ನ್ಯಾ. ಕಾಟ್ಜು ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ

By Suvarna Web DeskFirst Published Nov 11, 2016, 11:44 AM IST
Highlights

2011 ರಲ್ಲಿ ನಡೆದ ಕೇರಳದ ಸೌಮ್ಯಾ ಎಂಬ ಯುವತಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಅಪರಾಧಿಯ ಶಿಕ್ಷೆ ಅವಧಿಯನ್ನು ಕಡಿಮೆಗೊಳಿಸಿರುವ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿರುವ ನ್ಯಾ.ಮಾರ್ಕಂಡೇಯ ಕಾಟ್ಜುವಿಗೆ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ನೀಡಿದೆ.

ನವದೆಹಲಿ (ನ.11): 2011 ರಲ್ಲಿ ನಡೆದ ಕೇರಳದ ಸೌಮ್ಯಾ ಎಂಬ ಯುವತಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಅಪರಾಧಿಯ ಶಿಕ್ಷೆ ಅವಧಿಯನ್ನು ಕಡಿಮೆಗೊಳಿಸಿರುವ ಬಗ್ಗೆ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿರುವ ನ್ಯಾ.ಮಾರ್ಕಂಡೇಯ ಕಾಟ್ಜುವಿಗೆ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ನೀಡಿದೆ.

ತಮ್ಮ ನಿಲುವನ್ನು ವ್ಯಕ್ತಪಡಿಸಲು ಕಾಟ್ಜುರವರು ಇಂದು ನ್ಯಾಯಾಲಯದೆದುರು ಹಾಜರಾದರು.

ಕಾಟ್ಜುರವರು ಹೇಳಿಕೆ ನೀಡಿರುವುದು ತೀರ್ಪಿನ ಬಗ್ಗೆಯಲ್ಲ. ಬದಲಿಗೆ ತೀರ್ಪು ನೀಡಿದ ನ್ಯಾಯಾಧೀಶರ ಬಗ್ಗೆಯೆಂದು ನ್ಯಾಯಾಲಯ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಕಾಟ್ಜು ನಾನು ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಸೌಮ್ಯಾ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಆರೋಪಿ ಗೋವಿಂದಸ್ವಾಮಿಗೆ ಕೆಳ ಹಂತದ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಸೂಕ್ತ ಸಾಕ್ಷಾಧಾರವಿಲ್ಲದಿರುವುದರಿಂದ ಸುಪ್ರೀಂಕೋರ್ಟ್ ಶಿಕ್ಷೆಯನ್ನು 14 ವರ್ಷಕ್ಕಿಳಿಸಿತ್ತು. ಇದ ಕಾಟ್ಜು “ ಸೌಮ್ಯಾ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥನಿಗೆ ಶಿಕ್ಷೆ ವಿಧಿಸುವಲ್ಲಿ ಸುಪ್ರೀಂಕೋರ್ಟ್ ಎಡವಿದೆ. ಈ ತೀರ್ಪನ್ನು ಪುನರ್ ಪರಿಶೀಲಿಸಬೇಕು" ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದರು.

click me!