ಕೇರಳ ಪ್ರವಾಹಕ್ಕೆ ಶಬರಿಮಲೆಗೆ ಮಹಿಳೆಯರ ಪ್ರವೇಶ ಕಾರಣ?

By Web DeskFirst Published Aug 19, 2018, 7:54 AM IST
Highlights

- ಕೇರಳದಲ್ಲಿ ಪ್ರವಾಹ ಉಂಟಾಗಿರುವುದಕ್ಕೂ, ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೂ ಏನಾದರೂ ಸಂಬಂಧ ಇದೆಯೇ?

- ಟ್ವಿಟರ್ ನಲ್ಲಿ ಶುರುವಾಗಿದೆ ಹೊಸ ವಾದ 

- ಅಯ್ಯಪ್ಪ ಸ್ವಾಮಿ ಮುನಿಸಿಕೊಂಡನೇ? 

ಚೆನ್ನೈ (ಆ. 19): ಕೇರಳದಲ್ಲಿ ಪ್ರವಾಹ ಉಂಟಾಗಿರುವುದಕ್ಕೂ, ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೂ ಏನಾದರೂ ಸಂಬಂಧ ಇದೆಯೇ? ಆದರೆ, ಕೆಲವು ಟ್ವೀಟರ್‌ ಬಳಕೆದಾರರು ಮಾತ್ರ ‘ಮಹಿಳೆಯರು ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯವನ್ನು ಪ್ರವೇಶಿಸಲು ಬಯಸಿದ್ದರಿಂದಲೇ ಕೇರಳದಲ್ಲಿ ಪ್ರವಾಹ ಸೃಷ್ಟಿಯಾಗಿದೆ. ಅಯ್ಯಪ್ಪಸ್ವಾಮಿ ಮುನಿಸಿಕೊಂಡಿದ್ದರಿಂದ ಅನಾಹುತ ಸೃಷ್ಟಿಯಾಗಿದೆ’ ಎಂದು ವಾದಿಸಿದ್ದಾರೆ.

ಆರ್‌ಬಿಐ ಮಂಡಳಿಗೆ ನೇಮಕಗೊಂಡಿರುವ ಹಿರಿಯ ಪತ್ರಕರ್ತ ಎಸ್‌. ಗುರುಮೂರ್ತಿ ಅವರು ಕೂಡ ಇದೇ ರೀತಿ ಅರ್ಥಬರುವ ರೀತಿಯಲ್ಲಿ ಟ್ವೀಟ್‌ ಮಾಡಿದ್ದಾರೆ. ಶಬರಿಮಲೆಯಲ್ಲಿ ಪ್ರವಾಹ ಉಂಟಾಗಿರುವುದಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ಸಂಗತಿಯೂ ಕಾರಣವೇ ಎಂಬ ವಿಚಾರವನ್ನು ಗುರುಮೂರ್ತಿ ಅವರು ತೇಲಿ ಬಿಟ್ಟಿದ್ದಾರೆ. ‘ಈ ವಿಷಯವಾಗಿ ಕೂಡ ಸುಪ್ರೀಂಕೋರ್ಟ್‌ ಪರಿಶೀಲನೆ ನಡೆಸಬಹುದು. ಒಂದು ವೇಳೆ ಲಕ್ಷದಲ್ಲಿ ಒಂದೇ ಒಂದು ಅಂಶದಷ್ಟುಸತ್ಯಾಂಶವಿದ್ದರೂ ಜನರು ಅಯ್ಯಪ್ಪನ ವಿರದ್ಧವಾಗಿ ನಡೆದುಕೊಳ್ಳಲು ಇಚ್ಛಿಸುವುದಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ಗೆ ಭಾರೀ ಟೀಕೆಗಳು ವ್ಯಕ್ತವಾಗಿವೆ.

 

Amazed at the hypocrisy of Indian intellectuals who trash people's faith. 99% Indians believe in God. 100%, including liberals, seculars, intellectuals, believe in astrology. Atheist Karunanidhi's followers prayed for him. I am among those who look to God but not astrology!! https://t.co/UJsr9Ip0eP

— S Gurumurthy (@sgurumurthy)

 

click me!