
ಲಖನೌ: ಕೇಂದ್ರ ಸರ್ಕಾರವು ಗೋ ಮಾರಾಟದ ಮೇಲೆ ಕೆಲವು ಕಠಿಣ ನಿರ್ಬಂಧಗಳನ್ನು ಹೇರಿದ ಬೆನ್ನಲ್ಲೇ ಉತ್ತರಪ್ರದೇಶದಲ್ಲಿ ಕೂಡ ಕಠಿಣ ಕ್ರಮಗಳನ್ನು ಗೋಹಂತಕರ ಮೇಲೆ ಜರುಗಿಸಲು ನಿರ್ಧರಿಸಲಾಗಿದೆ.
ಹಾಲು ಕೊಡುವ ಗೋವುಗಳ ಅಕ್ರಮ ಸಾಗಾಟ ಹಾಗೂ ಅಕ್ರಮ ವಧೆ ಮಾಡಿದ್ದು ಕಂಡುಬಂದರೆ ಅಂಥವರ ಮೇಲೆ ಭಾರಿ ಕಠಿಣವಾದ ರಾಷ್ಟ್ರೀಯ ಭದ್ರತಾ ಕಾಯ್ದೆ ಹಾಗೂ ಗೂಂಡಾ ಕಾಯ್ದೆಯನ್ವಯ ಕ್ರಮ ಜರುಗಿಸಲು ಎಲ್ಲ ಜಿಲ್ಲಾ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಡಿಜಿಪಿ ಸುಲ್ಖನ್ ಸಿಂಗ್ ಹೇಳಿದರು.
ಭದ್ರತಾ ಕಾಯ್ದೆ ಮತ್ತು ಗೂಂಡಾ ಕಾಯ್ದೆಯನ್ವಯ ಬಂಧಿತನಾದ ವ್ಯಕ್ತಿಯನ್ನು ಎಷ್ಟು ಬೇಕಾದಷ್ಟು ದಿನವಾದರೂ ಪೊಲೀಸರು ಬಂಧಿಸದೇ ತಮ್ಮ ವಶದಲ್ಲಿ ಇಟ್ಟುಕೊಳ್ಳಬಹುದು ಮತ್ತು ಬಂಧನಕ್ಕೆ ಕಾರಣ ತಿಳಿಸಲೇಬೇಕು ಎಂದೇನಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.