ಅರಣ್ಯ ಅಧಿಕಾರಿಯಿಂದ ಭ್ರಷ್ಟಾಚಾರ!: ದಾಖಲೆ ಸಮೇತ ದೂರು ನೀಡಿದರೂ ಮೌನ ವಹಿಸಿದ ಸಚಿವ ರಮಾನಾಥ ರೈ?

By Suvarna Web DeskFirst Published Sep 25, 2017, 8:13 AM IST
Highlights

ಇದು ಅರಣ್ಯ ಇಲಾಖೆಯನ್ನೇ ತಿಂದು ತೇಗಿದ ಭ್ರಷ್ಟ ಅಧಿಕಾರಿಯೊಬ್ಬನ ಕಥೆ. ಒಂದಲ್ಲ, ಎರಡಲ್ಲ ಕೋಟ್ಯಾಂತರ ರೂಪಾಯಿ ನುಂಗಿ ನೀರು ಕುಡಿದರೂ ಆತನ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ಸ್ವತಃ ಅರಣ್ಯ ಸಚಿವರೇ ಅವರಿಗೇ ದಾಖಲೆ ಸಮೇತ ದೂರು ನೀಡಿದ್ರೂ ಪ್ರಯೋಜನವಾಗಿಲ್ಲ. ಯಾರು ಆ ಅಧಿಕಾರಿ ಇಲ್ಲಿದೆ ವಿವರ.

ಹುಬ್ಬಳ್ಳಿ(ಸೆ.25): ಈ ಪೋಟೋದಲ್ಲಿರುವ ಇವನ ಹೆಸರು ಸಿ‌.ಎಚ್. ಮಾವಿನತೋಪ್. ನಿನ್ನೆ ಮೊನ್ನೆಯಷ್ಟೇ ಹುಬ್ಬಳ್ಳಿ ವಲಯ ಅರಣ್ಯಾಧಿಕಾರಿಯಗಿದ್ದ ಈತ ಅರಣ್ಯ ಇಲಾಖೆಯಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಹೊಡೆದಿದ್ದಾರೆ‌. ನಗರ ಹಸಿರೀಕರಣ‌ ಯೋಜನೆ, ಕೆರೆಗಳ ಅಭಿವೃದ್ಧಿ, ವಾಚರ್ ನೇಮಕ ಸೇರಿದಂತೆ ಹಲವು ಯೋಜನೆಗಳಲ್ಲಿ ಕೋಟಿ ಕೋಟಿ ಹಣ ಲೂಟಿ ಹೊಡೆದಿದ್ದಾನೆ. ಈ ಬ್ರಹ್ಮಾಂಡ ಭ್ರಷ್ಟಾಚಾರ ದಾಖಲೆ ಸಮೇತ ಬಯಲಾಗುತ್ತಿದ್ದಂತೆ, ಬೀಜ ನಿಗಮಕ್ಕೆ ಎರವಲು ಸೇವೆ ಮೇಲೆ ತೆರಳಿದ್ದಾರೆ.

ಈ ಅಧಿಕಾರಿ ನಡೆಸಿರುವ  ಭ್ರಷ್ಟಾಚಾರ ಒಂದೆರಡಲ್ಲ. ಈ ಭ್ರಷ್ಟ ಅಧಿಕಾರಿಯ ವಿರುದ್ಧ  ಮಾಹಿತಿ‌ ಹಕ್ಕು ಹೋರಾಟಗಾರ ಮಂಜುನಾಥ್ ಬದ್ದಿ ಅರಣ್ಯ ಇಲಾಖೆಗೆ ದಾಖಲೆ ಸಮೇತ ದೂರು ನೀಡಿದ್ದಾರೆ. ತನಿಖೆಯಲ್ಲಿ ಅಕ್ರಮ ಸಾಬೀತಾಗಿದ್ರೂ ಯಾವುದೇ ಕ್ರಮ ಜರುಗಿಲ್ಲ.

ಇನ್ನು ದೂರುದಾರ ಸ್ವತಃ ಅರಣ್ಯ ಸಚಿವ ರಾಮನಾಥ ರೈ ಅವರಿಗೆ 10ಕ್ಕೂ ಹೆಚ್ವು  ಬಾರಿ ದೂರು ನೀಡಿದ್ದಾರೆ. ಆದ್ರೆ ಸಚಿವರು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳೇ  ಭ್ರಷ್ಟ ಅಧಿಕಾರಿಯ ಬೆನ್ನಿಗೆ ನಿಂತಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ಅರಣ್ಯ ಅಧಿಕಾರಿ ಕೋಟ್ಯಾಂತರ ರೂಪಾಯಿ ನುಂಗಿ ನೀರು ಕುಡಿದಿದ್ದೂ ಸಾಭೀತಾಗಿದ್ರೂ  ಕ್ರಮ ಕೈಗೊಳ್ಳದನ್ನು ನೋಡಿದ್ರೆ ಇದರಲ್ಲಿ ಸಚಿವರ ಪಾಲು ಇದೆಯೋ ಎಂಬ ಅನುಮಾನ ಮೂಡಿದೆ.

click me!