'ನಾನೇನು ತೊಡೆ ಸಂದಿ ಇಟ್ಟುಕೊಂಡಿದ್ದೇನಾ ಬೇಕಾದ್ರೆ ಹುಡುಕಿ': ನಾಗನ ಹೆಂಡತಿ ಉತ್ತರ ಕೇಳಿ ಶಾಕಾದ ಪೊಲೀಸರು

Published : Apr 14, 2017, 02:27 AM ISTUpdated : Apr 11, 2018, 12:36 PM IST
'ನಾನೇನು ತೊಡೆ ಸಂದಿ ಇಟ್ಟುಕೊಂಡಿದ್ದೇನಾ ಬೇಕಾದ್ರೆ ಹುಡುಕಿ': ನಾಗನ ಹೆಂಡತಿ ಉತ್ತರ ಕೇಳಿ ಶಾಕಾದ ಪೊಲೀಸರು

ಸಾರಾಂಶ

ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಎಸಿಪಿ ನಾಗರಾಜ್ ನೇತೃತ್ವದಲ್ಲಿ 40 ಕ್ಕೂ ಹೆಚ್ಚು ಪೊಲೀಸರು ಸರ್ಚ್ ವಾರಂಟ್'ನೊಂದಿಗೆ  ಶ್ರೀರಾಂಪುರದ ಮನೆಯ ಮೇಲೆ ಇಂದು ಮುಂಜಾನೆ ದಾಳಿ ನಡೆಸಿದ್ದರು. ಬಾಗಿಲು ತೆಗೆಯದೆ ಹೊರಗಡೆಯಿಂದಲೇ ಬೀಗ ಹಾಕಿಕೊಂಡಿದ್ದ ನಾಗ. ಪೊಲೀಸರು ಎಷ್ಟು ಕೂಗಿದರೂ ಬಾಗಿಲು ತೆಗೆಯಲಿಲ್ಲ. ನಂತರ ಬೀಗ ಮುರಿದು ಒಳ ಪ್ರವೇಶಿಸಿದರು.

ಬೆಂಗಳೂರು(ಏ.14): ಮಾಜಿ ರೌಡಿ ಶೀಟರ್ ನಾಗನ ಮನೆಯ ಮೇಲೆ ದಾಳಿ ಮಾಡಿದ ಪೊಲೀಸರಿಗೆ ಆತನ ಮನೆಯಲ್ಲಿ ದೊರಕಿದ ಕೊಟ್ಯಂತರ ರೂ. ರದ್ದಾದ ನೋಟುಗಳು ಸಿಕ್ಕಿದ್ದಕ್ಕಿಂತ ಆತನ ಹೆಂಡತಿಯ ಮಾತು ಕೇಳಿ ಶಾಕ್ ಆಗಿದ್ದಾರೆ.

ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಎಸಿಪಿ ನಾಗರಾಜ್ ನೇತೃತ್ವದಲ್ಲಿ 40 ಕ್ಕೂ ಹೆಚ್ಚು ಪೊಲೀಸರು ಸರ್ಚ್ ವಾರಂಟ್'ನೊಂದಿಗೆ  ಶ್ರೀರಾಂಪುರದ ಮನೆಯ ಮೇಲೆ ಇಂದು ಮುಂಜಾನೆ ದಾಳಿ ನಡೆಸಿದ್ದರು. ಬಾಗಿಲು ತೆಗೆಯದೆ ಹೊರಗಡೆಯಿಂದಲೇ ಬೀಗ ಹಾಕಿಕೊಂಡಿದ್ದ ನಾಗ. ಪೊಲೀಸರು ಎಷ್ಟು ಕೂಗಿದರೂ ಬಾಗಿಲು ತೆಗೆಯಲಿಲ್ಲ. ನಂತರ ಬೀಗ ಮುರಿದು ಒಳ ಪ್ರವೇಶಿಸಿದರು.

ಮನೆಯಲ್ಲ ಜಾಲಾಡಿದಾಗ  ರದ್ದಾಗಿರುವ 500 ಹಾಗೂ 1000 ನೋಟುಗಳು ಪತ್ತೆಯಾದವು. ಹಲವು ಬ್ಯಾಗ್'ಗಳಲ್ಲಿ ತುಂಬಿರುವ  ಇದು ಸರಿ ಸುಮಾರು 30 ಕೋಟಿಗೂ ಹೆಚ್ಚಿದ್ದು, ಪೊಲೀಸರು 2 ಕೌಟಿಂಗ್ ಮಷಿನ್ ತಂದು ಎಣಿಸುತ್ತಿದ್ದಾರೆ.  

ಈ ಸಂದರ್ಭದಲ್ಲಿ ನಾಗನ ಪತ್ನಿ ಲಕ್ಷ್ಮಿಯನ್ನು ಪೊಲೀಸರು ಪ್ರಶ್ನಿಸಿದ್ದಾರೆ. ಆಗ ಆಕೆ ಏನಂತ ಉತ್ತರ ನೀಡಿದ್ದಾಳೆ ಗೊತ್ತೆ ?

ಪೊಲೀಸರು: ಮನೆಯಲ್ಲಿ ಅಷ್ಟೊಂದು ದುಡ್ಡು ಹೇಗೆ ಬಂತು?

ನಾಗನ ಪತ್ನಿ ಲಕ್ಷ್ಮಿ: ನನಗೇನು ಗೊತ್ತು, ನೀವೆ ತಂದಿಟ್ಟರಬಹುದು

ಪೊಲೀಸರು: ನಾಗ ಎಲ್ಲಿ ಹೋದ ಹೇಳಮ್ಮ?

ನಾನೇನು ತೊಡೆಯಲ್ಲಿ ಬಚ್ಚಿಟ್ಟುಕೊಂಡಿದ್ದಾನಾ? ಪೊಲೀಸರು ತಾನೆ ನೀವೆ ನೀವಿರೋದು ಏತಕ್ಕೆ  ಎಂದು ಧಿಮಾಕಿನ' ಹುಡುಕಿಕೊಳ್ಳಿ' ಎಂದಿದ್ದಾಳೆ. ಈ ಉತ್ತರ ಕೇಳಿ ಪೊಲೀಸರು ಶಾಕಾಗಿದ್ದಾರೆ.

ಶ್ರೀರಾಂಪುರದಲ್ಲಿ ನಾಲ್ಕು ಅಂತಸ್ತಿನ ಐದು ಮನೆಗಳನ್ನು ಹೊಂದಿರುವ ನಾಗ ಪ್ರತಿ ಮನೆಗೂ 30 ಸಿಸಿಟಿವಿಗಳನ್ನ ಅಳವಡಿಸಿದ್ದಾನೆ. ಐದು ಮನೆಗಳ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಟಿ ಬೆಲೆಬಾಳುವ ಲ್ಯಾಂಬೋರ್ಗಿನಿ ಕಾರಿದ್ದರೇನು? ಆರ್‌ಟಿಒ ಅಧಿಕಾರಿಗಳ ಮುಂದೆ ಮಂಡಿಯೂರಿದ ಮಾಲೀಕ!
ಈ ಟ್ರೆಂಡ್ ಶುರು ಮಾಡಿದ್ದು ಮೆಹಬೂಬಾ: ನಿತೀಶ್‌ಕುಮಾರ್ ಬುರ್ಖಾ ಎಳೆದಿದ್ದಕ್ಕೆ ಮುಫ್ತಿಗೆ ಒಮರ್ ಟಾಂಗ್