ಚಾರ್ಜಿಗಿಟ್ಟಿದ್ದ ಮೊಬೈಲ್ ಬ್ಲ್ಯಾಸ್ಟ್ : ಸಿಇಒ ಸಾವು

First Published Jun 21, 2018, 3:45 PM IST
Highlights
  • ಕ್ರಾಡ್ಲಿ ಫಂಡ್ ಸಂಸ್ಥೆಯ ಸಿಇಒ ನಜ್ರೀನ್ ಹುಸೇನ್ ಮೃತರು
  • ಮಲೇಷ್ಯಾದ ರಾಜಧಾನಿ ಕ್ವಾಲಾ ಲಂಪುರ್'ನಲ್ಲಿ ನಡೆದ ಘಟನೆ
  • ಮೊಬೈಲ್ ಚೂರುಗಳು ಕುತ್ತಿಗೆಗೆ ಚುಚ್ಚಿಕೊಂಡು ಮೃತಪಟ್ಟಿದ್ದಾರೆ

ಕ್ವಾಲಾ ಲಂಪುರ್[ಜೂ.21]: ಚಾರ್ಜ್'ಗಿಟ್ಟಿದ ಮೊಬೈಲ್ ಸ್ಫೋಟಗೊಂಡು ಕಂಪನಿಯ ಸಿಇಒ ಒಬ್ಬರು ಮೃತಪಟ್ಟ ಘಟನೆ ಮಲೇಷ್ಯಾದ ರಾಜಧಾನಿ ಕ್ವಾಲಾ ಲಂಪುರ್'ನಲ್ಲಿ ನಡೆದಿದೆ.

ಕ್ರಾಡ್ಲಿ ಫಂಡ್ ಸಂಸ್ಥೆಯ ಸಿಇಒ ನಜ್ರೀನ್ ಹುಸೇನ್ ಮೃತರು. ಹುಸೇನ್ ಅವರು ನಿನ್ನೆ ರಾತ್ರಿ ಮಲಗುವಾಗ ಬ್ಲ್ಯಾಕ್ ಬರ್ರಿ ಹಾಗೂ ಹುವಾವೇ ಮೊಬೈಲ್'ಗಳನ್ನು ಚಾರ್ಜಿಗಿಟ್ಟಿದ್ದರು. ಇವರಡರಲ್ಲಿ ಒಂದು ಫೋನ್ ಸ್ಫೋಟಗೊಂಡು ಹಸಿಗೆಗೆ ಬೆಂಕಿ ತಗುಲಿ ಮೃತಪಟ್ಟಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಹಾಸಿಗೆಗೆ ಬೆಂಕಿ ತಗುಲುವ ಮುನ್ನವೆ ಮೊಬೈಲ್ ಚೂರುಗಳು ಕುತ್ತಿಗೆಗೆ ಚುಚ್ಚಿಕೊಂಡು ಮೃತಪಟ್ಟಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ಯಾವ ಮೊಬೈಲ್ ಸ್ಫೋಟಗೊಂಡಿದೆ ಇನ್ನು ತಿಳಿದುಬಂದಿಲ್ಲ. ನಜ್ರಿನ್  ಅವರು ಇಂಗ್ಲೆಂಡ್'ನಲ್ಲಿ ಕಾನೂನು ಪದವಿ ಪಡೆದು ಹಲವು ಕಂಪನಿಗಳಲ್ಲಿ ಕಾರ್ಯನಿರ್ವಹಿಸಿ 2007ರಲ್ಲಿ ಕ್ರಾಡ್ಲಿ ಫಂಡ್ ಸಂಸ್ಥೆಗೆ ಸಿಇಒ ಆಗಿ ನೇಮಕವಾಗಿದ್ದರು.

click me!