ನೋಟು ಅಮಾನ್ಯ ಕ್ರಮದ ವಿರುದ್ಧ ಕಾಂಗ್ರೆಸ್’ನಿಂದ ಘೆರಾವ್ ಆರ್'ಬಿಐ ಪ್ರತಿಭಟನೆ

By Suvarna Web DeskFirst Published Jan 18, 2017, 11:17 AM IST
Highlights

ನೋಟು ಅಮಾನ್ಯ ಕ್ರಮ ಬಳಿಕ ಹೇರಲಾಗಿರುವ ವಿತ್’ಡ್ರಾವಲ್ ಮಿತಿಯನ್ನು ಹಿಂಪಡೆಯಬೇಕು ಹಾಗೂ ನಗದು-ರಹಿತ ವ್ಯವಹಾರಗಳಿಗೆ ಶುಲ್ಕವನ್ನು ವಿಧಿಸಭಾರದೆಂದು ಕಾಂಗ್ರೆಸ್ ಪಕ್ಷವು ಸರ್ಕಾರವನ್ನು ಆಗ್ರಹಿಸಿದೆ.

ನವದೆಹಲಿ (ಜ.18): ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮದ ವಿರುದ್ಧ ಕಾಂಗ್ರೆಸ್ ಪಕ್ಷ ಇಂದು ‘ಜನ-ವೇದನೆ’ ಪ್ರತಿಭಟನಾ ಅಭಿಯಾನಕ್ಕೆ ಚಾಲನೆ ನೀಡಿದೆ.

ವಿವಿಧ ರಾಜ್ಯಗಳಲ್ಲಿರುವ ರಿಸರ್ವ್ ಬ್ಯಾಂಕ್ ಕಚೇರಿಯನ್ನು ಘೆರಾವ್ ಮಾಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ನೋಟು ಅಮಾನ್ಯ ಕ್ರಮ ಬಳಿಕ ಹೇರಲಾಗಿರುವ ವಿತ್’ಡ್ರಾವಲ್ ಮಿತಿಯನ್ನು ಹಿಂಪಡೆಯಬೇಕು ಹಾಗೂ ನಗದು-ರಹಿತ ವ್ಯವಹಾರಗಳಿಗೆ ಶುಲ್ಕವನ್ನು ವಿಧಿಸಭಾರದೆಂದು ಕಾಂಗ್ರೆಸ್ ಪಕ್ಷವು ಸರ್ಕಾರವನ್ನು ಆಗ್ರಹಿಸಿದೆ.

ಪ್ರತಿಭಟನಾ ನಿರತ ಸುಶೀಲ್ ಕುಮಾರ್ ಶಿಂಧೆ, ಶಂಕರ್ ಸಿಂಗ್ ವಾಘೆಲಾ ಮುಂತಾದ ಕಾಂಗ್ರೆಸ್ ನಾಯಕರನ್ನು ಗುಜರಾತ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಾಗಪುರದಲ್ಲಿ ಪ್ರತಿಭಟನೆಯು ಹಿಂಸಾರೂಪಕ್ಕೆ ತಿರುಗಿದ್ದರಿಂದ ಪರಿಸ್ಥಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಯೋಗ ಮಾಡಿದ್ದಾರೆ.

click me!