ಕಟ್ಟಡ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಆಗ್ರಹ

By Suvarna Web DeskFirst Published Dec 1, 2016, 2:41 PM IST
Highlights

ರಾಜ್ಯ ಸರ್ಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ತೆರಿಗೆ ರೂಪದಲ್ಲಿ ರೂ. 4200 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿದೆ. ಪ್ರತಿ ವರ್ಷ ಸಂಗ್ರಹಿಸಿದ ಹಣದಿಂದ ರೂ. 400 ಕೋಟಿ ಬಡ್ಡಿ ಬರುತ್ತದೆ.

ಬೆಳಗಾವಿ (ಡಿ.01): ರಾಜ್ಯ ಸರ್ಕಾರ ಕಟ್ಟಡ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಆಗ್ರಹಿಸಿ ಬೆಳಗಾವಿ ಜಿಲ್ಲಾ ಕಟ್ಟಡ ಹಾಗೂ ಇತರೇ ನಿರ್ಮಾಣ ಕಾರ್ಮಿಕರ ಸಂಘದ ಸಾವಿರಾರು ಕಾರ್ಮಿಕರು ಬೆಳಗಾವಿಯ ಸುವರ್ಣ ವಿಧಾನಸೌಧ ಹೊರಗೆ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ ಕಾರ್ಮಿಕರ ಕಲ್ಯಾಣಕ್ಕಾಗಿ ತೆರಿಗೆ ರೂಪದಲ್ಲಿ ರೂ. 4200 ಕೋಟಿಗೂ ಹೆಚ್ಚು ಹಣ ಸಂಗ್ರಹಿಸಿದೆ. ಪ್ರತಿ ವರ್ಷ ಸಂಗ್ರಹಿಸಿದ ಹಣದಿಂದ ರೂ. 400 ಕೋಟಿ ಬಡ್ಡಿ ಬರುತ್ತದೆ.

Latest Videos

ಆದರೂ, ಸಹ ಕಾನೂನಿನ ಪ್ರಕಾರ ಕಾರ್ಮಿಕರಿಗೆ ಮದುವೆ, ವೈದ್ಯಕೀಯ, ಮನೆ ಕಟ್ಟಲಿಕ್ಕೆ, ಪಿಂಚಣಿ ಧನ ನೀಡಲು ಮುಂದಾಗುತ್ತಿಲ್ಲ . ಅರ್ಜಿ ಸಲ್ಲಿಸಿದ್ರು ಸೌಲಭ್ಯಗಳು ಸಿಗುತ್ತಿಲ್ಲ. ಹೀಗಾಗಿ ಸರ್ಕಾರ ಕಾರ್ಮಿಕರ ಎಲ್ಲ ಸೌಲಭ್ಯಗಳನ್ನ ಸಕಾಲದಡಿ ತರಬೇಕು. ಕಟ್ಟಡ ಕಾರ್ಮಿಕರ ಹೋರಾಟಗಾರರ ಮೇಲೆ ಹಾಕಿರುವ ಪ್ರಕರಣ ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮುಂದಾಗಬೇಕೆಂದು ಆಗ್ರಹಿಸಿದರು.

click me!