ಪೆಟ್ರೋಲ್ ಖರೀದಿಯಲ್ಲಿ ಕಾರ್ಡ್ ಬಳಸಿದರೆ ಹೆಚ್ಚುವರಿ ಶುಲ್ಕವನ್ನು ಗ್ರಾಹಕರು ಭರಿಸುವ ಅಗತ್ಯವಿಲ್ಲ

By Suvarna Web DeskFirst Published Jan 12, 2017, 1:27 PM IST
Highlights

ಪೆಟ್ರೋಲ್ ಖರೀದಿಸುವಾಗ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿದರೆ ವಿಧಿಸುತ್ತಿದ್ದ ಹೆಚ್ಚುವರಿ ಶುಲ್ಕವನ್ನು ಬ್ಯಾಂಕ್ ಮತ್ತು ತೈಲ ಮಾರಾಟ ಕಂಪನಿ ಭರಿಸಲಿದೆ ಎಂದು ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ನವದೆಹಲಿ (ಜ.12): ಪೆಟ್ರೋಲ್ ಖರೀದಿಸುವಾಗ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿದರೆ ವಿಧಿಸುತ್ತಿದ್ದ ಹೆಚ್ಚುವರಿ ಶುಲ್ಕವನ್ನು ಬ್ಯಾಂಕ್ ಮತ್ತು ತೈಲ ಮಾರಾಟ ಕಂಪನಿ ಭರಿಸಲಿದೆ ಎಂದು ಕೇಂದ್ರ ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಪೆಟ್ರೋಲ್ ಬಂಕ್ ಗಳಲ್ಲಿ ಡಿಜಿಟಲ್ ಟ್ರಾನ್ಸಾಕ್ಷನ್ ಮಾಡಿದರೆ ಗ್ರಾಹಕರಿಗೆ ಎಂಡಿಆರ್ (ಮರ್ಚೆಂಟ್ ಡಿಸ್ಕೌಂಟ್ ರೇಟ್) ನ್ನು ವಿಧಿಸುವುದಿಲ್ಲ. ಬ್ಯಾಂಕುಗಳು ಮತ್ತು ತೈಲ ಮಾರಾಟ ಕಂಪನಿ ಈ ಶುಲ್ಕವನ್ನು ಭರಿಸಲಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಗಳಲ್ಲಿ ಪಾವತಿ ಮಾಡಿದರೆ ಗ್ರಾಹಕರ ಮೇಲೆ ಎಂಡಿಆರ್  ಶುಲ್ಕವನ್ನು ವಿಧಿಸಲಾಗುತ್ತಿತ್ತು. ಆದರೆ ನೋಟು ನಿಷೇಧದ ಬಳಿಕ ಡಿಜಿಟಲ್ ಟ್ರಾನ್ಸಾಕ್ಷನ್ ನ್ನು ಉತ್ತೇಜಿಸಲು ಡಿ. 30 ರವರೆಗೆ ಇದನ್ನು ಮನ್ನಾ ಮಾಡಲಾಗಿತ್ತು.

ಕಾರ್ಡ್ ಬಳಕೆಯಿಂದ ಹೆಚ್ಚುವರಿ ಶುಲ್ಕದ ಹೊರೆಯನ್ನು ಗ್ರಾಹಕರ ಮೇಲೆ ಹಾಕುವಂತಿಲ್ಲವೆಂದು ಸರ್ಕಾರ ಸ್ಪಷ್ಟವಾಗಿ ಹೇಳಿದ ನಂತರ ಬ್ಯಾಂಕುಗಳು ಎಂಡಿಆರ್ ನ್ನು ಪೆಟ್ರೋಲ್ ಬಂಕ್ ಗಳ ಮೇಲೆ ವಿಧಿಸಲು ನಿರ್ಧರಿಸಿದ್ದವು.

ಯಾರು, ಎಷ್ಟು ಪ್ರಮಾಣದಲ್ಲಿ ಶುಲ್ಕವನ್ನು ಭರಿಸಬೇಕೆಂದು ಬ್ಯಾಂಕುಗಳು ಮತ್ತು ಪೆಟ್ರೋಲ್ ಬಂಕ್ ಗಳು ಚರ್ಚೆಯನ್ನು ಮುಂದುವರೆಸಲಿದೆ ಎಮದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

click me!