ದರ್ಶನ್ ಕಾರು ಅಪಘಾತ; ಈ ಆರರ ಹಿಂದಿದೆ ಸತ್ಯ!

Published : Sep 24, 2018, 06:29 PM ISTUpdated : Sep 24, 2018, 06:33 PM IST
ದರ್ಶನ್ ಕಾರು ಅಪಘಾತ; ಈ ಆರರ ಹಿಂದಿದೆ ಸತ್ಯ!

ಸಾರಾಂಶ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತವಾಗಿದೆ. ಅಭಿಮಾನಿಗಳಲ್ಲಿ ಬೆಳಗ್ಗೆಯಿಂದಲೇ ಆತಂಕ ಮನೆ ಮಾಡಿತ್ತು. ಇದೀಗ ಗಾಯಗೊಂಡಿರುವ ದರ್ಶನ್, ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ದರ್ಶನ್ ಕಾರಿನಲ್ಲಿ ಇದ್ದವರು ಎಷ್ಟು? ಎಂಬ ಪ್ರಶ್ನೆಯೂ ಮೂಡಿದ್ದು ಅದಕ್ಕೆ ತಕ್ಕ ಉತ್ತರ ಸದ್ಯಕ್ಕೆ ಸಿಗುತ್ತಿಲ್ಲ.

ಮೈಸೂರು[ಸೆ.24]  ಮೊದಲು ದರ್ಶನ್ ಕಾರನ್ನು ಚಾಲಕ ಚಲಾಯಿಸುತ್ತಿದ್ದರು ಎಂದು ಹೇಳಲಾಗಿತ್ತು. ಅಂದರೆ ಅಲ್ಲಿಗೆ ವಾಹನದಲ್ಲಿ ನಾಲ್ಕು ಜನ ಇರಬೇಕು ಎಂದು ಲೆಕ್ಕ. ಹಾಗಾದರೆ  ಒಂದಿಷ್ಟು ಪ್ರಶ್ನೆಗಳು ಹಾಗೆ ಇವೆ?

1. ಅಪಘಾತವಾದ ಕಾರಿನಲ್ಲಿ ಇದ್ದ ಒಟ್ಟು ಜನರೆಷ್ಟು?
2. ದರ್ಶನ್, ದೇವರಾಜ್ ಮತ್ತು ಪ್ರಜ್ವಲ್ ದೇವರಾಜ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ವೇಳೆ ಚಾಲಕನೇ ಡ್ರೈವ್ ಮಾಡುತ್ತಿದ್ದರೆ ಅವರು ಎಲ್ಲಿ ಹೋದರು?
3. ಪ್ರತ್ಯಕ್ಷದರ್ಶಿ ಹೇಳಿದ ನಾಲ್ಕನೇ ವ್ಯಕ್ತಿ ಯಾರು?
4. ಅಪಘಾತವಾದ ಸ್ಥಳದಿಂದ 15 ಕಿಮೀ ದೂರ ಚಲಾಯಿಸಲು ಸಾಧ್ಯವಿಲ್ಲದ ಕಾರು ತೆಗೆದುಕೊಂಡು ಹೋದವರು ಯಾರು?
5. ನಂಬರ್ ಪ್ಲೇಟ್ ನಿಜಕ್ಕೂ ಕಿತ್ತು ಬಿದ್ದಿತ್ತಾ?  ಅಥವಾ ತೆಗೆಯಲಾಯಿತಾ?
6. ಹೆದ್ದಾರಿಯಲ್ಲಿ ಇಷ್ಟೆಲ್ಲಾ ಘಟನೆಗಳು ನಡೆದರೂ ಆರಂಭದಲ್ಲಿ ಪೊಲೀಸರಿಗೆ ಗೊತ್ತೆ ಆಗಲಿಲ್ವಾ?

ಸದ್ಯಕ್ಕೆ ಈ ಯಾವ ಪ್ರಶ್ನೆಗಳಿಗೂ ಉತ್ತರ ಇಲ್ಲ.

ದರ್ಶನ್ ಕಾರು ಅಪಘಾತದ ಎಲ್ಲ ಸುದ್ದಿಗಳು

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

20 ವರ್ಷಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದ ವೃದ್ಧ ದಂಪತಿಯನ್ನ ಒಂದುಗೂಡಿಸಿದ ಲೋಕ ಅದಾಲತ್!
ಮೋನಿಕಾ ಜೊತೆ ಪೊಲೀಸಪ್ಪನ ಅಕ್ರಮ ಸಂಬಂಧ ಕೇಸ್‌ಗೆ ಟ್ವಿಸ್ಟ್, ಕಿಚುಕಿಚುಮಾ ಎಂದ ರೀಲ್ಸ್ ರಾಣಿ