ತುಮಕೂರು (ಜು.26): ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್-ಜೆಡಿಎಸ್ ನಾಯಕರು ಬಿ.ಎಸ್.ಯಡಿಯೂರಪ್ಪ ಅಧಿಕಾರ ಸ್ವೀಕರಿಸುತ್ತಿರುವುದನ್ನು ತಮ್ಮದೇ ಆದ ಶೈಲಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಸಂಖ್ಯಾಬಲದ ಮೇಲೆ ಬಿಜೆಪಿ ಅಧಿಕಾರಕ್ಕೆ ಬಂದರೂ, ಮುಖ್ಯಮಂತ್ರಿ ಮೇಲೆ ತೂಗುಗತ್ತಿ ತೂಗುತ್ತಲೇ ಇರುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಇನ್ನು ಈ ಬಗ್ಗೆ ಗೊಲ್ಲಹಳ್ಳಿಯಲ್ಲಿ ಮಾತನಾಡಿದ ಮಾಜಿ ಉಪ ಮುಖ್ಯಮಂತ್ರಿ ಡಾ.ಪರಮೇಶ್ವರ್ ಗೊಲ್ಲಹಳ್ಳಿಯಲ್ಲಿ ಇಂದು ಹೊಸ ರಾಜಕೀಯ ನೋಡುತ್ತಿರುವುದಾಗಿ ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್‌ಗೆ ಮತ್ತೆ ಸರ್ಕಾರ ರಚನೆಯ ಅವಕಾಶ?
ಶಾಸಕರನ್ನ ಮನವೊಲಿಸಿ, ಆಸೆ ಆಮಿಷಗಳನ್ನೊಡ್ಡಿ ಅವರನ್ನ ರಾಜೀನಾಮೆ ಕೊಡಿಸಿ ಪಕ್ಷ ಬದಲಾಯಿಸೋ ಘಟನೆಗಳು ನಡೆದಿರಲಿಲ್ಲ. 2008ರಲ್ಲಿ ಬಿಎಸ್‌ವೈ ಕಾಲದಲ್ಲಿ ಇಂಥ ಘಟನೆಗಳು ನಡೆದವು. ಆದರೆ ಇಂದು ಅದಕ್ಕಿಂತಲೂ ಕೆಟ್ಟ ವಾತಾವರಣ ನೊಡುತ್ತಿದ್ದೇವೆ. ಇಂಥಾ ಬೆಳವಣಿಗೆಗಳು ಪ್ರಜಾಪ್ರಭುತ್ವಕ್ಕೆ ಒಳ್ಳೇಯಲ್ಲ ಎಂದರು.
ಬಿಎಸ್‌ವೈ ಅವರನ್ನು ಸಿಎಂ ಮಾಡೋಕೆ ರಾಜ್ಯಪಾಲರು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಮೊದಲನೆಯದಾಗಿ ಅವರಿಗೆ ಶುಭಾಶಯ ಕೋರುತ್ತೇನೆ. ಇಂಥ ಗೊಂದಲಗಳ ನಡುವೆ ಅವರು ಹೇಗೆ ಆಡಳಿತ ಮಾಡುತ್ತಾರೆ ಎನ್ನುವುದನ್ನು ಕಾದು ನೋಡುತ್ತೇವೆ.
ಒಂದು ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದಾದಲ್ಲಿ 111 ಮ್ಯಾಜಿಕ್ ನಂಬರ್ ಬೇಕು. ಆದರೆ ಮೂವರು ಅತೃಪ್ತರು ಅಮಾನತಾಗಿದ್ದು, ಇನ್ನುಳಿದವರ ಭವಿಷ್ಯವೂ ಏನಾಗಲಿದೆ ಎನ್ನುವುದು ತಿಳಿದಿಲ್ಲ ಎಂದು ಎಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.