ಟಾಟಾ ಗ್ರೂಪ್'ನ ಛೇರ್ಮನ್ ಹುದ್ದೆಗೆ ಏನು ಅರ್ಹತೆ ಬೇಕು?

By Suvarna Web DeskFirst Published Nov 1, 2016, 9:52 AM IST
Highlights

ಬೃಹತ್ ಸಂಸ್ಥೆಯ ಐದಾರು ಅಂಗಸಂಸ್ಥೆಗಳು ನಷ್ಟದಲ್ಲಿರುವ ಹಿನ್ನೆಲೆಯಲ್ಲಿ ನೂತನ ಛೇರ್ಮನ್'ಗೆ ಬಹಳ ದೊಡ್ಡ ಸವಾಲುಗಳು ಎದುರಾಗುವುದು ನಿಶ್ಚಿತ. ಅಂಥ ದಿಟ್ಟ ವ್ಯಕ್ತಿ ಯಾರಾಗಿರಬಹುದು..?

ನವದೆಹಲಿ: ಸೈರಸ್ ಮಿಸ್ತ್ರಿ ತಲೆದಂಡದ ಬಳಿಕ ಟಾಟಾ ಗ್ರೂಪ್'ನಲ್ಲಿ ಛೇರ್ಮನ್ ಹುದ್ದೆಗೆ ತೀವ್ರ ಶೋಧ ನಡೆಯುತ್ತಿದೆ. ಸಾವಿರಾರು ಕೋಟಿ ಮೌಲ್ಯದ ಈ ಬೃಹತ್ ಸಂಸ್ಥೆಯ ಟಾಪ್ ಹುದ್ದೆಗೆ ಸೂಕ್ತ ಅಭ್ಯರ್ಥಿಗಳನ್ನು ಹುಡುಗಿ ಆಯ್ಕೆ ಮಾಡುವುದಕ್ಕಾಗಿಯೇ ಐದು ಸದಸ್ಯರ ಸಮಿತಿಯನ್ನ ರಚಿಸಲಾಗಿದೆ. ಟಾಟಾ ಮುಖ್ಯಸ್ಥ ರತನ್ ಟಾಟಾ ಹಾಗೂ ಈ ಸಮಿತಿ ಒಟ್ಟಾಗಿ ನೂತನ ಛೇರ್ಮನ್'ಗೆ ಹುಡುಕಾಟ ನಡೆಸುತ್ತಿದ್ದಾರೆ. ಈ ಕಾರ್ಯಕ್ಕಾಗಿ ಸಮಿತಿಗೆ 4 ತಿಂಗಳ ಗಡುವು ನೀಡಲಾಗಿದೆ.

ಛೇರ್ಮನ್ ಹುದ್ದೆಗೆ ಅರ್ಹತೆ ಏನು?
* ಸಾಫ್ಟ್'ವೇರ್, ಸ್ಟೀಲ್, ಟೆಲಿಕಾಂ, ಆಟೊಮೋಟಿವ್ ಕ್ಷೇತ್ರಗಳಲ್ಲಿ ಸಾಕಷ್ಟು ಅನುಭವ ಇರಬೇಕು.
* ಚಹಾ ಮತ್ತು ಹೊಟೇಲ್ ಕ್ಷೇತ್ರಗಳ ಅನುಭವ ಇದ್ದರೆ ಪ್ಲಸ್ ಪಾಯಿಂಟ್
* ಒಳ್ಳೆಯ ಇಂಟರ್ನಲ್ ಕಮ್ಯೂನಿಕೇಶನ್ ಸ್ಕಿಲ್ ಇರಬೇಕು
* ಟಾಟಾ ಗ್ರೂಪ್'ನ ವಿವಿಧ ಅಂಗಸಂಸ್ಥೆಗಳ ನಡುವೆ ಜಾಣ್ಮೆಯಿಂದ ವ್ಯವಹರಿಸುವಂತಿರಬೇಕು
* ವಿವಿಧ ಸರಕಾರಗಳೊಂದಿಗಿನ ಸಂಬಂಧವನ್ನು ಜೋಪಾನವಾಗಿ ಕಾಯ್ದುಕೊಳ್ಳುವಂಥ ಕುಟಿಲ ತಂತ್ರಗಾರನಾಗಿರಬೇಕು.

ಮೀಡಿಯಾದಲ್ಲಿ ಸಿದ್ಧವಾಗುತ್ತಿದೆ ಲಿಸ್ಟ್:
ಛೇರ್ಮನ್ ಹುದ್ದೆಗೆ ಸೂಕ್ತವಾದ ಅಭ್ಯರ್ಥಿ ಆಯ್ಕೆಗೆ ಟಾಟಾ ಸಂಸ್ಥೆ ಶುರು ಹಚ್ಚಿಕೊಂಡ ಬೆನ್ನಲ್ಲೇ ವಿವಿಧ ಮಾಧ್ಯಮಗಳಲ್ಲಿ ಈಗಾಗಲೇ ಇಂಥ ಅರ್ಹ ಅಭ್ಯರ್ಥಿಗಳ ಹೆಸರು ಚಾಲನೆಯಲ್ಲಿದೆ. ಇಂಥ ಕೆಲ ಹೆಸರುಗಳ ಪಟ್ಟಿ ಇಲ್ಲಿದೆ.

1) ಇಂದ್ರಾ ನೂಯಿ, ಪೆಪ್ಸಿಕೋ ಮುಖ್ಯಸ್ಥೆ
2) ಎನ್.ಚಂದ್ರಶೇಖರನ್, ಸಿಇಓ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್
3) ರಾಲ್ಫ್ ಸ್ಪೆತ್, ಜಾಗ್ವಾರ್ ಲ್ಯಾಂಡ್ ರೋವರ್ ಅಧ್ಯಕ್ಷರು
4) ನೋಯೆಲ್ ಟಾಟಾ, ಟಾಟಾದ ಅಂಗಸಂಸ್ಥೆ ಟ್ರೆಂಟ್'ನ ಛೇರ್ಮನ್ (ಇವರು ರತನ್ ಟಾಟಾ ಅವರ ಮಲಸಹೋದರರಾಗಿದ್ದಾರೆ)
5) ಅರುಣ್ ಸರಿನ್, ಮಾಜಿ ವೊಡಾಫೋನ್ ಗ್ರೂಪ್'ನ ಮುಖ್ಯಸ್ಥರು

ಈ ಮೇಲಿನ ಪಟ್ಟಿ ಒಂದು ಸ್ಯಾಂಪಲ್ ಅಷ್ಟೇ. ಇನ್ನೂ ಬಹಳಷ್ಟು ಹೆಸರುಗಳು ವಿವಿಧ ಮಾಧ್ಯಮಗಳಲ್ಲಿ ಓಡಾಡುತ್ತಿವೆ. ಟಾಟಾ ಸಂಸ್ಥೆಯ ಛೇರ್ಮನ್ ಆಗಿ ಯಾರಾದರೂ ಸರ್'ಪ್ರೈಸ್ ಎಂಟ್ರಿ ಕೊಟ್ಟರೂ ಕೊಡಬಹುದು. ಆ ಬೃಹತ್ ಸಂಸ್ಥೆಯ ಐದಾರು ಅಂಗಸಂಸ್ಥೆಗಳು ನಷ್ಟದಲ್ಲಿರುವ ಹಿನ್ನೆಲೆಯಲ್ಲಿ ನೂತನ ಛೇರ್ಮನ್'ಗೆ ಬಹಳ ದೊಡ್ಡ ಸವಾಲುಗಳು ಎದುರಾಗುವುದು ನಿಶ್ಚಿತ. ಅಂಥ ದಿಟ್ಟ ವ್ಯಕ್ತಿ ಯಾರಾಗಿರಬಹುದು..?

click me!