ಲೋಕಸಭೆಯಲ್ಲಿ ಮತ್ತೆ ಕರ್ನಾಟಕ ಪ್ರತಿಧ್ವನಿ: ಕಾಂಗ್ರೆಸ್ ಸಭಾತ್ಯಾಗ!

By Web DeskFirst Published Jul 10, 2019, 6:59 PM IST
Highlights

ಲೋಕಸಭೆಯಲ್ಲಿ‌ ಮತ್ತೆ ಕರ್ನಾಟಕದ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್| ಚರ್ಚೆಗೆ ಅವಕಾಶ‌‌‌ ನೀಡಬೇಕೆಂದು ಕಾಂಗ್ರೆಸ್ ಬಿಗಿಪಟ್ಟು| ಬಿಜೆಪಿ ವಿರುದ್ಧ ಹರಿಹಾಯ್ದ ಅಧೀರ್ ರಂಜನ್ ಚೌಧರಿ| ಚೌಧರಿ ಆರೋಪಕ್ಕೆ‌‌ ತಿರುಗೇಟು ನೀಡಿದ ಪ್ರಹ್ಲಾದ ಜೋಷಿ|

ನವದೆಹಲಿ(ಜು.10): ಲೋಕಸಭೆಯಲ್ಲಿ‌ ಇಂದು ಮತ್ತೆ ಕರ್ನಾಟಕದ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್, ಕರ್ನಾಟಕದ ಬೆಳವಣಿಗೆಯ ಬಗ್ಗೆ ಚರ್ಚೆಗೆ ಅವಕಾಶ‌‌‌ ನೀಡಬೇಕು ಎಂದು ಸತತವಾಗಿ‌‌ ಗದ್ದಲ ನಡೆಸಿತು.

ಕಾಂಗ್ರೆಸ್ ತೀವ್ರ ಪ್ರತಿಭಟನೆ ಪರಿಣಾಮ ಕೊನೆಗೂ ಅಧೀರ್‌ ರಂಜನ್ ಚೌಧರಿ ಅವರಿಗೆ ಮಾತಾನಾಡಲು ಅವಕಾಶ ಸ್ಪೀಕರ್ ಅವಕಾಶ ನೀಡಿದರು.

ಈ ವೇಳೆ ಮಾತನಾಡಿದ ಚೌಧರಿ, ಮಹಾರಾಷ್ಟ್ರದಲ್ಲಿ ಮಾರ್ಷಲ್ ಆಡಳಿತ ಜಾರಿಯಲ್ಲಿದ್ದು, ಕರ್ನಾಟಕದ ಸಚಿವ ಡಿಕೆ ಶಿವಕುಮಾರ್ ಬುಕ್ ಮಾಡಿದ್ದ ರೂಂನ್ನು ಕ್ಯಾನ್ಸಲ್ ಮಾಡಿಸಲಾಗಿದೆ ಎಂದು ದೂರಿದರು.

ಕರ್ನಾಟಕದ  ಸಮ್ಮಿಶ್ರ ಸರ್ಕಾರವನ್ನು ಕೆಡವಲು ಷಡ್ಯಂತ್ರ ನಡೆಯುತ್ತಿದ್ದು, ಇದಕ್ಕೆ ಬಿಜೆಪಿಯೇ ನೇರ ಹೊಣೆ ಎಂದು ಆರೋಪಿಸಿದರು.

ಇನ್ನು ಚೌಧರಿ ಆರೋಪಕ್ಕೆ‌‌ ತಿರುಗೇಟು ನೀಡಿದ ಬಿಜೆಪಿಯ ಪ್ರಹ್ಲಾದ ಜೋಷಿ, ಮುಂಬೈ ಪೊಲೀಸರಿಗೆ ಡಿಕೆಶಿ ಅವರಿಂದ ರಕ್ಷಣೆ ಕೋರಿ 10 ಶಾಸಕರು ಪತ್ರ ಬರೆದಿದ್ದರು. ಈ‌ ಹಿನ್ನೆಲೆಯಲ್ಲಿ ‌ರಕ್ಷಣೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಳಿದು ಪ್ರತಿಭಟನೆ ನಡೆಸಿದ್ದಲ್ಲದೇ ಸಭಾತ್ಯಾಗ ನಡೆಸಿದರು. ತೀವ್ರ ಗದ್ದಲದ ಪರಿಣಾಮ ಸ್ಪೀಕರ್ ಸದನವನ್ನು ಮುಂದೂಡಿದ ಪ್ರಸಂಗವೂ ನಡೆಯಿತು.

click me!