ಕೇಂದ್ರ ಸರ್ಕಾರದ ಕಾಶ್ಮೀರ ನೀತಿ ಸಂಪೂರ್ಣ ವಿಫಲವಾಗಿದೆ: ಕಮ್ಯೂನಿಸ್ಟ್ ಪಕ್ಷ

By Suvarna Web DeskFirst Published Apr 24, 2017, 8:26 AM IST
Highlights

ಕಾಶ್ಮೀರ ಕಣಿವೆಯಲ್ಲಿ  ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಾಡಯಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ನವದೆಹಲಿ (ಏ.24): ಬಿಜೆಪಿ ನೇತೃತ್ವದ ಕಾಶ್ಮೀರ ನೀತಿಯು ಸಂಪೂರ್ಣವಾಗಿ ವಿಫಲಗೊಂಡಿದೆಯೆಂದು ಕಮ್ಯೂನಿಸ್ಟ್ ಪಕ್ಷದ ನಾಯಕ ಸೀತರಾಂ ಯೆಚೂರಿ ಹೇಳಿದ್ದಾರೆ.

ಪಿಡಿಪಿ ಹಾಗೂ ಬಿಜೆಪಿಯ ಅವಕಾಶವಾದಿ ರಾಜಕಾರಣ ಹಾಗೂ ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿವೆ. ಅದರ ಪರಿಣಾಮವನ್ನು ಈಗ ಕಣಿವೆಯಲ್ಲಿ ಕಾಣಬಹುದಾಗಿದೆಯೆಂದು ಯೆಚೂರಿ ಹೇಳಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ  ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಾಡಯಿಸುತ್ತಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಕಾಶ್ಮೀರದಲ್ಲಿ ಪರಿಸ್ಥಿತಿಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಸಂಸದೀಯ ನಿಯೋಗವು ನೀಡಿರುವ ಪ್ರಮುಖ 2 ಶಿಫಾರಸ್ಸುಗಳನ್ನು ಪ್ರಧಾನಿ ಮೋದಿ ನಿರ್ಲಕ್ಷಿಸುತ್ತಿದ್ದಾರೆ ಎಂದು ಯೆಚೂರಿ ಏಎನ್’ಐ’ಗೆ ಹೇಳಿದ್ದಾರೆ.

ರಾಜನಾಥ್ ಸಿಂಗ್ ನೇತೃತ್ವದ ಸಂಸದೀಯ ನಿಯೋಗವು ಮಾಡಿರುವ ಶಿಫಾರಸ್ಸುಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಯಾವುದೇ ಕ್ರಮಕೈಗೊಂಡಿಲ್ಲ. ಕಾಶ್ಮೀರ ಕಣಿವೆ ಜನರಲ್ಲಿ ವಿಶ್ವಾಸ ಬೆಳೆಸುವ ಕ್ರಮಗಳನ್ನು ತಕ್ಷಣ ಆರಂಭಿಸಬೇಕೆಂದೂ, ಹಾಗೂ ಸಂಬಂಧಪಟ್ಟವರೆಲ್ಲರೊಂದಿಗೂ ಮಾತುಕತೆ ನಡೆಸಬೇಕೆಂದು ನಿಯೋಗವು ಶಿಫಾರಸ್ಸು ಮಾಡಿತ್ತು, ಎಂದು ಅವರು ಹೇಳಿದ್ದಾರೆ.

click me!