ಇಂದಿರಾ ಮತ್ತು ಪ್ರಿಯಾಂಕಾ: ಕಾಂಗ್ರೆಸ್‌ಗೆ ಇದೆಲ್ಲಾ ಬೇಕಾ?

By Web Desk  |  First Published Jan 24, 2019, 4:17 PM IST

ಪ್ರಿಯಾಂಕಾ ಎಂಟ್ರಿ ಸಂಭ್ರಮಿಸುತ್ತಿರುವ ಕಾಂಗ್ರೆಸ್| ಉತ್ತರ ಪ್ರದೇಶ ಪೂರ್ವ ವಿಭಾಗದ ಕಾಂಗ್ರೆಸ್ ಪ್ರಧಾನ ಉಸ್ತುವಾರಿ ಕಾರ್ಯದರ್ಶಿ| ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜೊತೆಗಿನ ಫೋಟೋ ಶೇರ್| ಅಜ್ಜಿ, ಮೊಮ್ಮಗಳ ಫೋಟೋ ವೈರಲ್


ನವದೆಹಲಿ(ಜ.24): ಗಾಂಧಿ ಪರಿವಾರದ ಮತ್ತೊಂದು ಕುಡಿ ಕೊನೆಗೂ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದೆ. ಸೋನಿಯಾ ಗಾಂಧಿ ಮಗಳು, ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ರಾಜಕೀಯ ಪ್ರವೇಶಿಸಿದ್ದಾರೆ.

ರಾಜಕೀಯದಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಉತ್ತರ ಪ್ರದೇಶ ಪೂರ್ವ ವಿಭಾಗದ ಕಾಂಗ್ರೆಸ್ ಪ್ರಧಾನ ಉಸ್ತುವಾರಿ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

Tap to resize

Latest Videos

ಇನ್ನು ಪ್ರಿಯಾಂಕಾ ರಾಜಕೀಯ ಪ್ರವೇಶವನ್ನು ಕಾಂಗ್ರೆಸ್ ಸಂಭ್ರಮಿಸುತ್ತಿದ್ದು, ಪ್ರಿಯಾಂಕಾ ಗಾಂಧಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದೆ.

ಪ್ರಿಯಾಂಕಾ ಮಗುವಾಗಿದ್ದಾಗ ತಮ್ಮ ಅಜ್ಜಿ ಇಂದಿರಾ ಗಾಂಧಿ ಅವರೊಂದಿಗೆ ಆಟವಾಡುತ್ತಿರುವ ಫೋಟೋ ಇದಾಗಿದ್ದು, #LikeGrandmotherLikeGranddaughter, #Family and #Love ಎಂಬ ಅಡಿಬರಹದಲ್ಲಿ ಶೇರ್ ಮಾಡಲಾಗಿದೆ.

click me!