18 ರಂದು ದೇಶದ ಮೊದಲ ಕೆನೋಪಿ ವಾಕ್ ಲೋಕಾರ್ಪಣೆ

By suvarna Web DeskFirst Published Feb 6, 2018, 11:51 AM IST
Highlights

ದೇಶದ ಮೊಟ್ಟ ಮೊದಲ ಕೆನೊಪಿ ವಾಕ್ ಹಾಗೂ ಗೇಟ್ ಕೆನರಾ ಟ್ರೇಲ್ ಜೋಯಿಡಾ ತಾಲೂಕಿನ ಕುವೇಶಿ ಅರಣ್ಯದಲ್ಲಿ ಫೆ. 18 ರಂದು ಉದ್ಘಾಟನೆಯಾಗಲಿದೆ ಎಂದು ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕ ಓ.ಪಾಲಯ್ಯ ತಿಳಿಸಿದ್ದಾರೆ.

ದಾಂಡೇಲಿ (ಫೆ.06): ದೇಶದ ಮೊಟ್ಟ ಮೊದಲ ಕೆನೊಪಿ ವಾಕ್ ಹಾಗೂ ಗೇಟ್ ಕೆನರಾ ಟ್ರೇಲ್ ಜೋಯಿಡಾ ತಾಲೂಕಿನ ಕುವೇಶಿ ಅರಣ್ಯದಲ್ಲಿ ಫೆ. 18 ರಂದು ಉದ್ಘಾಟನೆಯಾಗಲಿದೆ ಎಂದು ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕ ಓ.ಪಾಲಯ್ಯ ತಿಳಿಸಿದ್ದಾರೆ.

ವಿದೇಶದಲ್ಲಿ ಕೆಲವೆಡೆ ಈ ಕೆನೊಪಿ ವಾಕ್ ಇತ್ತು. ಅಲ್ಲಿಯ ತಂತ್ರಜ್ಞಾನಗಳನ್ನೆ ಬಳಸಿ ಕುವೇಶಿಯಲ್ಲಿ ಮಾಡಲಾಗಿದ್ದು. ಇದು ದೇಶದಲ್ಲಿಯೇ ಮೊದಲ ಪ್ರಯೋಗ. ಪ್ರವಾಸೋದ್ಯಮ ಇಲಾಖೆಯ ₹ 84 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡಿರುವ ಈ ಕೆನೊಪಿವಾಕ್ 240 ಮೀಟರ್ ಉದ್ದವಿದೆ. ಆ ಭಾಗದ ಅರಣ್ಯ ಹಾಗೂ ಮರಗಳನ್ನೇ ಬಳಸಿ, ಅರಣ್ಯ, ಪರಿಸರ ಹಾಗೂ ಮರಗಳಿಗೆ ಧಕ್ಕೆಯಾಗದ ರೀತಿಯಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ ನಿಗದಿತ ಜನರಿಗಷ್ಟೇ (13 ವರ್ಷ ಮೇಲ್ಪಟ್ಟವರಿಗೆ ಮಾತ್ರ) ಹೋಗಿ ಬರಲು ಅವಕಾಶ ನೀಡಲಾಗುವುದು ಎಂದರು. ಇನ್ನು ‘ಗ್ರೇಟ್ ಕೆನರಾ ಟ್ರೇಲ್’ ಹೊನ್ನಾವರದ ಗೇರಸೊಪ್ಪಾದಿಂದ ಶಿರಸಿ, ಯಲ್ಲಾಪುರ ಮಾರ್ಗವಾಗಿ ಕುವೇಶಿಯವರೆಗೂ 270 ಕಿ.ಮೀ. ಇದೆ. ಕಾಳಿ ರಕ್ಷಿತ ಪ್ರದೇಶದ 75 ಕಿ.ಮೀ. ಗಳಲ್ಲಿ ಈ ಟ್ರೇಲ್ ಸಂಚರಿಸಲಿದ್ದು, ಉಳಿದಿದ್ದು ಯಲ್ಲಾಪುರ, ಶಿರಸಿ, ಹೊನ್ನಾವರದಲ್ಲಿದೆ ಎಂದರು

click me!