ಜಯ ಚಿಕಿತ್ಸೆಯ ದಿನಗಳಲ್ಲಿ ಎಲ್ಲ ಸಿಸಿ ಟಿವಿ ಕ್ಯಾಮರಾಗಳನ್ನು ಆಫ್ ಮಾಡಲಾಗಿತ್ತು : ಆಸ್ಪತ್ರೆ ಅಧ್ಯಕ್ಷರಿಂದ ಸ್ಫೋಟಕ ಮಾಹಿತಿ

By Suvarna Web DeskFirst Published Mar 22, 2018, 5:16 PM IST
Highlights

ಜಯಾ ಅವರು ಒಟ್ಟು 24 ಹಾಸಿಗೆಗಳ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಚಿಕಿತ್ಸೆಗೆ ಆಹಮಿಸಿದ ಸಂದರ್ಭದಲ್ಲಿ ಅಲ್ಲಿದ್ದ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು.

ಚೆನ್ನೈ(ಮಾ.22): ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಸಾವಿಗೆ ಕುರಿತಂತೆ ಕೆಲ ಸತ್ಯಗಳನ್ನು ಅಪೊಲೊ ಆಸ್ಪತ್ರೆ ಅಧ್ಯಕ್ಷ ಡಾ. ಪ್ರತಾಪ್ ಸಿ ರೆಡ್ಡಿ ತಿಳಿಸಿದ್ದಾರೆ.

ಆಸ್ಪತ್ರೆಯ ಕೋಲೋರೆಕ್ಟಲ್ ಸಿಂಪೋಸಿಯಮ್ 2018ರ ಪತ್ರಿಕಾಗೋಷ್ಠಿಯ ವೇಳೆ ಮಾತನಾಡಿದ ಅವರು, ಜಯಲಲಿತಾ ಚಿಕಿತ್ಸೆ ಪಡೆದುಕೊಂಡಿದ್ದ 75 ದಿನಗಳ ಕಾಲ ಸಿಸಿ ಟಿವಿ ಕ್ಯಾಮರಾಗಳನ್ನು ಸ್ವಿಚ್ ಆಫ್ ಮಾಡಲಾಗಿತ್ತು' ಎಂದಿ ತಿಳಿಸಿದ್ದಾರೆ.  ಸೆ.22, 2016ರಿಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಂದಿನಿಂದ ಡಿ.5ರ ತನಕ ಸಿಸಿ ಟಿವಿಗಳನ್ನು ಬಂದ್ ಮಾಡಲಾಗಿತ್ತು' ಎಂದು ಮಾಹಿತಿ ನೀಡಿದ್ದಾರೆ.

ಜಯಾ ಅವರು ಒಟ್ಟು 24 ಹಾಸಿಗೆಗಳ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರು ಚಿಕಿತ್ಸೆಗೆ ಆಹಮಿಸಿದ ಸಂದರ್ಭದಲ್ಲಿ ಅಲ್ಲಿದ್ದ ರೋಗಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಕೆಲವೇ ಕೆಲವು ಗಣ್ಯರನ್ನು ಅಗತ್ಯ ಸಂದರ್ಭದಲ್ಲಿ ಹೊರತುಪಡಿಸಿ ಉಳಿದ ಸಂದರ್ಭದಲ್ಲಿ ಅವರಿದ್ದ ಕೊಠಡಿಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ತಜ್ಞ ವೈದ್ಯರು, ಸಿಬ್ಬಂದಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. ಉತ್ತಮ ಚಿಕಿತ್ಸೆಯನ್ನು ಅವರಿಗೆ ನೀಡಿದೆವು ಆದರೆ ದುರದೃಷ್ಟವಶಾತ್ ಅವರು ಬದುಕುಳಿಯಲಿಲ್ಲ' ಎಂದು ವಿಷಾದವ್ಯಕ್ತಪಡಿಸಿದರು.

ಪ್ರಕರಣವು ನ್ಯಾಯಾಲಯದಲ್ಲಿದ್ದು ನ್ಯಾಯಮೂರ್ತಿ ಎ. ಆರ್ಮುಗಸ್ವಾಮಿ ಆಯೋಗ ಸಾವಿನ ತನಿಖೆ ನಡೆಸುತ್ತಿದೆ. ಆಯೋಗಕ್ಕೆ ಪ್ರತಿಯೊಂದು ಮಾಹಿತಿಯನ್ನು ನೀಡಿದ್ದೇವೆ. ವಿಚಾರಣೆಗೆ ಕರೆದರೆ ಮಾಹಿತಿ ನೀಡಲು ಸಿದ್ದವಿರುವುದಾಗಿ ತಿಳಿಸಿದ್ದಾರೆ.

click me!