
ಬೆಂಗಳೂರು(ಡಿ.01) ಸಚಿವ ಸಂಪುಟ ವಿಸ್ತರಣೆ ಡಿಸೆಂಬರ್ 10 ರೊಳಗೆ ಆಗಬೇಕು. ಇದು ನಮ್ಮೆಲ್ಲ ಶಾಸಕರ ಒತ್ತಾಯವಾಗಿದೆ. ಸಂಪುಟ ವಿಸ್ತರಣೆ ಮಾಡಿ ಅಂತ ನಮ್ಮ ನಾಯಕರಿಗೆ ತಿಳಿಸಿದ್ದೇವೆ ಎಂದು ಶಾಸಕ ಬಿ.ಸಿ.ಪಾಟೀಲ್ ಒತ್ತಾಯ ಮಾಡಿದ್ದಾರೆ.
ಸಂಪುಟ ವಿಸ್ತರಣೆ ಬಗ್ಗೆ ನಾಯಕರು ತೀರ್ಮಾನ ತಗೋತಾರೆ. ನನಗೂ ಸ್ಥಾನ ಸಿಗುವ ವಿಶ್ವಾಸ ಇದೆ. ವಿಸ್ತರಣೆ ಕುರಿತು ಡಿಸೆಂಬರ್ 5 ರ ಸಮನ್ವಯ ಸಮಿತಿ ಸಭೆಯಲ್ಲೂ ಚರ್ಚೆ ಮಾಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಿದ್ದುಗೆ ಜೈ ಎಂದು 6 ತಿಂಗಳ ನಂತರ ಪೋಸ್ಟ್‌ಮಾರ್ಟಂ ಮಾಡಿದ ಎಂಬಿಪಿ
ಕ್ಷೇತ್ರದ ಸಮಸ್ಯೆ ಬಗ್ಗೆ ಮಾತಾಡಲು ಸಿಎಂ ಬಳಿ ಬಂದಿದ್ದೆ. ಸಿಎಂ ಜೊತೆ ನಾನು ಸಂಪುಟ ವಿಸ್ತರಣೆ ಬಗ್ಗೆ ಮಾತಾಡಿಲ್ಲ. ಡಿಸೆಂಬರ್ 8 ರಂದು ಶಾಸಕರ ಸಭೆ ನಡೆಯುತ್ತಿದೆ,. ಸಿಎಂ ಆ ಸಭೆಯಲ್ಲಿ ನಮ್ಮ ಜೊತೆ ಮಾತಾಡಲು ಬಂದ್ರೆ ಒಳ್ಳೆಯದು. ಆಗ ಶಾಸಕರು ತಮ್ಮ ಮನಸಲ್ಲಿ ಇರೋದನ್ನು ಸಿಎಂ ಜೊತೆಯೂ ಹಂಚಿಕೊಳ್ಳಬಹುದು ಎಂದು ಪಾಟೀಲ್ ಹೇಳದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.