ತೀಚೆಗೆ ಕರ್ನಾಟಕದ ದಾವಣಗೆರೆ ಯಲ್ಲಿ ಬಸ್‌ಚಾಲಕನೊಬ್ಬ ಮಂಗನ ಕೈಗೆ ಬಸ್‌ನ ಸ್ಟೇರಿಂಗ್ ಕೊಟ್ಟು ಕುಳಿತ ವಿಡಿಯೋವೊಂದು ಭಾರೀ ವೈರಲ್ ಆಗಿತ್ತು.
ಈ ವಿಡಿಯೋವನ್ನು ಮುಂದಿಟ್ಟು ಕೊಂಡು ಪಾಕಿಸ್ತಾನದ ಮೌಲಾನಾ ಫಜ್ಲುಲ್ ರೆಹಮಾನ್ ಎಂಬ ರಾಜಕಾರಣಿ, ಪ್ರಧಾನಿ ಇಮ್ರಾನ್ ಖಾನ್‌ಗೆ ಟಾಂಗ್ ಕೊಟ್ಟಿದ್ದಾರೆ. ಕಾರ್ಯಕ್ರಮವೊಂದ ರಲ್ಲಿ ಮಾತನಾಡಿದ ಫಜ್ಲುಲ್ ‘ಇತ್ತೀಚೆಗೆ ವಿಡಿಯೋ ವೊಂದನ್ನು ನೋಡಿದೆ.
ಅದರಲ್ಲಿ ಬಸ್ ಚಾಲಕ, ಮಂಗ ನ ಕೈಗೆ ಸ್ಟೇರಿಂಗ್ ಕೊಟ್ಟಿದ್ದ. ಆದರೆ ಹಿಂದೆ ತಾನೇ ಕುಳಿತುಕೊಂಡು ಬಸ್ ಓಡಿಸುತ್ತಿದ್ದ. ಆದರೆ ಮಂಗ, ತಾನೇ ಬಸ್ ಓಡಿಸುತ್ತಿದ್ದೇನೆ ಎಂಬ ಭ್ರಮೆಯಲ್ಲಿತ್ತು. ಇಲ್ಲಿಯೂ ಹೀಗೆ ಆಗಿರುವುದನ್ನು ನೀವು ನೋಡಿರಬ ಹುದು ಎಂದು ವ್ಯಂಗ್ಯವಾಡಿದ್ದಾರೆ.
ಈ ಮೂಲಕ, ಪಾಕಿಸ್ತಾನದಲ್ಲಿ ಇಮ್ರಾನ್ ಪ್ರಧಾನಿಯಾಗಿದ್ದರೂ, ಅವರ ಹಿಂದೆ ಕುಳಿತುಕೊಂಡು ಸೇನೆ ಸರ್ಕಾರ ನಡೆಸುತ್ತಿದೆ ಎಂದು ಟಾಂಗ್ ನೀಡಿದ್ದಾರೆ.