ಕುರ್ಚಿಗಾಗಿ ಮಿರ್ಚಿ ಬಿಟ್ಟುಕೊಂಡ ಕೈ ನಾಯಕರು: ಬಡಿದಾಟ ಕಂಡವರೆಲ್ಲ ನಕ್ಕರು!

Published : May 11, 2019, 06:58 PM IST
ಕುರ್ಚಿಗಾಗಿ ಮಿರ್ಚಿ ಬಿಟ್ಟುಕೊಂಡ ಕೈ ನಾಯಕರು: ಬಡಿದಾಟ ಕಂಡವರೆಲ್ಲ ನಕ್ಕರು!

ಸಾರಾಂಶ

ಕುರ್ಚಿಗಾಗಿ ಎಲ್ಲರೆದುರೇ ಬಡಿದಾಡಿಕೊಂಡ ಕಾಂಗ್ರೆಸ್ ನಾಯಕರು| ಪ್ರತಿಭಾಟನಾ ಸಮಾವೇಶದಲ್ಲಿ ಕೈ ನಾಯಕರ ಜಟಾಪಟಿ| ಕಾಂಗ್ರೆಸ್ ನಾಯಕರಾದ ವಿ. ಹನುಂತ್ ರಾವ್, ನಾಗೇಶ್ ಮುದ್ದಿರಾಜು ನಡುವೆ ಬಡಿದಾಟ| ಹನುಮಂತ್ ರಾವ್ ಕುಳಿತಿದ್ದ ಕುರ್ಚಿ ಮತ್ತೊಬ್ಬರೊಇಗೆ ಕೊಟ್ಟಿದ್ದಕ್ಕೆ ಜಗಳ ಪ್ರಾರಂಭ | ಒಬ್ಬರನ್ನೊಬ್ಬರು ತಳ್ಳಿ ನಗೆಪಾಟಲಿಗೀಡಾದ ನಾಯಕರು|

ಹೈದರಾಬಾದ್(ಮೇ.11): ಕುರ್ಚಿಗಾಗಿ ರಾಜಕೀಯ ನಾಯಕರು ಬಡಿದಾಡಿಕೊಳ್ಳುವುದು ಭಾರತದಲ್ಲಿ ಸಾಮಾನ್ಯ ಸಂಗತಿ ಏನಲ್ಲ ಬಿಡಿ. ಅದರಂತೆ ಟಿಆರ್‌ಎಸ್ ಸರ್ಕಾರದ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಕಾಂಗ್ರೆಸ್ ನಾಯಕರು ಕುರ್ಚಿಗಾಗಿ ಎಲ್ಲರ ಸಮ್ಮುಖದಲ್ಲೇ ಬಡಿದಾಡಿಕೊಂಡ ಘಟನೆ ಹೈದಾರಾಬಾದ್‌ನಲ್ಲಿ ನಡೆದಿದೆ.

ತೆಲಂಗಾಣದ ಹಿರಿಯ ಕಾಂಗ್ರೆಸ್ ನಾಯಕ ವಿ. ಹನುಮಂತ್ ರಾವ್ ಮತ್ತು ನಾಗೇಶ್ ಮುದ್ದಿರಾಜು ಕುರ್ಚಿಗಾಗಿ ಬಡಿದಾಡಿಕೊಂಡಿದ್ದು, ನಾಯಕರ ಜಗಳ ಕಂಡು ನೆರೆದ ಜನಸ್ತೋಮ ನಕ್ಕು ನಕ್ಕು ಸುಸ್ತಾಗಿದ್ದಾರೆ.

ತೆಲಂಗಾಣದ 10ನೇ ತರಗತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಪಕ್ಷಗಳು ಟಿಆರ್‌ಎಸ್ ಸರ್ಕಾರದ ವಿರುದ್ಧ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿದ್ದವು.  ಈ ವೇಳೆ ಮಾತನಾಡಲು ಎದ್ದು ನಿಂತ ವಿ ಹನುಮಂತ್ ರಾವ್ ಅವರ ಕುರ್ಚಿಯನ್ನು ನಾಗೇಶ್ ಮುದ್ದಿರಾಜು ಆ ವೇಳೆ ಬಂದ ಮತ್ತೋರ್ವ ನಾಯಕರಿಗೆ ಕೊಟ್ಟಿದ್ದಾರೆ.

ಇದರಿಂದ ಕೋಪಗೊಂಡ ಹನುಮಂತ್ ರಾವ್, ಕೂಡಲೇ ನಾಗೇಶ್ ಅವರನ್ನು ತಳ್ಳಿ ಹೊಡೆಯಲು ಮುಂದಾಗಿದ್ದಾರೆ. ಇದರಿಂದ ಮುಜುಗರಕ್ಕೀಡಾದ ನಾಗೇಶ್ ಕೂಡ ಹನುಮಂತ್ ರಾವ್ ಮೇಲೆ ಕೈ ಮಾಡಿದ್ದಾರೆ. ಇಬ್ಬರೂ ನಾಯಕರ ಜಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಾಂಗ್ರೆಸ್ ತೀವ್ರ ಮುಜುಗರಕ್ಕೀಡಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೌಡಿಯೊಂದಿಗೆ ಬರ್ತಡೇ ಪಾರ್ಟಿ ಮಾಡಿಕೊಂಡ ಪಿಎಸ್‌ಐ ನಾಗರಾಜ್; ಸಸ್ಪೆಂಡ್ ನೋಟೀಸ್ ಕಳಿಸಿದ ಕಮೀಷನರ್!
ಮಂಡ್ಯ: 'ರಾಮ-ಲಕ್ಷಣ' ನಾಣ್ಯದ ಹೆಸರಲ್ಲಿ ವಂಚನೆಗೆ ಯತ್ನ; ಇಬ್ಬರು ವಂಚಕರಿಗೆ ಬಿತ್ತು ಗೂಸಾ!