ನೋಟು ಅಮಾನ್ಯ ಖಂಡಿಸಿ ನಾಳೆ ಕರಾಳ ದಿನ ಆಚರಣೆ

Published : Nov 07, 2017, 04:16 PM ISTUpdated : Apr 11, 2018, 01:04 PM IST
ನೋಟು ಅಮಾನ್ಯ ಖಂಡಿಸಿ ನಾಳೆ ಕರಾಳ ದಿನ ಆಚರಣೆ

ಸಾರಾಂಶ

ಕೇಂದ್ರ ಸರ್ಕಾರ ನೋಟುಗಳನ್ನು ಅಮಾನ್ಯಗೊಳಿಸಿ ಒಂದು ವರ್ಷವಾಗಿದ್ದು, ಕೇಂದ್ರದಈ ಕ್ರಮವನ್ನು ವಿರೋಧಿಸಿ ಎಡಪಕ್ಷಗಳು ನ. 8ರಂದು ದೇಶದಲ್ಲಿ ಕರಾಳ ದಿನಾಚರಣೆ ಆಚರಿಸಲು ಕರೆ ನೀಡಿವೆ. ಇದರ ಅಂಗವಾಗಿ ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಕಳಸದಲ್ಲಿ ಎಡಪಕ್ಷಗಳು ಪ್ರತಿಭಟನೆ ಹಮ್ಮಿಕೊಂಡಿವೆ ಎಂದು ಸುದ್ದಿಗೋಷ್ಠಿಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ರೇಣುಕಾರಾಧ್ಯ ತಿಳಿಸಿದರು.

ಚಿಕ್ಕಮಗಳೂರು (ನ.07): ಕೇಂದ್ರ ಸರ್ಕಾರ ನೋಟುಗಳನ್ನು ಅಮಾನ್ಯಗೊಳಿಸಿ ಒಂದು ವರ್ಷವಾಗಿದ್ದು, ಕೇಂದ್ರದಈ ಕ್ರಮವನ್ನು ವಿರೋಧಿಸಿ ಎಡಪಕ್ಷಗಳು ನ. 8ರಂದು ದೇಶದಲ್ಲಿ ಕರಾಳ ದಿನಾಚರಣೆ ಆಚರಿಸಲು ಕರೆ ನೀಡಿವೆ. ಇದರ ಅಂಗವಾಗಿ ಚಿಕ್ಕಮಗಳೂರು, ಮೂಡಿಗೆರೆ ಹಾಗೂ ಕಳಸದಲ್ಲಿ ಎಡಪಕ್ಷಗಳು ಪ್ರತಿಭಟನೆ ಹಮ್ಮಿಕೊಂಡಿವೆ ಎಂದು ಸುದ್ದಿಗೋಷ್ಠಿಯಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ರೇಣುಕಾರಾಧ್ಯ ತಿಳಿಸಿದರು.

ನೋಟುಗಳನ್ನು ಅಮಾನ್ಯಗೊಳಿಸಿ ದೇಶದ ಆರ್ಥಿಕ  ವ್ಯವಸ್ಥೆಯನ್ನೇ ಬುಡ ಮೇಲುಗೊಳಿಸಿ ಜನ ಸಾಮಾನ್ಯರ ಬದುಕನ್ನು ತತ್ತರಗೊಳಿಸಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದದ ಜನ ವಿರೋಧಿ  ಧೋರಣೆಗಳನ್ನು ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ನೋಟುಗಳನ್ನು ರದ್ದುಪಡಿಸಿರುವುದಾಗಿ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಈ ನಿರ್ಧಾರದಿಂದ ದೇಶದ ಕಪ್ಪು ಹಣ ಹೊರ ಬರಲಿದೆ. ನಕಲಿ ನೋಟು ಚಲಾವಣೆ ನಿಲ್ಲಲಿದೆ. ಭಯೋತ್ಪಾದಕರು, ನಕ್ಸಲೀಯರು, ಉಗ್ರಗಾಮಿಗಳಿಗೆ ಹಣದ ನೆರವು ಸಿಗದೆ ಅವರೆಲ್ಲಾ ನಿಯಂತ್ರಣಕ್ಕೆ ಬರುತ್ತಾರೆ. ಅಲ್ಲದೇ ಭ್ರಷ್ಟಚಾರವು ಹತೋಟಿಗೆ ಬರಲಿದೆ ಎಂದು ಸಾರಿದ್ದರು. ಆದರೆ, ನೋಟು ರದ್ದತಿಯಾಗಿ ಒಂದು ವರ್ಷ ಕಳೆದರೂ ಖದೀಮರ, ಶ್ರೀಮಂತರ ಬಳಿ ಇದ್ದ ಕಪ್ಪು ಹಣ ಹೊರ ತರಲು ಸಾಧ್ಯವಾಗಿಲ್ಲ.  ಉಗ್ರ ಗಾಮಿ, ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ವಿಫಲವಾಗಿದೆ ಎಂದರು.

ಚಲಾವಣೆಯಲ್ಲಿದ್ದ ಹಳೆಯ ನೋಟುಗಳಲ್ಲಿ ಶೇ. 99 ರಷ್ಟು ಬ್ಯಾಂಕುಗಳಿಗೆ ಜಮಾವಾಗಿ ಹೊಸ ನೋಟುಗಳ ಪರಿವರ್ತನೆಯಾಗಿ, ದೇಶದಲ್ಲಿ ಚಲಾವಣೆಯಲ್ಲಿದ್ದ 16 ಲಕ್ಷ ಕೋಟಿಗಳಷ್ಟು ಚಲಾವಣೆಯಲ್ಲಿದ್ದ ನೋಟುಗಳ ಪೈಕಿ ಕೇವಲ 16 ಸಾವಿರ ಕೋಟಿಯಷ್ಟು ನೋಟುಗಳ ಮಾತ್ರ ಬ್ಯಾಂಕ್’ಗಳಿಗೆ ವಾಪಸ್ಸು ಬಂದಿಲ್ಲ, ಈ 16 ಸಾವಿರ ಕೋಟಿ  ಹಣದ ಪತ್ತೆಗಾಗಿ ಹಳೇ ನೋಟು ರದ್ದುಪಡಿಸಿ ಹೊಸ ನೋಟುಗಳ ಮುದ್ರಣ, ನಿರ್ವಹಣೆ, ಸಾಗಾಟ ಇತ್ಯಾದಿ ಗಳಿಗೆ ಸರ್ಕಾರ ಖರ್ಚು ಮಾಡಿದ 20 ಸಾವಿರ ಕೋಟಿ, ಸರ್ಕಾರದ ವೈಫಲ್ಯಗಳನ್ನು ಮರೆ ಮಾಚಲು ನೋಟುಗಳ ರದ್ಧತಿ ಎಂಬ ಪ್ರಹಸನ ನಡೆಸಿ ದೇಶದ ಆರ್ಥ ವ್ಯವಸ್ಥೆಯೇ ಸಂಪೂರ್ಣವಾಗಿ ಕುಸಿಯಲು ಕಾರಣವಾಗಿದೆ ಎಂದು ಹೇಳಿದರು

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಿ ರಾಮ್‌ ಜಿ ರದ್ದತಿಗಾಗಿ ಹೋರಾಟ : ಸೋನಿಯಾ
ಡಿಕೆ ಸಿಎಂ ಆಗಿ ಕಸ ಹೊಡೆಯಲು ಹೇಳಿದ್ರೂ ಮಾಡುವೆ: ಶಾಸಕ ಬಸವರಾಜ ವಿ.ಶಿವಗಂಗಾ