ಬೇಗ್ ಗೆ ಕೊಟ್ಟ ಏಟಿಗೆ ಇನ್ನುಳಿದ ಕಾಂಗ್ರೆಸ್ ಅತೃಪ್ತ ನಾಯಕರು ಫುಲ್ ಸೈಲೆಂಟ್

By Web DeskFirst Published Jun 22, 2019, 6:51 PM IST
Highlights

ಗುಂಪಿನ ಓರ್ವ ನಾಯಕನಿಗೆ ಬಿದ್ದ ಪೆಟ್ಟಿನಿಂದ ಇನ್ನುಳಿದ ಕಾಂಗ್ರೆಸ್ ಅತೃಪ್ತ ನಾಯಕರು ಥಂಡ ಹೊಡೆದಿದ್ದು, ತುಟಿಕ್ ಪಿಟಿಕ್ ಎನ್ನದೆ ಫುಲ್ ಸೈಲೆಂಟ್ ಮೂಡ್ ಗೆ ಜಾರಿದ್ದಾರೆ.

ಬೆಳಗಾವಿ, [ಜೂ.22]: ಬೆಂಗಳೂರಿನ ಶಿವಾಜಿನಗರ ಶಾಸಕ ರೊಷನ್ ಬೇಗ ವಿರುದ್ದ ಕ್ರಮ ಜರುಗಿಸಿದ್ದಕ್ಕೆ ಇನ್ನುಳಿದ ಅಸಮಾಧಾನಿತ ಕಾಂಗ್ರೆಸ್ ನಾಯಕರು ಪುಲ್ ಸೈಲೆಂಟ್ ಆಗಿದ್ದಾರೆ.

ಇದಕ್ಕೆ ಪೂರಕವೆಂಬಂತೆ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದ ಹಿರಿಯ ಶಾಸಕ ರಾಮಲಿಂಗರೆಡ್ಡಿ ಈಗ ಸುಮ್ಮನಾಗಿದ್ದಾರೆ.

ಕಾಂಗ್ರೆಸ್ ನಿಂದ ಶಿವಾಜಿನಗರ ಶಾಸಕ ರೋಶನ್ ಬೇಗ್ ಸಸ್ಪೆಂಡ್

ಇಂದು [ಶನಿವಾರ] ಬೆಳಗಾವಿಯ ರಾಮದುರ್ಗದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ  ಮಾಜಿ ಸಚಿವ ರಾಮಲಿಂಗಾರೆಡ್ಡಿ ಉತ್ತರ ನೀಡಲು ಹಿಂದೇಟು ಹಾಕಿದರು. ಸಚಿವ‌ ಸ್ಥಾನ ಕೈ ತಪ್ಪಿದ್ದಕ್ಕೆ ಪ್ರತಿಕ್ರಿಯೆ ನೀಡುಲು ಹಿಂದೇಟು ಹಾಕಿದ ರೆಡ್ಡಿ, ನಾನು‌ ಹಿಂದೆ ಮಾತನಾಡಿದ್ದೆನೆ, ಹೀಗೇನೂ ಮಾತಾಡಲ್ಲ.  ಸಂಪುಟ ವಿಸ್ತರಣೆಯ ಬಗ್ಗೆ ಪದೇ-ಪದೇ ಮಾತನಾಡಲ್ಲ ಎಂದು ಹೇಳಿ ಜಾರಿಕೊಂಡರು.

ಇನ್ನು ದೆವೆಗೌಡರ ಹೆಳಿಕೆಗೆ ಪ್ರತಿಕ್ರಿಯಿಸಿದ ಅವರು, ಸರಕಾರ ಬೀಳಲ್ಲ, ಸಣ್ಣಪುಟ್ಟ ಅಸಮಾದಾನಗಳು ಇರುತ್ತೆ. ಸಮ್ಮಿಶ್ರ ಸರಕಾರ ಅಂದಾಗ ಎಲ್ಲವೂ ಸರಿ ಇರಲ್ಲ. ಹೊಂದಾಣಿಕೆ ಮಾಡಿಕ್ಕೊಂಡು‌ ಹೋಗಬೇಕು ಎಂದರು.

ಒಟ್ಟಿನಲ್ಲಿ ಮೊದಲು ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದ ರಾಮಲಿಂಗರೆಡ್ಡಿ, ಇಂದು ಯಾವುದೇ ಕಾರಣಕ್ಕೂ ಯಾವೊಬ್ಬ ನಾಯಕರ ಬಗ್ಗೆ ಮಾತನಾಡಲಿಲ್ಲ.

ಬೇಗ್ ಗೆ ಕೊಟ್ಟ ಶಿಕ್ಷೆಯಿಂದಾಗಿ ಮೊದಲಿನಂತೆ ಅತೃಪ್ತ ಕಾಂಗ್ರೆಸ್ ನಾಯಕರು ಬಾಯಿಬಿಡುತ್ತಿಲ್ಲ. ರೋಷನ್ ಬೇಗ್ ಗೆ ಬಂದ ಗತಿ ನಮಗೂ ಬರಬಹುದು ಎಂದು ಥಂಡ ಹೊಡೆದಿದ್ದಾರೆ. 

click me!