
ದೇವನಹಳ್ಳಿ: ಗಾಂಧೀಜಿ ಅವರ ಮಾತಿನಂತೆ ಬಾಯಿಗೆ ಬೀಗ ಹಾಕ್ಕೊಂಡಿದೀನಿ, ಕಣ್ಣಿಗೆ ಬಟ್ಟೆಕಟ್ಟಿಕೊಂಡಿದ್ದೀನಿ, ಕಿವಿಗೆ ಹತ್ತಿ ಇಟ್ಟುಕೊಂಡಿದ್ದೀನಿ... ಆಸ್ಪ್ರೇಲಿಯಾ ಪ್ರವಾಸ ಮುಗಿಸಿ ಸೋಮವಾರ ತಡರಾತ್ರಿ ಬೆಂಗಳೂರಿಗೆ ಮರಳಿದ ಟ್ರಬಲ್ ಶೂಟರ್ ಖ್ಯಾತಿಯ ಕಾಂಗ್ರೆಸ್ ನಾಯಕ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತು.
ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನದಿಂದ ಹೊರಬರುತ್ತಿದ್ದಂತೆ ತಮ್ಮನ್ನು ಮುತ್ತಿದ ಮಾಧ್ಯಮ ಮಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆಲ್ಲಾ ಗೊತ್ತಾಗಿದೆ. ಎಲ್ಲಾ ಮಾಹಿತಿ ದೊರೆತಿದೆ. ಆದರೆ, ರಾಜ್ಯದ ಮತ್ತು ಮಂಡ್ಯದ ಚುನಾವಣಾ ಫಲಿತಾಂಶ ಬಗ್ಗೆ ನಾನೇನೂ ಮಾತಾಡುವುದಿಲ್ಲ ಎಂದರು.
ಆಸ್ಪ್ರೇಲಿಯಾ ಪ್ರವಾಸದಲ್ಲಿದ್ದಾಗ ಫೇಸ್‌ಬುಕ್, ಟ್ವೀಟರ್, ವಾಟ್ಸಾಪ್ ಯಾವುದನ್ನೂ ಬಳಸಲಿಲ್ಲ. ಎಲ್ಲದರಿಂದಲೂ ದೂರವಿದ್ದೆ. ಆದರೆ, ಲೋಕಸಭಾ ಚುನಾವಣೆ ಫಲಿತಾಂಶದ ಮಾಹಿತಿ ನನಗೆ ಕಾಲಕಾಲಕ್ಕೆ ತಿಳಿಯುತ್ತಿತ್ತು ಎಂದೂ ಅವರು ತಿಳಿಸಿದರು.
ಲೋಕಸಭಾ ಚುನಾವಣೆ ಹಾಗೂ ಕುಂದಗೋಳ-ಚಿಂಚೋಳಿ ಉಪಚುನಾವಣೆ ಮುಗಿಯುತ್ತಿದ್ದಂತೆ ಡಿಕೆಶಿ ಕುಟುಂಬಸಮೇತರಾಗಿ ಆಸ್ಪ್ರೇಲಿಯಾ ಪ್ರವಾಸಕ್ಕೆ ತೆರಳಿದ್ದರು. ರಾಜ್ಯದಲ್ಲಿ ದಿನಕ್ಕೊಂದು ರಾಜಕೀಯ ಬೆಳವಣಿಗೆ ಸಂಭವಿಸುತ್ತಿದ್ದರೂ ಚುನಾವಣಾ ಫಲಿತಾಂಶ ಸಂದರ್ಭ ಅವರು ವಿದೇಶ ಪ್ರವಾಸದಲ್ಲಿಯೇ ಇದ್ದರು ಎಂಬುದು ಇಲ್ಲಿ ಗಮನಾರ್ಹ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.