
ಮಹಾರಾಷ್ಟ್ರ[ಮಾ.05]: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಪಿ. ಚಿದಂಬರಂ ಪ್ರಧಾನಿ ಮೋದಿಯನ್ನು ಹೊಗಳಿದ ಬೆನ್ನಲ್ಲೇ ಸಿಪಿಐಎಂ ನಾಯಕರೊಬ್ಬರು ಮೋದಿಯನ್ನು ಹಾಡಿ ಹೊಗಳಿದ್ದಾರೆ. ಆದರೀಗ ಮೋದಿಯನ್ನು ಹೊಗಳಿದ ಕಾರಣಕ್ಕಾಗಿ ಈ ನಾಯಕನನ್ನು ಸಿಪಿಐಎಂ ಪಕ್ಷದ ಕೇಂದ್ರ ಸಮಿತಿಯಿಂದಲೇ ಹೊರ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ.
ಲಭ್ಯವಾದ ಮಹಿತಿ ಅನ್ವಯ ಸಿಪಿಐಎಂ ಮಾಜಿ ಶಾಸಕ ನರ್ಸಯ್ಯ ಆಡಂ ಎಂಬವರೇ ಮೋದಿ ಹಾಗೂ ಫಡ್ನವೀಸ್ ರನ್ನು ಹೊಗಳಿದ್ದ ನಾಯಕ ಎಂದು ತಿಳಿದು ಬಂದಿದೆ. ಇಲ್ಲಿನ ಸೋಲಾಪುರ ಜಿಲ್ಲೆಯಲ್ಲಿ ಆವಾಸ್ ಯೋಜನೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು. ಹೀಗಾಗಿ ಜನವರಿಯಲ್ಲಿ ಆಡಂರವರು ಮೋದಿ ಹಾಗೂ ಫಡ್ನವೀಸ್ ರನ್ನು ಸಾರ್ವಜನಿಕವಾಗಿಯೇ ಹೊಗಳಿ ಧನ್ಯವಾದ ತಿಳಿಸಿದ್ದರು. ಇಷ್ಟೇ ಅಲ್ಲದೇ ಮೋದಿಯೇ ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕೆಂದು ಶುಭ ಕೋರಿದ್ದರು. ಆಡಂ ಇದೇ ಸೋಲಾಪುರ ಜಿಲ್ಲೆಯ ಶಾಸಕರಾಗಿ ಅಯ್ಕೆಯಾಗಿದ್ದರಂಬುವುದು ಗಮನಾರ್ಹ.
ಮೋದಿ ಸರಕಾರವನ್ನು ಹೊಗಳಿದ ಕಾಂಗ್ರೆಸ್ ಮಾಜಿ ಸಚಿವ ಚಿದಂಬರಂ!
ಸಿಪಿಐಎಂ ಪಕ್ಷದ ಪದಾಧಿಕಾರಿಯೊಬ್ಬರು ಈ ವಿಚಾರವಾಗಿ ಮಾತನಾಡುತ್ತಾ 'ಇಂತಹ ಹೊಗಳುವಿಕೆ ಪಕ್ಷದ ನೀತಿಯ ಉಲ್ಲಂಘನೆಯಗಿದೆ. ಹೀಗಾಗಿ ಅವರನ್ನು ಮುಂದಿನ 3 ತಿಂಗಳವರೆಗೆ ಪಕ್ಷದ ಕೇಂದ್ರ ಸಮಿತಿಯಿಂದ ಅಮಾನತ್ತು ಮಾಡಲು ನಿರ್ಧರಿಸಲಾಗಿದೆ' ಎಂದಿದ್ದಾರೆ. ಆದರೆ ಆಡಂ ಮಾತ್ರ ಈ ಕುರಿತಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.