ಮೀಸಲಾತಿ ತೆಗೆಯಲು ಹೊರಟಿದ್ದಾರಾ ಮೋದಿ?

By Suvarna Web DeskFirst Published Mar 25, 2018, 5:16 PM IST
Highlights

ನರೇಂದ್ರ ಮೋದಿ ಒಂದು ಅಧಿಸೂಚನೆ ಹೊರಡಿಸಿದ್ದಾರೆ. ಆ ಪ್ರಕಾರ ಇಲಾಖಾವಾರು ಮೀಸಲಾತಿ ತೆಗೆಯುವ ಕೆಲಸ ಮಾಡಲು ಹೊರಟಿದ್ದಾರೆ. ಬಡವರಪರ ಚಿಂತನೆ ಮಾಡೋರು ಈ ರೀತಿ ನಡೆದರೆ ಹೇಗೆ ? ಇಂತವರಿಗೆ ಸಪೋರ್ಟ್ ಮಾಡ್ಬೇಕಾ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು (ಮಾ. 25): ಕೇಂದ್ರದಲ್ಲಿ ಮೋದಿ ಸರ್ಕಾರ ಬಂದ ಮೇಲೆ ಸಂವಿಧಾನ ಬದಲಿಸುವ ಮಾತನ್ನ ಅವರ ನಾಯಕರು,ಸಂಘ ಪರಿವಾರದವರು ಹೇಳುತ್ತಿದ್ದಾರೆ. ಸರ್ದಾರ್  ವಲ್ಲಭಬಾಯಿ ಪಟೇಲ್ ಹಾಗೂ ಅಂಬೇಡ್ಕರ್ ಬಗ್ಗೆ ಬಿಜೆಪಿ ಉತ್ತಮವಾಗಿ ಮಾತಾಡ್ತಾರೆ ಮತ್ತೊಂದೆಡೆ ಸಂವಿಧಾನ ಬದಲಿಸುವ ಮಾತನ್ನ ಹೇಳ್ತಾರೆ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ದೀನದಯಾಳ್ ಉಪಾಧ್ಯಾಯ, ಅಂಬೇಡ್ಕರ್, ಗಾಂಧಿ ಒಂದೇ ಕಡೆ ಇರೋಕೆ ಆಗುತ್ತಾ ? ಇಲ್ಲವೇ ಇಲ್ಲ ಎಂದಿದ್ದಾರೆ. 

ನರೇಂದ್ರ ಮೋದಿ ಒಂದು ಅಧಿಸೂಚನೆ ಹೊರಡಿಸಿದ್ದಾರೆ. ಆ ಪ್ರಕಾರ ಇಲಾಖಾವಾರು ಮೀಸಲಾತಿ ತೆಗೆಯುವ ಕೆಲಸ ಮಾಡಲು ಹೊರಟಿದ್ದಾರೆ. ಬಡವರಪರ ಚಿಂತನೆ ಮಾಡೋರು ಈ ರೀತಿ ನಡೆದರೆ ಹೇಗೆ ? ಇಂತವರಿಗೆ ಸಪೋರ್ಟ್ ಮಾಡ್ಬೇಕಾ ಎಂದು ಪ್ರಶ್ನಿಸಿದ್ದಾರೆ.

click me!