ಕಾಶ್ಮೀರ ಕಣಿವೆಗೆ 21 ಸಾವಿರ ಹೊಸ ಬುಲೆಟ್'ಗಳನ್ನು ಕಳುಹಿಸಿದ ಸಿಆರ್'ಪಿಎಫ್

By Suvarna Web DeskFirst Published Oct 7, 2017, 7:07 PM IST
Highlights

ಕಾಶ್ಮೀರ ಕಣಿವೆಯಲ್ಲಿ ಗಲಭೆಯನ್ನು ಹತ್ತಿಕ್ಕಲು ಅನುಕೂಲವಾಗಲೆಂದು ನೂತನವಾಗಿ ಅಭಿವೃದ್ಧಿಪಡಿಸಲಾಗಿರುವ 21 ಸಾವಿರ ಪ್ಲಾಸ್ಟಿಕ್ ಬುಲೆಟ್’ಗಳನ್ನು ಸಿಆರ್’ಪಿಎಫ್ ಕಾಶ್ಮೀರಕ್ಕೆ ಕಳುಹಿಸಿಕೊಟ್ಟಿದೆ.

ನವದೆಹಲಿ (ಅ.07): ಕಾಶ್ಮೀರ ಕಣಿವೆಯಲ್ಲಿ ಗಲಭೆಯನ್ನು ಹತ್ತಿಕ್ಕಲು ಅನುಕೂಲವಾಗಲೆಂದು ನೂತನವಾಗಿ ಅಭಿವೃದ್ಧಿಪಡಿಸಲಾಗಿರುವ 21 ಸಾವಿರ ಪ್ಲಾಸ್ಟಿಕ್ ಬುಲೆಟ್’ಗಳನ್ನು ಸಿಆರ್’ಪಿಎಫ್ ಕಾಶ್ಮೀರಕ್ಕೆ ಕಳುಹಿಸಿಕೊಟ್ಟಿದೆ.

ಡಿಆರ್’ಡಿಓ ಬುಲೆಟ್’ಗಳನ್ನು ಅಭಿವೃದ್ಧಿಪಡಿಸಿದ್ದು, ಪುಣೆಯಲ್ಲಿ ತಯಾರಿಸಲಾಗಿದೆ. ಈ ಬುಲೆಟ್’ಗಳು ಕಡಿಮೆ ಮಾರಕವಾದವು. ಇದು ಪೆಲೆಟ್ ಗನ್’ಗಳ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆಗೊಳಿಸುತ್ತದೆ. ಜನದಟ್ಟಣೆಯನ್ನು ನಿಯಂತ್ರಿಸಲು ಇಂತಹ ಮಾರಕೇತರ ಬುಲೆಟ್’ಗಳನ್ನು ಬಳಸಲಾಗುತ್ತದೆ. ಕಾಶ್ಮೀರ ಕಣಿವೆಯಲ್ಲಿ  ಕಲ್ಲು ತೂರಾಟವನ್ನು ನಿಯಂತ್ರಿಸಲು 21 ಸಾವಿರ ಬುಲೆಟ್’ಗಳನ್ನು ನಾವು ಕಳುಹಿಸಿದ್ದೇವೆ ಎಂದು ಸಿಆರ್;ಪಿಎಫ್ ನಿರ್ದೇಶಕ ಆರ್ ಆರ್ ಭಟ್ನಾಗರ್ ಹೇಳಿದ್ದಾರೆ.

click me!