
ಬೆಂಗಳೂರು(ಅ. 29): ಸ್ನೇಹಿತರೇ ಎಚ್ಚರ .. ಎಚ್ಚರ! ಶೈನಿಂಗ್ ಸ್ವೀಟ್ ಬಗ್ಗೆ ಕೇರ್ಫುಲ್... ತಿಂದ್ರೆ ಬರುತ್ತೆ ಮಾರಕ ಕಾಯಿಲೆ... ಹೌದು, ಈಗ ಮಾರುಕಟ್ಟೇಲಿ ತುಂಬಾ ಶೈನಿಂಗ್ ಸ್ವೀಟ್'ನದ್ದೇ ದರ್ಬಾರು. ಪ್ರತಿ ಸ್ವೀಟ್ ಮೇಲೂ ಫಳ ಫಳ ಹೊಳೆಯೋ ಬೆಳ್ಳಿ ಪತ್ರದ ಅಲಂಕಾರ. ಗ್ರಾಹಕರು ಕೂಡ ಈ ಬೆಳ್ಳಿ ಕವಚದ ಸ್ವೀಟ್ಸ್'ನ್ನೇ ಡಿಮ್ಯಾಂಡ್ ಮಾಡುತ್ತಾರೆ. ಆದ್ರೆ ನಿಮಗೆ ತಿಳಿದಿರಲಿ, ಸ್ವೀಟ್ ಕಲರ್'ಫುಲ್ ಆಗಿ ಕಾಣಲು ಬಳಸುವ ಈ ವರಕ್ ಅಥವಾ ಬೆಳ್ಳಿ ಹಾಳೆ ಮನುಷ್ಯನ ದೇಹಕ್ಕೆ ಅನಗತ್ಯ. ಆಹಾರದೊಳಗೆ ಬಳಸಿದರೆ ಅದು ಶೇಕಡಾ 99.9 ರಷ್ಟು ಶುದ್ಧವಾಗಿರಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.
ಬೆಳ್ಳಿ ಪ್ಯೂರ್ ಆಗಿದ್ರೆಯೇ ದೇಹಕ್ಕೆ ಅಪಾಯ ತಂದೊಡ್ಡುತ್ತದೆ. ಇನ್ನು ಅದರೊಳಗೆ ಅಲ್ಯೂಮಿನಿಯಂ, ಸೀಸ ಮೊದಲಾದವುಗಳಿಂದ ಕಲಬೆರಕೆ ಮಾಡಿದ್ರೆ ಆರೋಗ್ಯಕ್ಕೆ ಭಾರೀ ಡೇಂಜರ್. ಇದಕ್ಕಿಂತಲೂ ಮುಖ್ಯವಾಗಿ ಈ ಬೆಳ್ಳಿ ಪತ್ರಕ್ಕೆ ಮಾಂಸದ ಕಲಬೆರಕೆಯೂ ಆಗಿರುತ್ತದೆ.
- ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.