ರಾಹುಲ್’ಗೆ ಅಧ್ಯಕ್ಷ ಸ್ಥಾನ; ಕಾಂಗ್ರೆಸ್’ನೊಳಗೆ ಸ್ಫೋಟಿಸಿತು ಬಂಡಾಯದ ಕಹಳೆ

Published : Nov 30, 2017, 12:25 PM ISTUpdated : Apr 11, 2018, 01:00 PM IST
ರಾಹುಲ್’ಗೆ ಅಧ್ಯಕ್ಷ ಸ್ಥಾನ; ಕಾಂಗ್ರೆಸ್’ನೊಳಗೆ ಸ್ಫೋಟಿಸಿತು ಬಂಡಾಯದ ಕಹಳೆ

ಸಾರಾಂಶ

ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಸಾರಥ್ಯ ವಹಸಿಲು ಸಿದ್ಧಗೊಳ್ಳುತ್ತಿದ್ದಂತೆಯೇ  ಪಕ್ಷದ ನಾಯಕತ್ವಕ್ಕೆ ಸಂಬಂಧಿಸಿ ಪಕ್ಷದಲ್ಲಿ ಬಂಡಾಯದ ಕಹಳೆ ಮೊಳಗಿದೆ. ಕಾಂಗ್ರೆಸ್ ನಾಯಕ  ಹಾಗೂ ಮಹಾರಾಷ್ಟ್ರ ರಾಜ್ಯ ಕಾರ್ಯದರ್ಶಿ ಶಹಝಾದ್ ಪೂನವಾಲಾ,  ಪಕ್ಷದ ಅಧ್ಯಕ್ಷ ಹುದ್ದೆ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆ. ಅಧ್ಯಕ್ಷ ಸ್ಥಾನ ಆಯ್ಕೆ ಪ್ರಕ್ರಿಯೆಯು ದೋಷಪೂರಿತವಾಗಿದ್ದು, ರಾಹುಲ್ ಗಾಂಧಿ ತಕ್ಷಣ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ನವದೆಹಲಿ: ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಸಾರಥ್ಯ ವಹಸಿಲು ಸಿದ್ಧಗೊಳ್ಳುತ್ತಿದ್ದಂತೆಯೇ  ಪಕ್ಷದ ನಾಯಕತ್ವಕ್ಕೆ ಸಂಬಂಧಿಸಿ ಪಕ್ಷದಲ್ಲಿ ಬಂಡಾಯದ ಕಹಳೆ ಮೊಳಗಿದೆ.

ಕಾಂಗ್ರೆಸ್ ನಾಯಕ  ಹಾಗೂ ಮಹಾರಾಷ್ಟ್ರ ರಾಜ್ಯ ಕಾರ್ಯದರ್ಶಿ ಶಹಝಾದ್ ಪೂನವಾಲಾ,  ಪಕ್ಷದ ಅಧ್ಯಕ್ಷ ಹುದ್ದೆ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆ. ಅಧ್ಯಕ್ಷ ಸ್ಥಾನ ಆಯ್ಕೆ ಪ್ರಕ್ರಿಯೆಯು ದೋಷಪೂರಿತವಾಗಿದ್ದು, ರಾಹುಲ್ ಗಾಂಧಿ ತಕ್ಷಣ ಪಕ್ಷದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗಳು ಪಾರದರ್ಶಕವಾಗಿ ನಡೆದರೆ ತಾನು ಕೂಡಾ ಸ್ಪರ್ಧಿಸುವುದಾಗಿ ಪೂನವಾಲ ಹೇಳಿದ್ದಾರೆ. ಈಗ ನಡೆಯುತ್ತಿರುವುದು ಎಲೆಕ್ಷನ್ (ಚುನಾವಣೆ) ಅಲ್ಲ, ಬದಲಾಗಿ ಸೆಲೆಕ್ಷನ್ (ನೇಮಕ)ವಾಗಿದೆ ಎಂದು ಪೂನವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

(ಪಕ್ಷದ) ಅಧ್ಯಕ್ಷೀಯ ಚುನಾವಣೆಗೆ ಮತದಾರರನ್ನು ಪಕ್ಷದ ಸಂವಿಧಾನದ ನಿಯಮಗಳಿಗನುಸಾರವಾಗಿ  ಆಯ್ಕೆ ಮಾಡಲಾಗಿಲ್ಲ, ಬದಲಾಗಿ ತಮಗೆ ಬೇಕಾದ ಕೆಲವರನ್ನು ಆಯ್ಕೆಮಾಡಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಆದುದರಿಂದ, ನಾನು ಕೂಡಾ ನನ್ನ ಹುದ್ದಗೆ ರಾಜೀನಾಮೆ ನೀಡುತ್ತೇನೆ, ರಾಹುಲ್ ಗಾಂಧಿ ಕೂಡಾ ಪಕ್ಷದ ಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕು, ಎಂದು ಪೂನವಾಲಾ ಹೇಳಿದ್ದಾರೆ.

ಅಭ್ಯರ್ಥಿಗಳು ಸಾಮರ್ಥ್ಯದ ಮೇಲೆ ಸ್ಪರ್ಧಿಸಬೇಕೇ ಹೊರತು ಕುಟುಂಬದ ಹೆಸರಿನಿಂದ ಅಲ್ಲ. ಅದಕ್ಕಾಗಿ  ಪಕ್ಷದ ಬಗ್ಗೆ ಅಭ್ಯರ್ಥಿಗಳು ಯಾವ ದೂರದೃಷ್ಟಿ ಹೊಂದಿದ್ದಾರೆ, ಅವರವರ ಯೋಜನೆಗಳೇನು ಎಂಬಿತ್ಯಾದಿಗಳ ಬಗ್ಗೆ  ಮುಕ್ತ ಚರ್ಚೆಯಾಗಬೇಕು. ಎಂದು ಪೂನವಾಲ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಂಗ್ಲಾದೇಶದಲ್ಲಿ ಅನಾಮಿಕನ ಕೈಚಳಕ, ಒಸ್ಮಾನ್ ಹದಿ ಬೆನ್ನಲ್ಲೇ ಮತ್ತೊಬ್ಬ ನಾಯಕನಿಗೆ ಗುಂಡೇಟು
ದುಬೈನ ಬುರ್ಜ್ ಖಲೀಫಾಗೆ ಬಡಿದ ಸಿಡಿಲು: ವೀಡಿಯೋ ವೈರಲ್