ಪಕ್ಕಾ ಆಯ್ತು ಈ 2 ಪಕ್ಷಗಳ ನಡುವಿನ ಮೈತ್ರಿ

First Published Jul 8, 2018, 8:19 AM IST
Highlights

ಈ 2 ಪಕ್ಷಗಳು ಮೈತ್ರಿ ಮಾಡಿಕೊಂಡು ಮುಂದಿನ ಚುನಾವಣೆ ಎದುರಿಸುವುದು ಪಕ್ಕಾ ಆಗಿದ್ದು, ಈ ನಿಟ್ಟಿನಲ್ಲಿ ತಯಾರಿಯಲ್ಲಿ ತೊಡಗಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿಯೊಂದಿಗೆ ಚುನಾವಣೆ ಎದುರಿಸಲಾಗುವುದು. ಈಗಾಗಲೇ ಉಭಯ ಪಕ್ಷಗಳ ಮುಖಂಡರ ಮಾತುಕತೆ ನಡೆದಿದ್ದು, ಒಪ್ಪಿಗೆಯೂ ದೊರೆತಿದೆ ವೀರಪ್ಪ ಮೋಯ್ಲಿ ಹೇಳಿದ್ದಾರೆ.

ಚಿಕ್ಕಬಳ್ಳಾಪುರ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮೈತ್ರಿಯೊಂದಿಗೆ ಚುನಾವಣೆ ಎದುರಿಸಲಾಗುವುದು. ಈಗಾಗಲೇ ಉಭಯ ಪಕ್ಷಗಳ ಮುಖಂಡರ ಮಾತುಕತೆ ನಡೆದಿದ್ದು, ಒಪ್ಪಿಗೆಯೂ ದೊರೆತಿದೆ. ಅಲ್ಲದೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ತಾವೇ ಅಭ್ಯರ್ಥಿ ಎಂದು ಸಂಸದ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ. ಕಳೆದ ಸಲ ಚಿಕ್ಕಬಳ್ಳಾಪುರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸ್ಪರ್ಧಿಸಿದ್ದರು. ಈ ಹಿನ್ನೆಲೆಯಲ್ಲಿ ಮೊಯ್ಲಿ ಹೇಳಿಕೆಗೆ ಮಹತ್ವ ಬಂದಿದೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್‌ ರಾಜ್ಯದ ಎಲ್ಲ ಭಾಗಗಳ ಸಮಗ್ರ ಅಭಿವೃದ್ಧಿಯ ಚಿಂತನೆ ಹೊಂದಿದೆ. ಕೇವಲ ಆಯವ್ಯಯ ಭಾಷಣ ಕೇಳಿ ಅನ್ಯಾಯವಾಗಿದೆ ಎಂದು ಆರೋಪ ಮಾಡುವುದು ಸರಿಯಲ್ಲ. ಬಜೆಟ್‌ಗೆ ಸಂಬಂಧಿಸಿದಂತೆ ಇರುವ ಎಲ್ಲ ದಾಖಲೆಗಳನ್ನು ಪರಿಶೀಲಿಸಿದರೆ ರಾಜ್ಯದ ಯಾವುದೇ ಭಾಗಕ್ಕೂ ಅನ್ಯಾಯವಾಗಿಲ್ಲ ಎಂಬುದು ಅರಿವಾಗುತ್ತದೆ ಎಂದರು.

ಎತ್ತಿನಹೊಳೆ ಯೋಜನೆ ಅನುಷ್ಠಾನ ವಿಚಾರದಲ್ಲಿ ಕಳೆದ 10 ವರ್ಷಗಳಿಂದ ವೀರಪ್ಪ ಮೊಯ್ಲಿ ಸುಳ್ಳು ಹೇಳುತ್ತಲೇ ಕಾಲ ದೂಡಿದ್ದಾರೆ ಎಂಬ ಆರೋಪದ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ವೀರಪ್ಪ ಮೊಯ್ಲಿ ಸಿಡಿಮಿಡಿಗೊಂಡರು. ಹೌದು, ಕಳೆದ 10 ವರ್ಷಗಳಿಂದ ಸುಳ್ಳು ಹೇಳಿದ್ದೇನೆ. ಈಗ ಹೇಳಿರುವುದೂ ಎಲ್ಲ ಸುಳ್ಳೇ ಎಂದು ಖಾರವಾಗಿ ಉತ್ತರಿಸಿದರು.

click me!