ಕನ್ನಡದ ಅಪರೂಪದ ಸಂಪತ್ತಿಗೆ ಪರರಾಜ್ಯದ ಕನ್ನ

Published : Jul 14, 2017, 09:52 PM ISTUpdated : Apr 11, 2018, 12:51 PM IST
ಕನ್ನಡದ ಅಪರೂಪದ ಸಂಪತ್ತಿಗೆ ಪರರಾಜ್ಯದ ಕನ್ನ

ಸಾರಾಂಶ

ಬಾಗಲಕೋಟೆಯ ಇಳಕಲ್​ನ ಬಲಕುಂದಿಯಲ್ಲಿ  ಲಕ್ಷಾಂತರ ಕೋಟಿಯ ಗಣಿ ಹಗರಣ ನಡೆದಿದೆ  ಇದರಲ್ಲಿ ರಾಜಕಾರಣಿಗಳೂ ಭಾಗಿಯಾಗಿದ್ದಾರೆ. ಬಲಕುಂದಿಯ 600 ಎಕರೆಯ ಸರ್ಕಾರಿ ಜಮೀನಿನಲ್ಲಿ ಕಳೆದ ನಾಲ್ಕು ದಶಕಗಳಿಂದ ಲಕ್ಷಾಂತರ ಕೋಟಿ ರೂಪಾಯಿಯ ಅತ್ಯಮೂಲ್ಯವಾಗಿ ರೂಬಿ ರೆಡೆ​ ಜೆಮ್​ ಗ್ರಾನೈಟ್​ ಲೂಟಿಯಾಗಿದೆ. ಇದು ಕವರ್​ಸ್ಟೋರಿ ತನಿಖೆಯಲ್ಲಿ ಪತ್ತೆಯಾಗಿದೆ.

ಸುವರ್ಣ ನ್ಯೂಸ್​ನ ಕವರ್​​ಸ್ಟೋರಿ ತಂಡ ರಾಜ್ಯದ ಮತ್ತೊಂದು ಭಾರೀ ಗಣಿ ಹಗರಣವನ್ನ ಬಯಲಿಗೆಳೆದಿದೆ. ಬಾಗಲಕೋಟೆಯ ಇಳಕಲ್​ನಲ್ಲಿ ನಡೆದ ಲಕ್ಷಾಂತರ ಕೋಟಿ ಗಣಿ ಲೂಟಿಯ ಭಯಾನಕ ಚಿತ್ರಣವನ್ನ ನಮ್ಮ ತಂಡ ಭಾರೀ ಅಪಾಯ ಎದುರಿಸಿ ಬಹಿರಂಗಪಡಿಸಿದೆ.

ಬಾಗಲಕೋಟೆಯ ಇಳಕಲ್​ನ ಬಲಕುಂದಿಯಲ್ಲಿ  ಲಕ್ಷಾಂತರ ಕೋಟಿಯ ಗಣಿ ಹಗರಣ ನಡೆದಿದೆ  ಇದರಲ್ಲಿ ರಾಜಕಾರಣಿಗಳೂ ಭಾಗಿಯಾಗಿದ್ದಾರೆ. ಬಲಕುಂದಿಯ 600 ಎಕರೆಯ ಸರ್ಕಾರಿ ಜಮೀನಿನಲ್ಲಿ ಕಳೆದ ನಾಲ್ಕು ದಶಕಗಳಿಂದ ಲಕ್ಷಾಂತರ ಕೋಟಿ ರೂಪಾಯಿಯ ಅತ್ಯಮೂಲ್ಯವಾಗಿ ರೂಬಿ ರೆಡೆ​ ಜೆಮ್​ ಗ್ರಾನೈಟ್​ ಲೂಟಿಯಾಗಿದೆ. ಇದು ಕವರ್​ಸ್ಟೋರಿ ತನಿಖೆಯಲ್ಲಿ ಪತ್ತೆಯಾಗಿದೆ.

ಗಣಿ ಇಲಾಖೆ, ಸಾರಿಗೆ ಇಲಾಖೆ, ಬಾಗಲಕೋಟೆ ಜಿಲ್ಲಾಡಳಿತ ಲಂಚ ತಿಂದು ಗಣಿ ಮಾಲೀಕರ ತಾಳಕ್ಕೆ ಕುಣಿಯೋ ಗೊಂಬೆಗಳಾಗಿದ್ದಾರೆ. ಭ್ರಷ್ಟರು ಗಣಿ ಮಾಲೀಕರ ಪರವಾಗಿ ಸುಳ್ಳು ದಾಖಲೆಗಳನ್ನ ಸೃಷ್ಟಿಸಿ ಸರ್ಕಾರಕ್ಕೆ ಭಾರೀ ವಂಚನೆಯನ್ನೂ ಮಾಡಿದ್ದಾರೆ.ಯಾವುದೇ ಗಣಿಗಾರಿಕೆ ನಡೆಯದಿದ್ರೂ ಗಣಿಗಾರಿಕೆ ಆಗಿದೆ ಅಂತ ಅಧಿಕಾರಿ ದಾಖಲೆ ಕೊಟ್ಟಿದ್ದಾರೆ.

350 ಎಕರೆ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ತ್ಯಾಜ್ಯ ತುಂಬಿಸಿಟ್ಟಿರೋದು. ಅನುಮತಿಯೇ ಇಲ್ಲದೆ ಗ್ರಾನೈಟ್​ ಕಟ್ಟಿಂಗ್​ ಫ್ಯಾಕ್ಟರಿ ಸ್ಥಾಪಿಸಿರೋದು, ಗಣಿ ನೀತಿ, ಕಾರ್ಮಿಕ ನೀತಿಯನ್ನು ಉಲ್ಲಂಘಿಸಿರೋದು ಹೀಗೆ ಗ್ರಾನೈಟ್​ ಕಂಪೆನಿಗಳು ಹೆಜ್ಜೆ ಹೆಜ್ಜೆಗೆ ಅಕ್ರಮ ಎಸಗಿವೆ. ಆದರೆ ನಮ್ಮ ರಾಜ್ಯ ಸರ್ಕಾರದ ಕಂದಾಯ, ಗಣಿ ಸಚಿವರು ಮೌನವಹಿಸಿರೋದು ಸಾಕಷ್ಟು ಅನುಮಾನ ಮೂಡಿಸಿದೆ. ಹಾಗಾಗಿ ಈ ಭಾರೀ ಹಗರಣದ ಸೂಕ್ತ ತನಿಖೆ ನಡೆಯಲೇ ಬೇಕು.

ವರದಿ: ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್​

--

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹೊಸಕೋಟೆಗೆ ಕಾಂಗ್ರೆಸ್‌ ಅವಧಿಯಲ್ಲೇ ಮೆಟ್ರೋ, ಶೀಘ್ರದಲ್ಲೇ ಸಿಗಲಿದೆಯೇ ಸಿಹಿ ಸುದ್ದಿ, ಯಾವ ಮಾರ್ಗ ವಿಸ್ತರಣೆ?
ಮೀಸಲಾತಿ ಯಾರಪ್ಪನ ಸ್ವತ್ತಲ್ಲ; ಕುರುಬರ ST ಸೇರ್ಪಡೆ ವಿಚಾರ, ವಿಎಸ್ ಉಗ್ರಪ್ಪ ಮಹತ್ವದ ಹೇಳಿಕೆ!