ಮೈತ್ರಿಯಲ್ಲಿ ಬಿರುಕು : ಎನ್ ಡಿಎಗೆ ಮತ್ತೊಂದು ಹಿನ್ನಡೆ..?

First Published Jul 6, 2018, 2:06 PM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಎನ್ ಡಿಎ ಮೈತ್ರಿಕೂಟಕ್ಕೆ ಮತ್ತೊಂದು ಹಿನ್ನಡೆಯಾಗುವ ಸಾಧ್ಯತೆ ಇದೆ. ಬಿಹಾರದಲ್ಲಿ ಮೈತ್ರಿ ಸರ್ಕಾರ ರಚಿಸಿಕೊಂಡಿರುವ ಬಿಜೆಪಿ ಹಾಗೂ ಜೆಡಿಯು ನಡುವೆ ಅಸಮಾಧಾನ ಎದ್ದಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. 

ಪಾಟ್ನಾ :  ಬಿಹಾರದಲ್ಲಿ ಮೈತ್ರಿ ಮಾಡಿಕೊಂಡು ಸರ್ಕಾರ  ರಚನೆ ಮಾಡಿಕೊಂಡಿರುವ ಬಿಜೆಪಿ ಹಾಗೂ - ಜೆಡಿಯು ನಡುವೆ ಎಲ್ಲವೂ ಸರಿಯಾಗಿಲ್ಲ ಎನ್ನುವ ಗುಸು ಗುಸು ಆರಂಭವಾಗಿದ್ದು,  ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಇರಲು ಇಚ್ಚೀಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. 

ಈ ಬಗ್ಗೆ ಮಾತನಾಡಿದ ಎಐಸಿಸಿ ಇನ್ ಚಾರ್ಜ್ ಶಕ್ತಿ ಸಿನ್ಹಾ ಗೋಹಿಲ್, ನಿತೀಶ್ ಕುಮಾರ್ ಬಿಜೆಪಿಯೊಂದಿಗಿನ ಮೈತ್ರಿಯಲ್ಲಿ ಅಸಮಾಧಾನ ಇದೆ ಎನ್ನುವುದು ತಿಳಿದು ಬರುತ್ತಿದೆ. 

ಅಲ್ಲದೇ ಪ್ರಧಾನಿ ಮೋದಿ ಅವರು ನಡೆಸಿದ ಯೋಗಾ ಡೇಯಲ್ಲೂ ಕೂಡ ಬಿಹಾರ ಸಿಎಂ ನಿತೀಶ್ ಕುಮಾರ್ ಪಾಲ್ಗೊಂಡಿಲ್ಲ. ಕೇಂದ್ರ ಸರ್ಕಾರ ಪರಿಚಯಿಸಿದ ಬೆಳೆ ವಿಮೆ ಯೋಜನೆಯನ್ನೂ ಕೂಡ ಜಾರಿಗೆ ತರದೇ ತಮ್ಮದೇ ಆದ ಹೊಸ ಯೋಜನೆಯನ್ನು ನಿತೀಶ್ ಆರಂಭ ಮಾಡಿದ್ದಾರೆ. 

ಅಲ್ಲದೇ ಇತ್ತೀಚೆಗೆ ನಡೆದ ನೀತಿ ಆಯೋಗದ ಸಭೆಯಲ್ಲಿಯೂ ಕೂಡ ಬಿಹಾರಕ್ಕೆ ನೀಡಬೇಕಾದ ಕೇಂದ್ರದ ನೆರವಿನ ಬಗ್ಗೆ ಪ್ರಸ್ತಾಪಿಸಿದ್ದು, ಆದರೆ ಪ್ರಧಾನಿ ಮೋದಿ ಅವರು ಇದಕ್ಕೆ ಯಾವುದೇ ಅಂಗೀಕಾರ ನೀಡಲಿಲ್ಲ. ಇದು ಮುಖ್ಯಮಂತ್ರಿಯೋರ್ವರಿಗೆ ಮಾತ್ರವೇ ಮಾಡಿದ ದ್ರೋಹವಲ್ಲ. ಇದು ಸಂಪೂರ್ಣ ಬಿಹಾರಿಗಳಿಗೂ ಮಾಡಿದ ದ್ರೋಹ ಎಂದು ಹೇಳಿದರು. 

click me!