
ಬೆಂಗಳೂರು (ಫೆ.21): ಶಾಸಕ ಹ್ಯಾರೀಸ್ ಮಗ ಆಯ್ತು ಈಗ ಇನ್ನೊಬ್ಬ ಕಾಂಗ್ರೆಸ್ ಶಾಸಕರ ಗೂಂಡಾಗಿರಿ ನಡೆದಿದೆ. ಯಶವಂತಪುರ ಕ್ಷೇತ್ರದ ಶಾಸಕ ಸೋಮಶೇಖರ್ ಅಧಿಕಾರದ ದರ್ಪ ತೋರಿದ್ದಾರೆ.
ಕಾಂಗ್ರೆಸ್ ಸಮಾವೇಶಕ್ಕೆ ಜಾಗ ನೀಡದ ಪುಟ್ಟರಾಜು ಎಂಬುವರ ಕೆಲಸಗಾರ ಪ್ರಕಾಶ್ ಮೇಲೆ ಕಾಂಗ್ರೆಸ್ ಶಾಸಕ ಸೋಮಶೇಖರ್ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಲಾಂಗು-ಮಚ್ಚು, ದೊಣ್ಣೆ, ಕಲ್ಲುಗಳಿಂದ ಅಟ್ಟಾಡಿಸಿ ಪ್ರಕಾಶ್ ಎಂಬುವವರ ಮೇಲೆ ಸೋಮಶೇಖರ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ.
ಫೆ.18ರಂದು ತಿಗರಳರಪಾಳ್ಯದಲ್ಲಿ ಕಾಂಗ್ರೆಸ್ ಸಮಾವೇಶವಿತ್ತು. ಪುಟ್ಟರಾಜು ಎಂಬುವರ ಬಳಿ ಸೋಮಶೇಖರ್ 4 ಎಕರೆ ಖಾಲಿ ಜಾಗ ಕೇಳಿದ್ದರು. ಖಾಲಿ ಜಾಗಕ್ಕೆ ಕಾಂಪೌಂಡ್ ಹಾಕಿದ್ದರಿಂದ ಪುಟ್ಟರಾಜು ಕೊಡಲು ನಿರಾಕರಿಸಿದ್ದರು.
ಶಾಸಕ ಸೋಮಶೇಖರ್ಗೂ, ಪುಟ್ಟರಾಜುಗೂ ಆಗಾಗ ಜಗಳ ನಡೆಯುತ್ತಿತ್ತು. ಪುಟ್ಟರಾಜು ಖಾಲಿ ಜಮೀನಿನಲ್ಲಿದ್ದ ರಸ್ತೆ ಬಿಡುವಂತೆ ಶಾಸಕರ ಬೆಂಬಲಿಗರು ಒತ್ತಾಯಪಡಿಸುತ್ತಿದ್ದರು. ಆಗಾಗ ಖಾಲಿ ಜಾಗಕ್ಕೆ ಹಾಕಲಾಗಿದ್ದ ಕಂಪೌಂಡ್ ಕೆಡವಿ ತೊಂದರೆ ನೀಡುತ್ತಿದ್ದರು. ಇದೇ ದ್ವೇಷದ ಹಿನ್ನೆಲೆಯಲ್ಲಿ ಪುಟ್ಟರಾಜು ಕೆಲಸಗಾರ ಪ್ರಕಾಶ್ ಮೇಲೆ ಹಲ್ಲೆ ಸೋಮಶೇಖರ್ ಬೆಂಬಲಿಗರು ಗೂಂಡಾಗಿರಿ ತೋರಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕಾಶ್, ಚಿಕ್ಕಣ್ಣ, ಮಹೇಶ್ ಮತ್ತು ಜೋಗಣ್ಣಗೌಡ ಮೇಲೆ ಕೂಡಾ ಹಲ್ಲೆ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.