ಸಿದ್ದರಾಮಯ್ಯರನ್ನು ಲೋಕಸಭಾ ಕಣಕ್ಕಿಳಿಸಲು ಪ್ಲಾನ್, ಅಚ್ಚರಿ ಮೂಡಿಸಿದ ಕೈ ನಾಯಕರ ಸಭೆ

By Web Desk  |  First Published Mar 9, 2019, 9:53 PM IST

ಕೊಪ್ಪಳಕ್ಕೆ ಸಿದ್ದರಾಮಯ್ಯರನ್ನು ಕಣಕ್ಕಿಳಿಸಲು ಪ್ಲಾನ್ | ಅಚ್ಚರಿ ಮೂಡಿಸಿದ ಕೊಪ್ಪಳ ಜಿಲ್ಲಾ ಕೈ ನಾಯಕರ ಒತ್ತಡ..!


ಬೆಂಗಳೂರು, [ಮಾ.09]: ಸಿದ್ದರಾಮಯ್ಯ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸುವ ಮಾತುಗಳು ರಾಜ್ಯ ರಾಜಕಾರಣದಲ್ಲಿ ಕೇಳಿಬರುತ್ತಿವೆ. ಆದ್ರೆ ಇದನ್ನು ಈಗಾಗಲೇ ಸ್ವತಃ ಸಿದ್ದರಾಮಯ್ಯ ಅವರೇ ತಳ್ಳಿಹಾಕಿದ್ದು, ಇದೀಗ ಆ ಮಾತು ಮತ್ತಷ್ಟು ಜೋರಾಗಿ ಕೇಳಿಬರತೊಡಗಿದೆ.

 ಸಿದ್ದರಾಮಯ್ಯ ಅವರನ್ನು ಕೊಪ್ಪಳದಿಂದ ಲೋಕಸಭಾ ಅಖಾಡಕ್ಕೆ ಇಳಿಸುವ ಪ್ಲಾನ್ ನಡೆದಿದೆ. ಬಿಜೆಪಿ ಆಡಳಿತದಲ್ಲಿರುವ ಕೊಪ್ಪಳ ಕ್ಷೇತ್ರವನ್ನ ಹೇಗಾದ್ರು ಮಾಡಿ ಕಸಿಯಲೇ ಬೇಕು ಎಂದು ಕೈ ಹೈಕಮಾಂಡ್, ಸಿದ್ದರಾಮಯ್ಯರನ್ನು ಕಣಕ್ಕಿಳಿಸಲು ಪ್ಲಾನ್ ಆಫ್ ಆ್ಯಕ್ಷನ್ ಸಿದ್ಧ ಮಾಡಿದೆ ಎನ್ನಲಾಗಿದೆ. ಇದಕ್ಕೆ ಪೂರಕವೆಂಬಂತೆ ಕೊಪ್ಪಳ ಲೋಕಸಭಾ ಕೈ ನಾಯಕರ ಸಭೆ ಪುಷ್ಠಿ ನೀಡಿದೆ.

Tap to resize

Latest Videos

ಅಚ್ಚರಿ ಮೂಡಿಸಿದ ಕೊಪ್ಪಳ ಜಿಲ್ಲಾ ಕೈ ನಾಯಕರ ಒತ್ತಡ..!

ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಸಿದ್ಧರಾಮಯ್ಯರನ್ನು ಕಣಕ್ಕಿಳಿಸಬೇಕು ಅನ್ನೋ ಒತ್ತಡ ಜೋರಾಗಿದೆ.  ಶತಾಯಗತಾಯ ಕೊಪ್ಪಳ ಕ್ಷೇತ್ರವನ್ನು ಕಸಿಯಲು ಮುಂದಾಗಿರುವ ಕಾಂಗ್ರೆಸ್ ನಾಯಕರು, ಹಲವು ವರ್ಷಗಳ ಹಿಂದೆ ಸೋತ ಕ್ಷೇತ್ರದಲ್ಲೇ ಸಿದ್ದರಾಮಯ್ಯರನ್ನು ಕಣಕ್ಕಿಳಿಸಲು ಪ್ಲಾನ್ ಸಿದ್ಧವಾಗಿದೆ. 

ಮಾಜಿ ಸಿಎಂ ಸಿದ್ಧರಾಮಯ್ಯ ನಿವಾಸದಲ್ಲಿ ನಡೆದ ಚರ್ಚೆಯ ವೇಳೆ ಇಂತಹ ಒತ್ತಡ ಜೋರಾಗಿ ವ್ಯಕ್ತವಾಗಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಯಲು ಆಕಾಂಕ್ಷಿಗಳ ಸಂಖ್ಯೆ ಜೋರಾಗಿರುವ ಹಿನ್ನೆಲೆಯಲ್ಲಿ ಸಹಮತದ ನಿರ್ಧಾರ ಕಷ್ಟವಾಗಿದೆ. ಹೀಗಾಗಿ ಸಿದ್ಧರಾಮಯ್ಯನವರೇ ಕಣಕ್ಕಿಳಿದರೆ, ಬೆಂಬಲಿಸೋದಾಗಿ ಕೊಪ್ಪಳ ಟಿಕೇಟ್ ಆಕಾಂಕ್ಷಿಗಳ ಒಗ್ಗಟ್ಟಿನ ಮಾತಾಗಿದೆ.  

ಅಂದಹಾಗೇ ಜನತಾಪರಿವಾರದಲ್ಲಿದ್ದಾಗ ಕೊಪ್ಪಳ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಸೋತಿದ್ದ ಸಿದ್ಧರಾಮಯ್ಯ, ಈ ಬಾರಿ ಅದೇ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರಾ ಅನ್ನೋ ಕುತೂಹಲ ಹೆಚ್ಚಾಗಿದೆ. 

ಜೊತೆಗೆ ಸಿದ್ಧರಾಮಯ್ಯ ಕ್ಷೇತ್ರದಲ್ಲಿ ಕಣಕ್ಕಿಳಿದರೆ, ಉತ್ತರ ಕರ್ನಾಟಕದ ಪ್ರಮುಖ ಕ್ಷೇತ್ರಗಳಲ್ಲಿ ಅನುಕೂಲವಾಗಲಿದೆ ಅನ್ನೋದು ಕಾಂಗ್ರೆಸ್ ಲೆಕ್ಕಾಚಾರ. ಹೀಗಾಗಿ  ಹಿಂದುಳಿದ ವರ್ಗಗಳ ಮತಗಳು ಕ್ರೋಢಿಕರಣವಾಗುವ ಚಿಂತನೆಯಲ್ಲಿರುವ ಕೈ ನಾಯಕರು, ಸಿದ್ಧರಾಮಯ್ಯರನ್ನು ಚುನಾವಣಾ ಕಣಕ್ಕಿಳಿಸುವ ದೂರದೃಷ್ಟಿಯಲ್ಲಿದ್ದಾರೆ. 

ಈ ಬೆಳವಣಿಗೆ ಮಧ್ಯೆ ರಾಜ್ಯದ ಪ್ರಮುಖ ಎರಡು ಹುದ್ದೆಗಳನ್ನು ಹೊಂದಿರುವ ಸಿದ್ಧರಾಮಯ್ಯರನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸುವ ಲೆಕ್ಕಾಚಾರದ ಅನ್ನೋದು ಸಹ ಕುತೂಹಲಕ್ಕೆ ಕಾರಣವಾಗಿದೆ. 

click me!