
ಬೆಂಗಳೂರು (ನ.20): ರಾಜಕೀಯ ಕಾರಣಕ್ಕಾಗಿ ಪತ್ನಿ ಮತ್ತು ಜನ್ಮ ಕೊಟ್ಟ ಮಗನನ್ನೇ ಕಾಂಗ್ರೆಸ್ ಶಾಸಕರೊಬ್ಬರು ಹೊರದಬ್ಬಿದ್ದಾರೆ. ತಿಪಟೂರು ಶಾಸಕ ಕೆ. ಷಡಕ್ಷರಿ ಮೊದಲನೇ ಹೆಂಡತಿ ಇರುವಾಗಲೇ 2ನೇ ಮದುವೆಯಾಗಿದ್ದಾರೆ. ಆಕೆಯ ಜೊತೆ 5 ವರ್ಷ ಸಂಸಾರ ನಡೆಸಿ ಗಂಡು ಮಗುವನ್ನು ಪಡೆದಿದ್ದಾರೆ. ಈಗ 12 ವರ್ಷದ ಮಗನಿದ್ದಾನೆ. ಬೀದಿಗೆ ತಂದ ಅಪ್ಪನ ವಿರುದ್ಧ 12 ವರ್ಷದ ಮಗ ಕೋರ್ಟ್ ಮೆಟ್ಟಿಲೇರಿದ್ದಾನೆ.
2004 ರಲ್ಲಿ ಮಧು ಎಂಬುವವರನ್ನು ಶಾಸಕ ಷಡಕ್ಷರಿ 2ನೇ ಮದುವೆಯಾಗಿದ್ದರು. 2009 ವರೆಗೂ ಸಂಸಾರ ನಡೆಸಿದ್ದರು. ರಾಜಕೀಯಕ್ಕೆ ತೊಂದರೆಯಾಗುತ್ತದೆ ಅನ್ನೋ ಕಾರಣ ಹೆಂಡತಿಯಿಂದ ದೂರವಾಗಿದ್ದಾರೆ. ಬೇರೊಂದು ಮದುವೆಯಾಗು ಎಂದು ಪತ್ನಿಗೆ ಒತ್ತಡ ಹೇರಿದ್ದಾರೆ ಎನ್ನುವ ಆರೋಪವೂ ಇದೆ.
ಗಂಡ ಷಡಕ್ಷರಿ ಜತೆ ಬಾಳಬೇಕೆಂದು 2ನೇ ಪತ್ನಿ ಮಧು ಪತಿಯ ವಿರುದ್ಧ ಕೌಟುಂಬಿಕ ನ್ಯಾಯಾಲಯದಲ್ಲಿ ದೂರು ನೀಡಿದ್ದಾರೆ. ಕೋರ್ಟ್ ಮೂರು ಬಾರಿ ನೋಟಿಸ್ ಜಾರಿ ಮಾಡಿದರೂ ಷಡಕ್ಷರಿ ಕೋರ್ಟ್ಗೆ ಹಾಜರಾಗಿರಲಿಲ್ಲ. 2018 ಜ. 10ಕ್ಕೆ ವಿಚಾರಣೆಗೆ ಹಾಜರಾಗುವಂತೆ ಕೋರ್ಟ್ ಷಡಕ್ಷರಿಗೆ ನೋಟಿಸ್ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.