
ಬೆಂಗಳೂರು : ಸ್ಟಾರ್ಟ್ ಅಪ್ ಸೇರಿದಂತೆ ವಿವಿಧ ರಂಗಗಳಲ್ಲಿ ಒಂದು ಕೋಟಿ ಜನರಿಗೆ ಉದ್ಯೋಗ ಸೃಷ್ಟಿಸಲಾ ಗಿದೆ. ಕೇಂದ್ರ ಸರ್ಕಾರವು ಉದ್ಯೋಗವೇ ಸೃಷ್ಟಿಸಿಲ್ಲ ಎಂದು ಹೇಳುವವರು ಮೊದಲು ಇದನ್ನು ತಿಳಿದುಕೊಳ್ಳಬೇಕು ಎಂದು ಕೇಂದ್ರದ ಹಣಕಾಸು ಇಲಾಖೆ ರಾಜ್ಯ ಸಚಿವ ಶಿವ್ ಪ್ರತಾಪ್ ಶುಕ್ಲಾ ತಿಳಿಸಿದರು.
ಭಾರತ್ ನೀತಿ ಸರ್ಕಾರೇತರ ಸಂಸ್ಥೆ ಮತ್ತು ಜೈನ್ ವಿದ್ಯಾಸಂಸ್ಥೆ ಸಹಯೋಗದಲ್ಲಿ ಗುರು ವಾರ ಆಯೋಜಿಸಿದ್ದ ‘ಸ್ಟಾರ್ಟ್ ಅಪ್ ಕಾನ್ ಕ್ಲೇವ್’ ಕಾರ್ಯಕ್ರಮ ಉದ್ಘಾಟಿಸಿ ಮಾತನಾ ಡಿದ ಅವರು, ಕೇಂದ್ರ ಸರ್ಕಾರವು ಸ್ಟಾಟ್ ರ್ಅಪ್ ಯೋಜನೆಗಳಿಗಾಗಿ 10 ಸಾವಿರ ಕೋಟಿ ಮೀಸಲಿಟ್ಟಿದೆ. ನವೋದ್ಯಮಗಳನ್ನ ಆರಂಭಿಸಲು ಇಲ್ಲಿಯವರೆಗೂ ದೇಶಾದ್ಯಂತ 30 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ನವೋದ್ಯಮಗಳನ್ನು ಮುನ್ನೆಲೆಗೆ ತರಲು ಯುಪಿಎ ಎರಡನೇ ಅವಧಿ ಸರ್ಕಾರದಲ್ಲಿ ಹೆಚ್ಚಿನ ಒತ್ತು ನೀಡಿರಲಿಲ್ಲ. ಬಿಜೆಪಿ ಸರ್ಕಾರವು ಸಣ್ಣ ಪುಟ್ಟ ಉದ್ಯಮಗಳಿಗೆ ಸಹಕಾರ ನೀಡುತ್ತಿದೆ. ಜನಧನ್ ಮೂಲಕ ಮನೆ ಮನೆಗೆ ಬ್ಯಾಂಕ್ ಸೇವೆ ನೀಡಲಾಗಿದ್ದು, ಅಂದಾಜು 78 ಸಾವಿರ ಕೋಟಿ ಬ್ಯಾಂಕ್ ಖಾತೆಗಳಲ್ಲಿವೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಅತಿ ವೇಗವಾಗಿ ಆರ್ಥಿಕವಾಗಿ ಸಬಲರಾಗಲು ನವೋದ್ಯಮಗಳು ಸಹಕಾರಿಯಾಗಿವೆ. ಆರ್ಥಿಕ ಇಲಾಖೆ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಪ್ರಸ್ತುತ ಜಾಗತೀಕರಣ ಪ್ರಪಂಚಕ್ಕೆ ನವೋದ್ಯಮವು ಹೆಚ್ಚು ಸೂಕ್ತವಾಗಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್ ಮಾತನಾಡಿ, ಉದ್ಯ ಮಶೀಲತೆಗೆ ತಂತ್ರಜ್ಞಾನವು ಬಹಳ ಮುಖ್ಯ ವಾಗಿದೆ. ಹೆಚ್ಚಿನ ನವೋದ್ಯಮಗಳು ತಂತ್ರಜ್ಞಾನ ಆಧಾರಿತವೇ ಆಗಿವೆ. ಕೇಂದ್ರ ಸರ್ಕಾರವು ಬದ್ಧತೆ, ದೂರದೃಷ್ಟಿಯನ್ನಿಟ್ಟುಕೊಂಡು ನವೋದ್ಯಮಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಉದ್ಯೋಗ ಸೃಷ್ಟಿಸಲಿದೆ ಎಂದು ಆಶ್ಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಭಾರತ್ ನೀತಿ ಸಲಹೆಗಾರ ಜೆ.ಆರ್. ಬಂಗೇರಾ, ಸಂಚಾಲಕ ಅನೂಪ್ ಎ.ಜೆ., ಎಫ್‌ಕೆಸಿಸಿಐ ಉಪಾಧ್ಯಕ್ಷ ಸಿ.ಆರ್. ಜನಾರ್ದನ ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.