ಬಿಜೆಪಿ ಕಿತ್ತಾಟದಿಂದ ಕಾಂಗ್ರೆಸ್'ನಲ್ಲಿ ಸಂತಸ

By Suvarna Web DeskFirst Published Apr 28, 2017, 6:21 AM IST
Highlights

ರಾಜ್ಯದಲ್ಲಿ ಆಡಳಿತ ವಿರೋಧಿ ಹವಾ ಎದ್ದಿದೆ, ನಮ್ಮ ಪರ ಮೋದಿ ಹವಾ ಹಾಗೂ ಯಡಿಯೂರಪ್ಪ ಮೋಡಿ ಕೆಲಸ ಮಾಡಲಿದೆ. ಹೀಗಾಗಿ ಮುಂದಿನ ಬಾರಿ ಅಧಿಕಾರಕ್ಕೆ ಬರುವುದು ನಾವೇ ಎಂಬ ಕೆಚ್ಚಿನಲ್ಲಿದ್ದ ಬಿಜೆಪಿ ಪಾಳೆಯದ ಅಗ್ರೇ ಸರರು ಈಗ ಶರಂಪರ ಜಗಳ ಆರಂಭಿಸಿರುವುದು ಕಾಂಗ್ರೆಸ್‌ ವಲಯದಲ್ಲಿ ಭಾರಿ ಸಂತೋಷದ ಅಲೆ ಎಬ್ಬಿಸಿದೆ.

ಬೆಂಗಳೂರು(ಎ.28): ರಾಜ್ಯದಲ್ಲಿ ಆಡಳಿತ ವಿರೋಧಿ ಹವಾ ಎದ್ದಿದೆ, ನಮ್ಮ ಪರ ಮೋದಿ ಹವಾ ಹಾಗೂ ಯಡಿಯೂರಪ್ಪ ಮೋಡಿ ಕೆಲಸ ಮಾಡಲಿದೆ. ಹೀಗಾಗಿ ಮುಂದಿನ ಬಾರಿ ಅಧಿಕಾರಕ್ಕೆ ಬರುವುದು ನಾವೇ ಎಂಬ ಕೆಚ್ಚಿನಲ್ಲಿದ್ದ ಬಿಜೆಪಿ ಪಾಳೆಯದ ಅಗ್ರೇ ಸರರು ಈಗ ಶರಂಪರ ಜಗಳ ಆರಂಭಿಸಿರುವುದು ಕಾಂಗ್ರೆಸ್‌ ವಲಯದಲ್ಲಿ ಭಾರಿ ಸಂತೋಷದ ಅಲೆ ಎಬ್ಬಿಸಿದೆ.

ಬಿಜೆಪಿ ಸಾರಾಸಗಟಾಗಿ ಮೇಲ್ವರ್ಗವನ್ನು ತನ್ನೆ ಡೆಗೆ ಸೆಳೆಯಲಿದೆ. ತನ್ಮೂಲಕ ಕಾಂಗ್ರೆಸ್‌'ಗೆ ಮುಂದಿನ ಬಾರಿ ಕಷ್ಟವಾಗುತ್ತದೆ ಎಂದೇ ಬಿಂಬಿಸಲಾಗುತ್ತಿತ್ತು. ಬಿಜೆಪಿ ನಾಯಕರಂತೂ ಮುಂದಿನ ಸರ್ಕಾರ ತಮ್ಮದೇ ಎಂಬಂತೇ ಸಾರ್ವಜನಿಕ ವರ್ತನೆ ಆರಂಭಿಸಿದ್ದರು. ಇದರ ಪರಿಣಾಮವಾಗಿ ಕಾಂಗ್ರೆಸ್‌ ಗಂಭೀರವಾಗಿ ಸಮಾಜದ ವಿವಿಧ ಜಾತಿ ವರ್ಗಗಳ ಮನವೊಲಿಕೆಗೆ ಮುಂದಾಗಿತ್ತು. ಬಸವಣ್ಣ ಜಯಂತಿಯಂ ತಹ ಕ್ರಮಗಳ ಮೂಲಕ ಸರ್ಕಾರ ಮೇಲ್ವರ್ಗದ ವಿರುದ್ಧವಿಲ್ಲ ಎಂಬ ಸಂದೇಶ ನೀಡಲು ಯತ್ನಿಸುತ್ತಿತ್ತು. ಜತೆಗೆ, ಕಾಂಗ್ರೆಸ್‌'ನಲ್ಲಿನ ಆಂತರಿಕ ಭಿನ್ನಾಭಿಪ್ರಾಯವನ್ನು ಶಮನಗೊಳಿ​ಸುವ, ಮುನಿದ ನಾಯಕರ ಮನವೊಲಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿತ್ತು.

ಇಷ್ಟಾದರೂ ಬಿಜೆಪಿ ಪ್ರಭಾವ ಎದುರಿಸಲು ಸಾಧ್ಯವಾಗುವುದಿಲ್ಲ, ಜಾತ್ಯತೀತ ಮತಗಳನ್ನು ಒಗ್ಗೂಡಿಸದೇ ಕಮಲ ಪಕ್ಷವನ್ನು ಮಣಿಸುವುದು ಕಷ್ಟಎಂದು ಅರಿತಿದ್ದರು. ಇದರ ಫಲವಾಗಿಯೇ ನಂಜನಗೂಡು ಹಾಗೂ ಗುಂಡ್ಲು ಪೇಟೆಯಲ್ಲಿ ಜೆಡಿಎಸ್‌ನ ಪರೋಕ್ಷ ಬೆಂಬಲ ಪಡೆದ ಕಾಂಗ್ರೆಸ್‌ ಜಯಭೇರಿ ಬಾರಿಸಿತು. ಈ ಸಂಬಂಧವನ್ನು ಮುಂದಿನ ಚುನಾವಣೆಯಲ್ಲೂ ಮುಂದುವರೆಸುವ ಉಮೇದಿ ಕಾಂಗ್ರೆಸ್‌ಗೆ ಇದೆ. ಈ ಸಮಯದಲ್ಲೇ ಬಿಜೆಪಿಯ ಆಂತರಿಕ ಕಲಹ ಬೀದಿಗೆ ಬಿದ್ದಿದೆ. ಸಹಜವಾಗಿಯೇ ಈ ಬೆಳವಣಿಗೆ ಬಿಜೆಪಿಯ ವರ್ಚಸ್ಸಿಗೆ ಭಾರಿ ಧಕ್ಕೆ ಉಂಟು ಮಾಡಲಿದೆ. 

click me!