ಡೈರಿ ಹಿಂದೆ ಕಾಣದ ಕೈಗಳು: ವಿಶ್ವನಾಥ್

By Suvarna Web DeskFirst Published Feb 24, 2017, 4:15 PM IST
Highlights

ತಕ್ಷಣ ಗೋವಿಂದರಾಜುವನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಆಗ್ರಹಿಸಿದ  ವಿಶ್ವನಾಥ್, ಗೃಹ ಸಚಿವ ಪರಮೇಶ್ವರ್ ತಕ್ಷಣ ಈ ಬಗ್ಗೆ ಗೋವಿಂದರಾಜು ಮೇಲೆ ಕೇಸು ಹಾಕಿ ತನಿಖೆ ಮಾಡಿಸಲಿ.

ಮೈಸೂರು (ಫೆ.24): ಕಾಂಗ್ರೆಸ್ ಹೈಕಮಾಂಡ್ ನಿಯಂತ್ರಿಸಲು ಕಾಣದ ಕೈಗಳು ಎಂಎಲ್’ಸಿ ಗೋವಿಂದರಾಜು ಮೂಲಕ ಷಡ್ಯಂತ್ರ ಮಾಡಿವೆ ಎಂದು ಹಿರಿಯ ಕಾಂಗ್ರೆಸ್ಸಿಗ ಹೆಚ್​.ವಿಶ್ವನಾಥ್​ ಮೈಸೂರಿನಲ್ಲಿ ಹೇಳಿದ್ದಾರೆ.

ಡೈರಿ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಪಾತ್ರವೇನೂ ಇಲ್ಲ. ಹೈಕಮಾಂಡನ್ನು ಅನಗತ್ಯ ಎಳೆದು ತರುವುದು ಸರಿಯಲ್ಲ ಎಂದಿದ್ದಾರೆ.

ತಕ್ಷಣ ಗೋವಿಂದರಾಜುವನ್ನು ಪಕ್ಷದಿಂದ ಉಚ್ಚಾಟನೆ ಮಾಡುವಂತೆ ಆಗ್ರಹಿಸಿರುವ ಅವರು, ಗೃಹ ಸಚಿವ ಪರಮೇಶ್ವರ್ ತಕ್ಷಣ ಈ ಬಗ್ಗೆ ಗೋವಿಂದರಾಜು ಮೇಲೆ ಕೇಸು ಹಾಕಿ ತನಿಖೆ ಮಾಡಿಸಲಿ.

ಅವರನ್ನು ತಕ್ಷಣ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ತೆಗೆಯಬೇಕು ಎಂದು ವಿಶ್ವನಾಥ್ ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಡೈರಿ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲಿ ಎಂದಿರುವ ವಿಶ್ವನಾಥ್. ಡೈರಿ ವಿವಾದ ಪ್ರಧಾನಿ ಮೋದಿ ಅವರ ಕೊರಳಿಗೂ ಸುತ್ತಿಕೊಂಡಿತ್ತು ಎಂದಿದ್ದಾರೆ.

ಡೈರಿಯಲ್ಲಿ ಹೆಸರು ಕೇಳಿ ಬಂದಿರುವ ಕಾಂಗ್ರೆಸ್​ ರಾಜ್ಯ ಉಸ್ತುವಾರಿ ದಿಗ್ವಿಜಯ್​ ಸಿಂಗ್​ ಬಗ್ಗೆ ಕಿಡಿಕಾರಿದ ಅವರು, ಆರು ತಿಂಗಳ ಹಿಂದೆಯೇ ದಿಗ್ವಿಜಯ ಸಿಂಗ್ ಬದಲಿಸಿ ಬೇರೆ ನೇಮಿಸಿ ಎಂದು ಕೇಳಿಕೊಂಡಿದ್ದೆ ಎಂದರು.

click me!