ವೇದಿಕೆ ಮೇಲೆ ಕೈ ಮುಖಂಡನ ಕೈ ಚಳಕವೀಗ ವೈರಲ್

Published : Aug 18, 2017, 03:15 PM ISTUpdated : Apr 11, 2018, 12:53 PM IST
ವೇದಿಕೆ ಮೇಲೆ ಕೈ ಮುಖಂಡನ ಕೈ ಚಳಕವೀಗ ವೈರಲ್

ಸಾರಾಂಶ

ಸಾರ್ವಜನಿಕ ವೇದಿಕೆಯಲ್ಲಿ ಈ ರೀತಿ ವರ್ತನೆ ತೋರಿರುವುದು, ಕ್ಯಾಮರಾದ ಅಳುಕಿಲ್ಲದೇ ವರ್ತಿಸಿರುವುದು ಕಟು ಟೀಕೆಗೆ ಒಳಗಾಗಿದೆ.

ಕೊಡಗು(ಆ.18): ಸ್ವಾತಂತ್ರೋತ್ಸವದ ಸಮಾರಂಭದಲ್ಲಿ ಕೊಡಗಿನ ಕಾಂಗ್ರೆಸ್ ಮುಖಂಡನೊಬ್ಬ ಮಾಡಿಕೊಂಡ ಎಡವಟ್ಟು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕೊಡಗಿನ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷ ಟಿ.ಪಿ. ರಮೇಶ್ ಕುಮಾರ್ ಘಟನೆಯ ಕೇಂದ್ರ ಬಿಂದುವಾಗಿದ್ದಾರೆ.

ಹೌದು ಈ ಘಟನೆ ನಡೆದದ್ದು ಕೊಡಗಿನ ಜಿಲ್ಲಾಡಳಿತ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಕುಮಾರ್ ತಮ್ಮ ಎಡಬಾಗದಲ್ಲಿ ಕುಳಿತಿದ್ದ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯರ ಕೈ ಮೇಲೆ ಕೈ ಹಾಕುತ್ತಾರೆ. ತಕ್ಷಣ ರಮೇಶ್'ರತ್ತ ನೋಡುವ ವೀಣಾ ಅವರು ಬಲವಂತದಿಂದ ಅವರ ಕೈ ಎತ್ತಿ ಪಕ್ಕಕ್ಕಿಡುವ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ. ಇಬ್ಬರು ಪರಸ್ಪರ ನಗುತ್ತಲೇ ಇದ್ದ ದೃಶ್ಯವೂ ಕೂಡ ಸೆರೆಯಾಗಿದೆ. ವೇದಿಕೆ ಮೇಲೆ ಯೋಜನಾ ಹಾಗೂ ಸಾಂಖ್ಯೆಕ ಸಚಿವ ಸೀತಾರಾಮ್, ಜಿಲ್ಲಾಧಿಕಾರಿ  ಹಾಗೂ ಮುಂತಾದ ಗಣ್ಯರು ಹಾಜರಿದ್ದರೂ ಯಾವುದೇ ಅಳುಕಿಲ್ಲದೇ ಕೈ ಮುಖಂಡ ವಿಧಾನಪರಿಷತ್ ಸದಸ್ಯೆಯ ಕೈ ಸವರಿದ್ದು ಜಿಲ್ಲೆಯಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಸಾರ್ವಜನಿಕ ವೇದಿಕೆಯಲ್ಲಿ ಈ ರೀತಿ ವರ್ತನೆ ತೋರಿರುವುದು, ಕ್ಯಾಮರಾದ ಅಳುಕಿಲ್ಲದೇ ವರ್ತಿಸಿರುವುದು ಕಟು ಟೀಕೆಗೆ ಒಳಗಾಗಿದೆ.

ಹೀಗಿತ್ತು ಆ ಕ್ಷಣ...

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಪಿಎಲ್ ಕಾರ್ಡ್ ಆದಾಯ ಮಿತಿ 1.80 ಲಕ್ಷಕ್ಕೆ ಏರಿಕೆ? ಸಚಿವ ಮುನಿಯಪ್ಪ ಕೊಟ್ಟ ಬಿಗ್ ಅಪ್ಡೇಟ್ ಏನು?
ರೈಲ್ವೆ ಪರೀಕ್ಷೆಯಲ್ಲಿ ಕನ್ನಡ ಕಡೆಗಣನೆಗೆ ಕರವೇ ಕೆಂಡ; ನಾರಾಯಣ ಗೌಡರ ಹೋರಾಟಕ್ಕೆ ಮಣಿದು ಹೊಸ ಅಧಿಸೂಚನೆ ಹೊರಡಿಸಿದ ಇಲಾಖೆ!