
ನವದೆಹಲಿ(ನ.11): ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕುಟುಂಬಕ್ಕೆ ನೀಡಿದ್ದ SPG ಕಮಾಂಡೋ ಭದ್ರತೆಯನ್ನು ವಾಪಾಸ್ ಪಡೆದ ಕೇಂದ್ರದ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕಾಂಗ್ರೆಸ್ ನಾಯಕರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ವಿಶೇಷ ಭದ್ರತೆಯನ್ನು ವಾಪಾಸ್ ಪಡೆದ ಒಂದು ವಾರದಲ್ಲೇ ಸೋನಿಯಾ ಗಾಂಧಿ ಕುಟುಂಬಕ್ಕೆ CRPF ಭದ್ರತೆ ನೀಡಲಾಗಿದೆ.
ಇದನ್ನೂ ಓದಿ: ಕೇಂದ್ರದಿಂದ ಶಾಕ್; ಸೋನಿಯಾ ಗಾಂಧಿ ಕುಟುಂಬದ SPG ಭದ್ರತೆ ವಾಪಾಸ್!
ಸೋನಿಯಾ ಗಾಂಧಿ, ಮಕ್ಕಳಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಗೆ ವಿಶೇಷ ರಕ್ಷಣಾ ಪಡೆ(SPG ) ನೀಡಲಾಗಿತ್ತು. ನೇರ ಅಪಾಯ ಇಲ್ಲ ಅನ್ನೋ ಕಾರಣದಿಂದ ಕಳೆದ ವಾರ SPG ಭದ್ರತೆಯನ್ನು ಕೇಂದ್ರ ಸರ್ಕಾರ ವಾಪಾಸ್ ಪಡೆದಿತ್ತು. ಇದೀಗ CRPF ವಿಶೇಷ ಭದ್ರತೆಯನ್ನು ಗಾಂಧಿ ಕುಟುಂಬಕ್ಕೆ ನೀಡಲಾಗಿದೆ.
ಇದನ್ನೂ ಓದಿ: ಗಾಂಧಿಗಳಿಗೆ ಎಸ್‌ಪಿಜಿ ಭದ್ರತೆ ಹೋಗಿದ್ದೇಕೆ? ಸರ್ಕಾರ ಕೊಟ್ಟ ಕಾರಣಗಳಿವು!
CRPF ಕಮಾಂಡೋಗಳು ಗಾಂಧಿ ಕುಟುಂಬಕ್ಕೆ Z+ ಭದ್ರತೆ ನೀಡಲಿದ್ದಾರೆ. ಈ ಕಮಾಂಡೋಗಳು ಅತ್ಯಾಧುನಿಕ ಇಸ್ರೇಲ್ X-95, AK ಸೀರಿಸ್ ಹಾಗೂ MP-5 ಗನ್ ಹೊಂದಿದ್ದಾರೆ. ಸೋನಿಯಾ ಗಾಂಧಿಯ 10 ಜನಪಥ ರಸ್ತೆಯಲ್ಲಿರುವ ಮನೆ, ತುಘಲಕ್ ಲೇನ್‌ನಲ್ಲಿರು ರಾಹುಲ್ ಗಾಂಧಿ ಹಾಗೂ ಲೋಧಿ ಎಸ್ಟೇಟ್‌ನಲ್ಲಿರುವ ಪ್ರಿಯಾಂಕ ಗಾಂಧಿ ಮನೆಯಲ್ಲಿ ಕರ್ತವ್ಯ ಆರಂಭಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.