ದಲಿತ ಅರ್ಚಕನನ್ನು ದೇಗುಲದಿಂದ ತೆಗೆದುಹಾಕಲು ಒಳಸಂಚು

By Web DeskFirst Published Aug 4, 2018, 9:01 PM IST
Highlights

2010ರಲ್ಲಿ ದಿನಕ್ಕೆ 30ರೂ ವೇತನದಂತೆ ತಿರುಚಿ ಜಿಲ್ಲೆಯ ಕನ್ಯಾಮಾಣಿಕಮ್ ಗ್ರಾಮದ ಅರ್ಥಶಾಸ್ತ್ರ ಪದವೀಧರ 34 ವಯಸ್ಸಿನ ಕೆ.ಶಿವಶಂಕರನ್ ಎಂಬುವವರನ್ನು ಧಾರ್ಮಿಕ ಹಾಗೂ ದತ್ತಿ ಮುಜರಾಯಿ ಇಲಾಖೆ ತಾತ್ಕಾಲಿಕ ಅರ್ಚಕನಾಗಿ ನೇಮಿಸಿತ್ತು. 

ಚೆನ್ನೈ[ಆ.04]: ತಮಿಳು ನಾಡಿನ ತಿರುಚಿಯ 13ನೇ ಶತಮಾನದ ಅಮ್ಮನ್ ದೇಗುಲವನ್ನು ಅಲ್ಲಿನ ಅರ್ಚಕ ಕೆ.ಶಿವಶಂಕರನ್ ಕೆಲ ದಿನಗಳ ಹಿಂದೆ ಪ್ರಗತಿಪರರು ಹಾಗೂ ಯುವಕರ ಸಹಾಯದಿಂದ ಜೀರ್ಣೋದ್ಧಾರಗೊಳಿಸಿದ್ದರು. ಆದರೆ ಇವರ ಜಾತಿಯನ್ನು ತಿಳಿದುಕೊಂಡ ಕೆಲ ಗ್ರಾಮಸ್ಥರು ದೇಗುಲದಿಂದ ಪದಚ್ಯುತಗೊಳಿಸಲು ಆಗ್ರಹಿಸುತ್ತಿದ್ದಾರಂತೆ. 

2010ರಲ್ಲಿ ದಿನಕ್ಕೆ 30ರೂ ವೇತನದಂತೆ ತಿರುಚಿ ಜಿಲ್ಲೆಯ ಕನ್ಯಾಮಾಣಿಕಮ್ ಗ್ರಾಮದ ಅರ್ಥಶಾಸ್ತ್ರ ಪದವೀಧರ 34 ವಯಸ್ಸಿನ ಕೆ.ಶಿವಶಂಕರನ್ ಎಂಬುವವರನ್ನು ಧಾರ್ಮಿಕ ಹಾಗೂ ದತ್ತಿ ಮುಜರಾಯಿ ಇಲಾಖೆ ತಾತ್ಕಾಲಿಕ ಅರ್ಚಕನಾಗಿ ನೇಮಿಸಿತ್ತು. ಇದಕ್ಕೂ ಮೊದಲು ಇಲಾಖೆ ಹಮ್ಮಿಕೊಳ್ಳುವ ಪರೀಕ್ಷೆಯನ್ನು ಇವರು ಉತ್ತೀರ್ಣಗೊಳಿಸಿದ್ದರು. 

ಈ ಪ್ರದೇಶದಲ್ಲಿ ನಾಯ್ಡು, ವೆಲ್ಲಾಲಾರ್, ಮುತ್ತುರಾಯರ್ ಹಾಗೂ ರೆಡ್ಡಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದೇ ಸಮುದಾಯದ ವಿದ್ಯಾವಂತರು ಶಿವಶಂಕರನ್ ಅವರಿಗೆ ಬೆಂಬಲ ಸೂಚಿಸಿದರೆ ಸಂಪ್ರದಾಯಸ್ಥ ಮನೋಭಾವವುಳ್ಳವರು  ಅರ್ಚಕ ಹುದ್ದೆಯಿಂದ ಪದಚ್ಯುತಿಗೊಳಿಸಲು ಆಗ್ರಹಿಸುತ್ತಿದ್ದಾರೆ.  4 ದಶಕಗಳಿಂದ ಗ್ರಾಮದ 2 ಗುಂಪುಗಳ ಘರ್ಷಣೆಯಿಂದ ಮುಚ್ಚಲಾಗಿದ್ದ ದೇವಸ್ಥಾನವನ್ನು ಕೆಲ ವರ್ಷಗಳ ಹಿಂದಷ್ಟೆ ತೆರೆಯಲಾಗಿತ್ತು. 

click me!