ಆಪರೇಷನ್ ಫೇಲ್: ಪರಿಷತ್ ಚುನಾವಣಾ ಕಣದಿಂದ ಹಿಂದೆ ಸರಿದ ಬಿಜೆಪಿ

Published : Sep 24, 2018, 05:24 PM ISTUpdated : Sep 24, 2018, 05:38 PM IST
ಆಪರೇಷನ್ ಫೇಲ್: ಪರಿಷತ್ ಚುನಾವಣಾ ಕಣದಿಂದ ಹಿಂದೆ ಸರಿದ ಬಿಜೆಪಿ

ಸಾರಾಂಶ

 ಕರ್ನಾಟಕ ವಿಧಾನಸಭೆಯಿಂದ ವಿಧಾನಪರಿಷತ್ ಗೆ ನಡೆಯಲಿರುವ ಚುನಾವಣೆ ಕಣದಿಂದ ಬಿಜೆಪಿ ಹಿಂದೆ ಸರಿದಿದೆ. 

ಬೆಂಗಳೂರು, [ಸೆ.24]: ಕರ್ನಾಟಕ ವಿಧಾನಸಭೆಯಿಂದ ವಿಧಾನಪರಿಷತ್ ಗೆ ನಡೆಯಲಿರುವ ಚುನಾವಣೆ ಕಣದಿಂದ ಬಿಜೆಪಿ ಹಿಂದೆ ಸರಿದಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಿಂದಾಗಿ ಬಿಜೆಪಿಗೆ ಸಂಖ್ಯಾಬಲ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಪರಿಷತ್ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದೆ.

ಕಳೆದ ಹದಿನೈದು ದಿನಗಳಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ತಾರಕಕ್ಕೇರಿತ್ತು. ಇದರ ಲಾಭ ಪಡೆದುಕೊಳ್ಳು ಬಿಜೆಪಿ ಹಲವು ಮಾಸ್ಟರ್ ಪ್ಲಾನ್ ಗಳನ್ನು ಹೆಣದಿತ್ತು. ಹೇಗಾದರೂ ಮಾಡಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಂದ ಅಡ್ಡಮತದಾನ ಮಾಡಿಸಬೇಕೆಂದು ಬಿಜೆಪಿ ಪ್ಲಾನ್ ಮಾಡಿತ್ತು. ಇದಕ್ಕಾಗಿಯೇ ವಿಧಾನ ಪರಿಷತ್ ಚುನಾವಣೆ ಅಖಾಡಕ್ಕೆ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಿತ್ತು.

ಅಷ್ಟೇ ಅಲ್ಲದೇ ಸಿ.ಪಿ. ಯೋಗೇಶ್ವರ್, ಮಾಲಿಕಯ್ಯ ಗುತ್ತೇದಾರ್ ಹಾಗೂ ಬಿ.ಜೆ. ಪುಟ್ಟಸ್ವಾಮಿ ಅವರ ಹೆಸರಗಳನ್ನು ಸಹ ಅಂತಿಮಗೊಳಿಸಿತ್ತು.  ಆದರೆ, ಕಾಂಗ್ರೆಸ್‌ನಲ್ಲಿ ಎದ್ದಿದ್ದ ಬಂಡಾಯ ಶಮನಗೊಂಡಿದ್ದರಿಂದ ಪರಿಷತ್ ಚುನಾವಣೆಯಲ್ಲಿ ಯಾವುದೇ ವರ್ಕೌಟ್ ಆಗೋಲ್ಲ ಎಂದು ತಿಳಿದ ಬಳಿಕ ಬಿಜೆಪಿ ಕೊನೆಗಳಿಗೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದೆ.

ಡಾ. ಜಿ. ಪರಮೇಶ್ವರ್, ಕೆ.ಎಸ್ ಈಶ್ವರಪ್ಪ ಹಾಗೂ ವಿ. ಸೋಮಣ್ಣ ಅವರು ವಿಧಾನಸಭೆಗೆ ಆಯ್ಕೆಯಾಗಿದ್ದು, 3 ಸ್ಥಾನಗಳಿಗೆ ಇದೇ ಅಕ್ಟೋಬರ್ 3ರಂದು ಚುನಾವಣೆ ನಡೆಯಲಿದೆ. 3 ಸ್ಥಾನಗಳ ಪೖಕಿ ಕಾಂಗ್ರೆಸ್ 2 ಹಾಗೂ ಜೆಡಿಎಸ್ 1 ಸ್ಥಾನವನ್ನು ಹಂಚಿಕೊಂಡಿವೆ. ಇಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಸ್ಸಿ ಭಾರತ ಭೇಟಿ: ರಾಹುಲ್ ಗಾಂಧಿಗೆ ಟಿ-ಶರ್ಟ್ ಉಡುಗೊರೆ ಮೆಸ್ಸಿ, ಬಂಗಾಳದಲ್ಲಿ ಫ್ಯಾನ್ಸ್ ದಾಂಧಲೆ, ಕ್ಷಮೆಯಾಚಿಸಿದ ಮಮತಾ
ಗೆಲುವಿನ ವಿಶ್ವಾಸದಲ್ಲಿ ಬೆಟ್ , ಚುನಾವಣೆ ಫಲಿತಾಂಶ ಉಲ್ಟಾ ಬೆನ್ನಲ್ಲೇ ಮೀಸೆ ಬೋಳಿಸಿದ ಮುಖಂಡ