ಮೋದಿ ಚಹಾ ಮಾರಾಟ ಟೀಕಿಸಿ ಕಾಂಗ್ರೆಸ್ ಮತ್ತೆ ಎಡವಟ್ಟು

By Suvarna Web DeskFirst Published Nov 22, 2017, 5:49 PM IST
Highlights

ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಾಲ್ಯದಲ್ಲಿ ನಡೆಸುತ್ತಿದ್ದ ಚಹಾ ಮಾರುವ ವೃತ್ತಿಯನ್ನು ಟೀಕಿಸಿ ಕಾಂಗ್ರೆಸ್ ಎಡವಟ್ಟು ಮಾಡಿಕೊಂಡಿತ್ತು. ಈಗ ಮತ್ತೆ ಅಂಥದ್ದೇ ಪ್ರಮಾದವನ್ನು ಅದು ಎಸಗಿದೆ.

ನವದೆಹಲಿ: ಕಳೆದ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಾಲ್ಯದಲ್ಲಿ ನಡೆಸುತ್ತಿದ್ದ ಚಹಾ ಮಾರುವ ವೃತ್ತಿಯನ್ನು ಟೀಕಿಸಿ ಕಾಂಗ್ರೆಸ್ ಎಡವಟ್ಟು ಮಾಡಿಕೊಂಡಿತ್ತು. ಈಗ ಮತ್ತೆ ಅಂಥದ್ದೇ ಪ್ರಮಾದವನ್ನು ಅದು ಎಸಗಿದೆ.

ಯುವ ಕಾಂಗ್ರೆಸ್‌ನ ‘ಯುವ ದೇಶ್’ ಪತ್ರಿಕೆಯು ತನ್ನ ಟ್ವೀಟರ್ ಖಾತೆಯಲ್ಲಿ ಮೋದಿ, ಅಮೆರಿಕ ಅಧ್ಯಕ್ಷ ಟ್ರಂಪ್, ಬ್ರಿಟನ್ ಪ್ರಧಾನಿ ತೆರೆಸಾ ಮೇ ಪರಸ್ಪರ ಹರಟೆ ಹೊಡೆಯುತ್ತಿರುವ ಫೋಟೋವನ್ನು ಪ್ರಕಟಿಸಿದೆ. ‘ನನ್ನ ಬಗ್ಗೆ ವಿಪಕ್ಷಗಳಿಂದ ತುಂಬಾ ಮೆಮೆ (ಟೀಕೆ) ಬರುತ್ತಿವೆ’ ಎಂದು ಮೊದಲು ಮೋದಿ ಹೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸುವ ಟ್ರಂಪ್, ‘ಅದು ಮೆಮೆ ಅಲ್ಲ. ಮೀಮ್’ ಎಂದು ಉಚ್ಚಾರಣೆ ತಿದ್ದುತ್ತಾರೆ. ಮೋದಿ ಅವರ ತಪ್ಪು ಉಚ್ಚಾರಣೆಯ ಬಗ್ಗೆ ಕೊನೆಯದಾಗಿ ವ್ಯಂಗ್ಯವಾಡುವ ಮೇ, ‘ನೀವು ಚಹಾ ಮಾರಲಿಕ್ಕೇ ಲಾಯಕ್ಕು’ ಎಂದು ಉಡಾಫೆ ಮಾಡುತ್ತಾರೆಂದು ಫೋಟೋದಡಿ ಸಂಭಾಷಣೆ ಬರೆಯಲಾಗಿದೆ.

ಮೋದಿ ಅವರ ಚಹಾ ವ್ಯಾಪಾರ ವೃತ್ತಿಯನ್ನು ಮತ್ತೆ ಟೀಕಿಸಿದ ಕಾಂಗ್ರೆಸ್ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ರಾಹುಲ್ ಗಾಂಧಿ ಕ್ಷಮೆ ಕೇಳಲಿ ಎಂದು ಬಿಜೆಪಿ ಆಗ್ರಹಿಸಿದೆ. ವಿವಾದ ತೀವ್ರಗೊಳ್ಳುತ್ತಿದ್ದಂತೆಯೇ ಈ ಟ್ವೀಟನ್ನು ‘ಯುವ ದೇಶ್’ ಅಳಿಸಿ ಹಾಕಿದೆ. ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ ಈ ಬಗ್ಗೆ ಕ್ಷಮೆಯಾಚಿಸಿದ್ದಾರೆ.

click me!