ಮೋದಿಯವರೇ ಯಾವ ಭರವಸೆ ಈಡೇರಿಸಿದ್ದೀರಿ?

Published : Oct 10, 2017, 04:02 PM ISTUpdated : Apr 11, 2018, 12:46 PM IST
ಮೋದಿಯವರೇ ಯಾವ ಭರವಸೆ ಈಡೇರಿಸಿದ್ದೀರಿ?

ಸಾರಾಂಶ

ಪ್ರಧಾನಿ ಮೋದಿ ಮತ್ತು ಅವರ ಬಿಜೆಪಿ ಕಳೆದ 2014ರ ಲೋಕಸಭಾ ಚುನಾವಣೆ ವೇಳೆ ನೀಡಿದ್ದ ಯಾವೊಂದು ಭರವಸೆಯನ್ನು ಈಡೇರಿಸಲಾಗದೆ ಒದ್ದಾಡಿ, ಹತಾಶ ಸ್ಥಿತಿಗೆ ತಲುಪಿ, ಸಿಪಿಐ(ಎಂ) ಕಚೇರಿ, ಕಾರ್ಯಕರ್ತರ ಮೇಲೆ ದಾಳಿ ನಡೆಸಲು ಮುಂದಾಗಿದೆ ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಸೈಯದ್ ಮುಜೀಬ್ ಆಕ್ರೋಶ ವ್ಯಕ್ತಪಡಿಸಿದರು. ಅವರು ತುಮಕೂರಿನ ಟೌನ್‌ಹಾಲ್ ಎದುರು ದೇಶದ ವಿವಿಧ ರಾಜ್ಯಗಳಲ್ಲಿ ಸಿಪಿಐ(ಎಂ) ಪಕ್ಷದ ಕಚೇರಿ, ಎಡಪಕ್ಷಗಳ ಕಾರ್ಯಕರ್ತರ ಮೇಲಿನ ದಾಳಿಯನ್ನು ವಿರೋಧಿಸಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ತುಮಕೂರು: ಪ್ರಧಾನಿ ಮೋದಿ ಮತ್ತು ಅವರ ಬಿಜೆಪಿ ಕಳೆದ 2014ರ ಲೋಕಸಭಾ ಚುನಾವಣೆ ವೇಳೆ ನೀಡಿದ್ದ ಯಾವೊಂದು ಭರವಸೆಯನ್ನು ಈಡೇರಿಸಲಾಗದೆ ಒದ್ದಾಡಿ, ಹತಾಶ ಸ್ಥಿತಿಗೆ ತಲುಪಿ, ಸಿಪಿಐ(ಎಂ) ಕಚೇರಿ, ಕಾರ್ಯಕರ್ತರ ಮೇಲೆ ದಾಳಿ ನಡೆಸಲು ಮುಂದಾಗಿದೆ ಎಂದು ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಸೈಯದ್ ಮುಜೀಬ್ ಆಕ್ರೋಶ ವ್ಯಕ್ತಪಡಿಸಿದರು. ಅವರು ತುಮಕೂರಿನ ಟೌನ್‌ಹಾಲ್ ಎದುರು ದೇಶದ ವಿವಿಧ ರಾಜ್ಯಗಳಲ್ಲಿ ಸಿಪಿಐ(ಎಂ) ಪಕ್ಷದ ಕಚೇರಿ, ಎಡಪಕ್ಷಗಳ ಕಾರ್ಯಕರ್ತರ ಮೇಲಿನ ದಾಳಿಯನ್ನು ವಿರೋಧಿಸಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಜನಸುರಕ್ಷಾ ಯಾತ್ರೆಯ ಹೆಸರಿನಲ್ಲಿ ಭಾರತೀಯ ಜನತಾ ಪಕ್ಷ ಸಿಪಿಐ(ಎಂ) ಕಚೇರಿಗಳ ಮೇಲೆ ದಾಳಿ ನಡೆಸಿ ಪಕ್ಷದ ಬಾವುಟಗಳಿಗೆ ಬೆಂಕಿ ಹಚ್ಚುವ ಮೂಲಕ ಗೂಂಡಾಗಿರಿ ಪ್ರದರ್ಶನ ಮಾಡಿದೆ. ದೇಶವ್ಯಾಪಿ ಕೋಮುದ್ವೇಷವನ್ನು ಹರಡುವುದನ್ನು ಬಿಜೆಪಿ ಮುಂದುವರಿಸಿದೆ. ಇಂತಹ ದುಷ್ಕೃತ್ಯಗಳನ್ನು ಮಾಡಲೆಂದೇ ಬಿಜೆಪಿ ಜನಸುರಕ್ಷಾ ಯಾತ್ರೆ ಕೈಗೊಂಡಿದೆ. ಇದರ ಭಾಗವಾಗಿ ಕೇರಳ, ಆಂಧ್ರಪ್ರದೇಶ, ಒಡಿಸ್ಸಾ ಮೊದಲಾದ ರಾಜ್ಯಗಳಲ್ಲಿ ಸಿಪಿಎಂ ಪಕ್ಷದ ಕಚೇರಿಗಳ ಮೇಲೆ ದಾಳಿ ನಡೆಸಿರುವ ಬಿಜೆಪಿ ತನ್ನ ಕೋಮುವಾದಿತನ ಹಾಗೂ ಪ್ರಜಾಪ್ರಭುತ್ವ ವಿರೋಧಿ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶನ ಮಾಡಿದೆ ಎಂದರು.

ದೇಶಭಕ್ತಿಯ ಮಾತುಗಳನ್ನಾಡುವ ಬಿಜೆಪಿಗೆ ನಿಜವಾಗಿಯೂ ದೇಶಭಕ್ತಿ ಇದ್ದರೆ ಸಂವಿಧಾನದ ಆಶಯಗಳಿಗೆ ಬದ್ದವಾಗಿ ನಡೆದುಕೊಳ್ಳಬೇಕು. ಕಮ್ಯೂನಿಸ್ಟರು ರಕ್ತಪಿಪಾಸುಗಳು ಎಂದು ಹೇಳುವ ಬಿಜೆಪಿ ಅಧಿಕಾರದ ಆಸೆಗಾಗಿ ಗುಜರಾತ್‌ನಲ್ಲಿ ಸಾವಿರಾರು ಅಮಾಯಕ ಜನರ ರಕ್ತವನ್ನು ಹರಿಸಿ ಅಧಿಕಾರವನ್ನು ನಡೆಸಿದೆ. ಭಾರೀ ಹತಾಷೆಗೆ ಒಳಗಾಗಿರುವ ಬಿಜೆಪಿ ತನ್ನ ವೈಪಲ್ಯಗಳನ್ನು ಮುಚ್ಚಿಕೊಳ್ಳಲು ಈ ನಾಟಕವಾಡುತ್ತಿದ್ದು ಈ ಕೂಡಲೇ ಸಿಪಿಐ(ಎಂ) ಕಚೇರಿಗಳ ಮೇಲಿನ ದಾಳಿಯನ್ನು ನಿಲ್ಲಿಸಬೇಕು ದೈಹಿಕ ಹಲ್ಲೆಯನ್ನು ಕೈಬಿಡಬೇಕು ಎಂದರು.

ಸಿಪಿಐನ ರಾಜ್ಯ ಮುಖಂಡ ಶಿವಣ್ಣ ಮಾತನಾಡಿ, ಜನರ ಸಮಸ್ಯೆಗಳನ್ನು ಮರೆಮಾಚುವ ಸಲುವಾಗಿ ಜಾತಿ ಮತ್ತು ಧರ್ಮಗಳ ಮಧ್ಯೆ ದ್ವೇಷ ಮತ್ತು ಅಸೂಯೆಗಳನ್ನು ಹುಟ್ಟುಹಾಕಲಾಗುತ್ತಿದೆ. ಬಿಜೆಪಿಗೆ ನಿಜವಾಗಿಯೂ ಜನತೆಯ ಬಗ್ಗೆ ಕಾಳಜಿಯಿದ್ದರೆ, ದೇಶದ ಜನರ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮಕೈಗೊಳ್ಳಲಿ. ಬಹುರಾಷ್ಟ್ರೀಯ ಕಂಪನಿಗಳ ಬಾಲ ಹಿಡಿದುಕೊಂಡು ತಿರುಗುವುದನ್ನು ನಿಲ್ಲಿಸಲಿ. ಮೋದಿ ಸರ್ಕಾರ ಚುನಾವಣೆಗೂ ಮುನ್ನ ಬೆಲೆ ಏರಿಕೆ ಕಡಿಮೆ ಮಾಡುವುದಾಗಿ, ವಿದೇಶದಲ್ಲಿರುವ ಕಪ್ಪುಹಣವನ್ನು ದೇಶದ ಜನರಿಗೆ ಹಾಕುವುದಾಗಿ ಹೇಳಿದ್ದ ಮೋದಿ ಅದರ ಬಗ್ಗೆ ಚಕಾರವೆತ್ತುತ್ತಿಲ್ಲ ಕಚ್ಚಾ ತೈಲದ ಬೆಲೆ ಕುಸಿದಿದ್ದರೂ ಪೆಟ್ರೋಲ್-ಡಿಸೇಲ್ ಬೆಲೆ ಕಡಿಮೆಯಾಗಿಲ್ಲ ಬದಲಿಗೆ ಪ್ರತಿ ನಿತ್ಯ ಪರಿಷ್ಕರಣೆ ಮಾಡಿ ಜನತೆಯ ಜೇಬಿಗೆ ಕತ್ತರಿ ಹಾಕುವ ಕೆಲಸ ನಡೆಯುತ್ತಿದೆ ಎಂದರು.

ಬಿಜೆಪಿ ರಾಷ್ಟ್ರಾಧ್ಯಕ್ಷರ ಭ್ರಷ್ಟಾಚಾರ: ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯ ಕೆ. ಮಹಂತೇಶ್ ಮಾತನಾಡಿ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಅವರ ಮಗನ ಭ್ರಷ್ಟಾಚಾರದ ಬಗ್ಗೆಯೂ ಸುದ್ದಿಯಾಗುತ್ತಿದೆ. ಆದರೂ ಬಿಜೆಪಿಯ ಸಂಸದರು ಅಮಿತ್ ಶಾ ರವರ ಮಗನ ಪರವಾಗಿ ಹೇಳಿಕೆಗಳನ್ನುನೀಡುತ್ತಿದ್ದಾರೆ ಎಂದೂ ಕಮ್ಯೂನಿಸ್ಟ್ ನಾಯಕರನ್ನು ಭ್ರಷ್ಟಾಚಾರ ಸೇರಿದಂತೆ ಇತರೆ ವಿಚಾರಗಳಲ್ಲಿ ಮಣಿಸಲು ಸಾಧ್ಯವಿಲ್ಲದ ಬಿಜೆಪಿ, ಸಿಪಿಎಂ ಕಚೇರಿ- ಕಾರ್ಯಕರ್ತರ ಮೇಲೆ ದಾಳಿ ಮಾಡುತ್ತಿದೆ. ಇವರಿಗೆ ಕೆಂಪು ಬಾವುಟವನ್ನು ಕಂಡರೆ ಎಷ್ಟು ಭಯ ಎನ್ನುವುದನ್ನು ಇವರ ದಾಳಿಗಳೇ ಹೇಳಿತ್ತಿದ್ದು, ಈ ರೀತಿಯ ದಾಳಿಗಳಿಂದ ಎಡ ಚಳುವಳಿಯನ್ನು ಮಣಿಸಾಲು ಸಾಧ್ಯವಿಲ್ಲ. ಕೇರಳ ರಾಜ್ಯದ ಕಮ್ಯೂನಿಸ್ಟ್ ಸರ್ಕಾರದ ಬಗ್ಗೆ ಟೀಕಿಸಿ ಮಾತನಾಡುವ ಬಿಜೆಪಿ ಆ ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಅವಲೋಕಿಸಿ, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅಳವಡಿಸಿಕೊಳ್ಳಲಿ ಎಂದು ಮಾರ್ಮಿಕವಾಗಿ ನುಡಿದರು.

ಜನಭಕ್ಷಣೆ ಯಾತ್ರೆ:ಸಿಪಿಐ(ಎಂ) ಜಿಲ್ಲಾಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಮಾತನಾಡಿ, ಜನರಲ್ಲಿ ದ್ವೇಷಭಾವನೆ ಬಿತ್ತಿ, ಗಲಭೆಗಳನ್ನು ಸೃಷ್ಟಿಸುತ್ತಿರುವ ಬಿಜೆಪಿ ಜನಸುರಕ್ಷಾ ಯಾತ್ರೆ ಬದಲು ಜನಭಕ್ಷಣೆ ಯಾತ್ರೆ ಹಮ್ಮಿಕೊಂಡಂತೆ ಕಾಣುತ್ತಿದೆ ಎಂದರು. ಪ್ರಾಂತರೈತ ಸಂಘದ ಬಿ.ಉಮೇಶ್ ಮಾತನಾಡಿ, ವಿದೇಶಗಳಲ್ಲಿರುವ ಕಪ್ಪುಹಣ ವಾಪಸ್ ತರುವುದಾಗಿ ಹೇಳಿ ಮಾತಿಗೆ ತಪ್ಪಿದ್ದಾರೆ. ಇನ್ನು ದೇಶದೊಳಗೆ ನೋಟು ಅಮಾನ್ಯೀಕರಣ ಮಾಡಿದ ಮೋದಿ ಎಷ್ಟು ಕಪ್ಪು ಹಣ ವಾಪಸ್ ಬಂದಿದೆ ಎಂದು ಇದುವರೆಗೂ ಲೆಕ್ಕ ನೀಡಿಲ್ಲ. ಇನ್ನು ಉದ್ಯೋಗ ಸೃಷ್ಟಿಗೆ ಬದಲು ಲಕ್ಷಾಂತರ ಉದ್ಯೋಗ ನಾಶ ಮಾಡಿದ ಕೀರ್ತಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಲೇವಡಿ ಮಾಡಿದರು. ಸಿಪಿಐನ ಗಿರೀಶ್, ಗೌಡ ರಂಗಪ್ಪ ಮಾತನಾಡಿದರು. ಜಿ. ದರ್ಶನ್, ಇ. ಶಿವಣ್ಣ. ಲಕ್ಷ್ಮಣ್, ಮುತ್ತುರಾಜ್, ರಾಘವೇಂದ್ರ, ರಾಮ ಚಂದ್ರು, ಶ್ರೀಧರ್, ಮಂಜು ಇತರರು ಇದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!
ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ