
ಬೆಂಗಳೂರು(ಜ.09): ಕಡೆಗೂ ಪೆಟ್ರೋಲ್ ಮಾಲೀಕರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ. ಇಂದಿನಿಂದ ಜಾರಿಯಾಗಬೇಕಿದ್ದ ಸರ್ಚಾರ್ಜ್ ಐದು ದಿನಗಳ ಕಾಲ ಮುಂದೂಡಿಕೆಯಾಗಿದೆ. ಮುಂದಿನ ಶುಕ್ರವಾರದ ತನಕ ಎಂಡಿಆರ್ ಶುಲ್ಕ ವಿಧಿಸದಂತೆ ಬ್ಯಾಂಕ್ಗಳಿಗೆ ಕೇಂದ್ರ ಸರ್ಕಾರ ಮನವಿ ಮಾಡಿದ್ದು ಗ್ರಾಹಕರು ನಿಟ್ಟುಸಿರು ಬಿಟ್ಟಿದ್ದಾರೆ.
ಡಿಜಿಟಲೀಕರಣ, ಕ್ಯಾಶ್ ಲೆಸ್ ವ್ಯವಹಾರ. ಪ್ರಧಾನಿ ನರೇಂದ್ರ ಮೋದಿ ಬಹುದಿನದ ಕನಸು, ನೋಟ್ಬ್ಯಾನ್ ಬಳಿಕ ಈ ವಿಚಾರದಲ್ಲಿ ಜನ ಕೂಡ ತಲೆಯಾಡಿಸುವ ಹೊತ್ತಿಗೆ ಪೆಟ್ರೋಲ್ ಬಂಕ್ ಮಾಲೀಕರು ಶಾಕ್ ನೀಡಲು ಮುಂದಾಗಿದ್ದರು. ನಿನ್ನೆ ಮಧ್ಯರಾತ್ರಿಯಿಂದಲೇ ಪೆಟ್ರೋಲ್ ಬಂಕ್ಗಳಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡ್ ಸ್ವೀಕರಿಸಲ್ಲ.. ಬ್ಯಾಂಕ್ಗಳು ಸರ್ಚಾರ್ಜ್ ವಿಧಿಸುತಿವೆ. ನಮ್ಮ ಜೇಬಿಂದ ಯಾಕ್ ಕಟ್ಟಬೇಕು ಅಂತ ಬಂಕ್ ಮಾಲೀಕರು ಧರಣಿಗೆ ಮುಂದಾಗಿದ್ದರು.
ಮಧ್ಯ ಪ್ರವೇಶಿಸಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್: ಪೆಟ್ರೋಲಿಯಂ ಸಚಿವರಿಂದ ಸಮಸ್ಯೆ ಬಗೆಹರಿಸುವ ಭರವಸೆ
ಯಾವಾಗ ಬೆಂಗಳೂರು ಸೇರಿ ದೇಶಾದ್ಯಂತ ಪೆಟ್ರೋಲ್ ಮಾಲೀಕರ ಧರಣಿಯ ಮಾತುಗಳು ಕೇಳ್ ಬಂತೋ, ಈಗಾಗಲೇ ದುಡ್ಡಿಲ್ಲದೆ ಪರದಾಡುತ್ತಿರುವ ಗ್ರಾಹಕರು ಕೂಡ ಕಂಗಾಲಾಗಿದ್ದರು. ಈ ಬಗ್ಗೆ ಕೇಂದ್ರ ಸಚಿವ ಅನಂತಕುಮಾರ್ ಸಹೋದ್ಯೋಗಿಗಳಾದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹಾಗೂ ಕೇಂದ್ರ ಸಾರಿಗೆ ಮಂತ್ರಿ ನಿತಿನ್ ಗಡ್ಕರಿ ಜೊತೆ ಸಾಧಕ-ಬಾಧಕಗಳ ಬಗ್ಗೆ ಸುದೀರ್ಘವಾಗಿ ಸಮಾಲೋಚಿಸಿದರು.
ಶುಕ್ರವಾರದ ತನಕ ಪ್ಲಾಸ್ಟಿಕ್ ಮನಿ ಸ್ವೀಕಾರ
ಇದರಿಂದಾಗಿ ಇದೇ ಶುಕ್ರವಾರ ಅಂದ್ರೆ 13ರ ತನಕ ಎಲ್ಲಾ ರೀತಿಯ ಕಾರ್ಡ್ ಸ್ವೀಕರಿಸಿ. ಸರ್ಚಾರ್ಜ್ ವಿಧಿಸದಂತೆ ಬ್ಯಾಂಕ್ಗಳ ಜೊತೆ ಚರ್ಚಿಸಲಾಗುತ್ತೆ ಅಂತ ಧರ್ಮೇಂದ್ರ ಪ್ರಧಾನ್ ಬ್ಯಾಂಕ್ ಮಾಲೀಕರಿಗೆ ಭರವಸೆ ಕೊಟ್ಟಿದ್ದಾರೆ. ಹೀಗಾಗಿ ಎಲ್ಲಾ ರೀತಿಯ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ಗಳು ಪೆಟ್ರೋಲ್ ಬಂಕ್ಗಳಲ್ಲಿ ಸ್ವೀಕರಿಸಲಿದ್ದು ಧರಣಿ ಕೈ ಬಿಟ್ಟಿದ್ದೇವೆ ಅಂತ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಅಧ್ಯಕ್ಷ ರವೀಂದ್ರನಾಥ್ ಸುವರ್ಣನ್ಯೂಸ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಗ್ರಾಹಕನಿಗೆ ಹೊರೆಯಾದಾಗ ಸುಮ್ಮನಿದ್ದರು!
ಅಂದ ಹಾಗೆ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ಗಳ ಮೇಲಿನ ಸರ್ ಚಾರ್ಜ್ ಹೊಸದೇನಿಲ್ಲ. ಮೊದಲಿಂದಲೂ ಬ್ಯಾಂಕ್'ಗಳು ಈ ಶುಲ್ಕ ವಿಧಿಸುತ್ತಿದ್ದವು. ಈ ಮೊದಲು ಗ್ರಾಹಕನಿಗೆ ಈ ಹೊರೆ ಬೀಳುತ್ತಿತ್ತು. ಇದೀಗ ಕೇಂದ್ರ ಸರ್ಕಾರ ನಗದು ರಹಿತ ವ್ಯವಹಾರ ಉತ್ತೇಜಿಸುವ ಸಲುವಾಗಿ ಗ್ರಾಹಕನಿಗೆ ಕೃಪೆ ತೋರಿ ಪೆಟ್ರೋಲ್ ಬಂಕ್ ಮಾಲೀಕರ ಕಡೆಗೆ ಗಮನಹರಿಸಿದ್ದವು ಬ್ಯಾಂಕ್ಗಳು. ಒಟ್ಟಿನಲ್ಲಿ ಶುಕ್ರವಾರದ ತನಕ ಪೆಟ್ರೋಲ್ ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.