ಭ್ರಷ್ಟ ಅಧಿಕಾರಿಗಳಿಗೆ ಸ್ಪಾಟ್ ನಲ್ಲೇ ಗೇಟ್ ಪಾಸ್, ಇದು ಯೋಗಿ ಸ್ಟೈಲ್

By Web DeskFirst Published Jun 21, 2019, 5:35 PM IST
Highlights

ಭ್ರಷ್ಟ ಅಧಿಕಾರಿಗಳಿಗೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಬಿಸಿ ಮುಟ್ಟಿಸುವ ಕೆಲಸ ಮಾಡಿದ್ದಾರೆ. ಭ್ರಷ್ಟತನಕ್ಕೆ ಇಳಿದರೆ ಕಡ್ಡಾಯ ನಿವೃತ್ತಿ ಪಡೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಲಕ್ನೋ[ಜೂ. 21]  ದಿಟ್ಟ ತೀರ್ಮಾನಗಳಿಗೆ ಹೆಸರುವಾಸಿಯಾಗಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಮತ್ತೊಂದು ಖಡಕ್ ಆದೇಶ ಹೊರಡಿಸಿದ್ದಾರೆ.

ರಾಜ್ಯದಲ್ಲಿರುವ ಭ್ರಷ್ಟ ಮತ್ತು ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ಪಟ್ಟಿಯನ್ನು ಸಿದ್ಧ ಮಾಡುವಂತೆ ತಿಳಿಸಿದ್ದು ಅವರಿಗೆಲ್ಲ ಕಡ್ಡಾಯ ನಿವೃತ್ತಿ ನೀಡಲು ಮುಂದಾಗಿದ್ದಾರೆ.

ಯೋಗಿ ಅತ್ಯಾಚಾರಿ ಎಂದವರ ವಿರುದ್ಧ ಕೇಸ್

ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿದ ಯೋಗಿ, ಭ್ರಷ್ಟರು ಆಡಳಿತದಲ್ಲಿ ಇರಲು ಸಾಧ್ಯವೇ ಇಲ್ಲ ಎಂದು ತಿಳಿಸಿದರು. ರಾಜ್ಯದ ಆಡಳಿತ ನಡೆಯುವ ವಿಧಾನ ಭವನದ ಸುತ್ತ ಮುತ್ತ ಯಾವುದೇ ಬ್ಯಾನರ್, ಹೋಲ್ಡಿಂಗ್ಸ್ ಇರುವಂತೆ ಇಲ್ಲ. ಹೊರಗಿನಿಂದ ಬರುವವರು ಭವನದ ಒಳಗೆ ಮೊಬೈಲ್ ತರುವಂತೆಯೂ ಇಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ರಾಜ್ಯದದಲ್ಲಿ ಇ-ಆಡಳಿತ ಹೇಗೆ ನಡೆದಿದೆ ಎಂದು ಸಹ ಯೋಗಿ ಮಾಹಿತಿ ಪಡೆದುಕೊಂಡರು. ಉತ್ತರ ಪ್ರದೇಶದ 25 ಇಲಾಖೆಗಳ ಶೇ. 95 ರಷ್ಟು ಕೆಲಸಗಳು ಆನ್ ಲೈನ್ ತಂತ್ರಜ್ಞಾನದ ಮುಖೇನವೇ ನಡೆದಿದೆ ಎಂದು  ರಾಜ್ಯದ ಹೆಚ್ಚುವರಿ ಕಾರ್ಯದರ್ಶಿ  ಮಹೇಶ್ ಗುಪ್ತಾ ತಿಳಿಸಿದರು.

click me!