
ಚಿತ್ರದುರ್ಗ(ಫೆ.16): ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದ ಮಗಳ ಮಗುವನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ ತಾತನಿಗೆ ಚಿತ್ರದುರ್ಗದ ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದೆ.
ಕಳೆದ ಎರಡು ವರ್ಷಗಳ ಹಿಂದೆ ವೃದ್ಧ ಮಂಜುನಾಥ್ ಮೊಮ್ಮಗಳು ಸೃಷ್ಟಿಯನ್ನು ಚಳ್ಳಕೆರೆಯ ಅಂಬೆಡ್ಕರ್ ನಗರದ ಮನೆಯಲ್ಲಿ ವಯರ್ ಬಿಗಿದು ಕೊಲೆ ಮಾಡಿದ್ದ.ಚಿತ್ರದುರ್ಗದ ಚಳ್ಳಕೆರೆ ಪಟ್ಟಣದ ಅಂಬೇಡ್ಕರ್ ಬಡಾವಣೆಯ ವೀರೇಶ್ ಮತ್ತು ನಾಗರತ್ನ ಇಬ್ಬರು ಪರಸ್ಪರ ಪ್ರೀತಿಸಿ ಕಳೆದ ಎರಡು ವರ್ಷಗಳ ಹಿಂದೆ ಮದುವೆ ಅಗಿದ್ದರು. ಇದನ್ನು ವಿರೋಧಿಸಿದ ನಾಗರತ್ನಳಾ ತಂದೆ ಮಂಜುನಾಥ್ ತನ್ನ ಮಾರ್ಯಾದೆ ಹೋಯಿತು ಎಂದು ಮಗಳ ಮೇಲೆ ಕೆಂಡ ಕಾರುತ್ತಿದ್ದ.
ಸಮಯ ಕಳೆದಂತೆ ನಾಗರತ್ನಳಿಗೆ ಸೃಷ್ಟಿ ಎನ್ನುವ ಹೆಣ್ಣು ಜನಿಸಿದೆ. ಇದೇ ಸಮಯವನ್ನು ಕಾಯುತ್ತಿದ್ದ ಮಂಜುನಾಥ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗುವಿನ ಕತ್ತಿಗೆಗೆ ವಯರ್ ಬಿಗಿದು ಕೊಲೆ ಮಾಡಿದ್ದ. ಮಂಜುನಾಥ್ ಮೇಲೆ ಚಳ್ಳಕೆರೆ ಪೋಲಿಸರು ಪ್ರಕರಣ ದಾಖಲಿಸಿದ್ದರು. ಅಂದಿನ ಪ್ರಕರಣದ ತೀರ್ಪು ಇಂದು ಜೀವಾವಧಿ ಶಿಕ್ಷೆಯಾಗಿ ಹೊರ ಬಿದ್ದಿದೆ.
ಇದರ ಮಧ್ಯೆ ಸೃಷ್ಟಿ ತಂದೆ ವಿರೇಶ್ ಅನಾರೋಗ್ಯ ಹಾಗೂ ಮಗುವಿನ ಕೊಲೆಯ ಕೊರಗಿನಿಂದ ಮೃತನಾಗಿದ್ದಾನೆ. ಇತ್ತ ನಾಗರತ್ನ ಗಂಡನನ್ನು ಕಳೆದುಕೊಂಡು ಮತವನ್ನು ಕಳೆದುಕೊಂಡು ಒಬ್ಬೊಂಟಿ ಜೀವನ ನಡೆಸುತ್ತಿದ್ದಾಳೆ. ಅದರೆ ಇಂದಿನ ತೀರ್ಪು ತಂದೆಯ ವಿರುದ್ಧ ಅಗಿದ್ದು ಬೇಸರ ತಂದಿದ್ದರೂ ಮಗಳ ಕೊಲೆಗೆ ನ್ಯಾಯ ಸಿಕ್ಕಿದೆ ಎಂಬ ಸಮಾಧಾನ ಇದೆ ಎನ್ನುತ್ತಾಳೆ ನಾಗರತ್ನ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.